Thu. Dec 26th, 2024

Pune: ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ದುರಂತವಾಗಿ ಸಾವನ್ನಪ್ಪಿದ ಕುಸ್ತಿಪಟು!!

ಪುಣೆ:(ಡಿ.6) ಪುಣೆಯ 30 ವರ್ಷದ ಕುಸ್ತಿಪಟು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ದುರಂತವಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ⭕ಮಂಗಳೂರು: ಮುಮ್ತಾಝ್ ಅಲಿ ಕೇಸ್

ಮೃತ ಕುಸ್ತಿಪಟು ವಿಕ್ರಮ್ ಪರ್ಖಿ ಕುಸ್ತಿ ಲೋಕದಲ್ಲಿ ಚಿರಪರಿಚಿತರಾಗಿದ್ದರು. ಮುಳಶಿ ತಾಲೂಕಿನ ಮಾನದಲ್ಲಿ ವಾಸವಿದ್ದ ಅವರು ಬುಧವಾರ ಬೆಳಗ್ಗೆ ತಾಲೀಮು ನಿಮಿತ್ತ ಮಾನದಲ್ಲಿರುವ ಜಿಮ್‌ಗೆ ತೆರಳಿದ್ದರು.

ವ್ಯಾಯಾಮ ಮಾಡುವಾಗ, ವಿಕ್ರಮ್ ಪರ್ಖಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್ ಚಿಕಿತ್ಸೆ ಪಡೆಯುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ವಿಕ್ರಮ್ ಪರ್ಖಿ ಅವರು ಮಾಜಿ ಸೈನಿಕ ಶಿವಾಜಿರಾವ್ ಪರ್ಖಿ ಅವರ ಪುತ್ರ ಮತ್ತು ಯುವ ನಾಯಕ ಬಾಬಾಸಾಹೇಬ್ ಪರ್ಖಿ ಅವರ ಸಹೋದರ.

Leave a Reply

Your email address will not be published. Required fields are marked *