ಪುತ್ತೂರು:(ಡಿ.6) ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ಇರುವ ದತ್ತಪೀಠದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ವರ್ಷಂಪ್ರತಿ ನಡೆಯುವ
ಇದನ್ನೂ ಓದಿ: ಪುತ್ತೂರು: ಡಿ.13ಕ್ಕೆ ದಸ್ಕತ್ ತುಳು ಚಲನಚಿತ್ರ ಬಿಡುಗಡೆ
ದತ್ತ ಜಯಂತಿ 2024 ಅಂಗವಾಗಿ ಡಿ.6ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ನಗರ ಪ್ರಖಂಡ ವತಿಯಿಂದ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ದತ್ತಮಾಲಧಾರಾಣೆ ಅಭಿಯಾನವನ್ನು ಬಜರಂಗದಳ ಪುತ್ತೂರು ನಗರ ಸಂಯೋಜಕ ಜಯಂತ್ ಕುಂಜೂರುಪಂಜ ಅವರ ನೇತೃತ್ವದಲ್ಲಿ ಪ್ರಾರಂಭಿಸಿದರು.
ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ ಅವರು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು. ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ,
ವಿಶ್ವ ಹಿಂದೂ ಪರಿಷದ್ ಪುತ್ತೂರು ನಗರ ಪ್ರಖಂಡ ಕಾರ್ಯದರ್ಶಿ ಜಿತೇಶ್ ಬಲ್ನಾಡ್, ಪ್ರಖಂಡ ಸೇವಾ ಪ್ರಮುಖ್ ಹರೀಶ್ ದೋಳ್ವಾಡಿ, ಜೀವನ್ ಬಲ್ನಾಡ್, ಧನರಾಜ್ ಬೆಳ್ಳಿಪ್ಪಾಡಿ. ಸಂಜಯ್ ಕುಪ್ಪೆಟ್ಟಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.