ಪುತ್ತೂರು:(ಡಿ.6) ನಾಪತ್ತೆಯಾದ ಪಡ್ಡಾಯೂರು ನಿವಾಸಿ ವಿವೇಕಾನಂದ ಕಾಲೇಜಿನ ನಿವೃತ್ತ ಸಿಬ್ಬಂದಿ ನಂದಕುಮಾರ್ (68 ವ) ಎಂಬವರ ಮೃತ ದೇಹ ಡಿ.6 ರಂದು ಬೆಳಗ್ಗೆ ರೋಟರಿಪುರ ಸಾಮೆತ್ತಡ್ಕ ನಡುವೆ ತೋಡಿನ ಬದಿಯಲ್ಲಿ ಪತ್ತೆಯಾಗಿದೆ.
ನಂದಕುಮಾರ್ ಅವರು ಡಿ. 5 ರಂದು ಮನೆಯಿಂದ ಪುತ್ತೂರು ಪೇಟೆಗೆ ಬಂದಿದ್ದರು. ಹಾಗೆ ಬರುವಾಗ ಸಂಬಂಧಿಕರೊಬ್ಬರಿಗೆ ಸುಮಾರು ರೂ.1 ಲಕ್ಷ ನಗದನ್ನು ನೀಡಲೆಂದು ಬಂದಿದ್ದರು.
ಇದೀಗ ಅವರ ಮೃತ ದೇಹ ತೋಡಿನ ಬದಿಯಲ್ಲಿ ಪತ್ತೆಯಾಗಿದೆ. ಇದೊಂದು ಹಣಕ್ಕಾಗಿ ನಡೆದ ಕೊಲೆ ಆಗಿರಬಹುದೆಂದು ಹೇಳಲಾಗುತ್ತಿದೆ.
ನಗರ ಠಾಣೆ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.