ಪುತ್ತೂರು:(ಡಿ.6)ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅರ್ಪಿಸುವ ಸೆವೆಂಟಿ ಸೆವೆನ್ ಸ್ಟುಡಿಯೋಸ್ ರಾಘವೇಂದ್ರ ಕುಡ್ವರವರ ನಿರ್ಮಾಣದ “ದಸ್ಕತ್” ತುಳು ಚಲನಚಿತ್ರ ಡಿ.13ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಇದನ್ನೂ ಓದಿ: ಮಂಗಳೂರು: ಥೈಲ್ಯಾಂಡ್‌ನಲ್ಲಿ ಅರಳಿದ ಪ್ರೇಮಕಥೆ
ಪ್ರಕೃತಿಯ ಸೊಬಗನ್ನು, ಗ್ರಾಮೀಣ ಪ್ರದೇಶದ ಬದುಕುಗಳನ್ನು ಇದ್ದಂತೆ ನ್ಯಾಚುರಲ್ ಆಗಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ಚಿತ್ರದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜೇಶ್ ಶೆಟ್ಟಿ, ಕಾರ್ಯ ನಿರ್ವಹಿಸಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆಯವರ ಛಾಯಾಗ್ರಹಣವಿರುವ ದಸ್ಕತ್ ಚಿತ್ರಕ್ಕೆ ಗಣೇಶ್ ನೀರ್ಚಾಲ್ ರವರ ಸಂಕಲನವಿದ್ದು, ಸಮರ್ಥನ್ ಎಸ್ ರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ವಿಭಿನ್ನ ಚಿತ್ರದಲ್ಲಿ ದೀಕ್ಷಿತ್ ಕೆ ಅಂಡಿಂಜೆ, ನೀರಜ್ ಕುಂಜರ್ಪ, ಮೋಹನ್ ಶೇಣಿ, ಮಿಥುನ್ ರಾಜ್, ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ, ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್, ತಿಮ್ಮಪ್ಪ ಕುಲಾಲ್, ಯೋಗಿಶ್ ಶೆಟ್ಟಿ ,ಚೇತನ್ ಪಿಲಾರ್ ಹೀಗೆ ಇನ್ನೂ ಅನೇಕ ತಾರಗಣವಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನಾಯಕ ನಟಿ ಭವ್ಯ ಪೂಜಾರಿ, ಮೋಹನ್ ಶೇಣಿ, ನಿರ್ದೇಶನ ತಂಡದ ನಿತೀಶ್ ಶೆಟ್ಟಿ, ತರುಣ್ ಶರಣ್ ಉಪಸ್ಥಿತರಿದ್ದರು.