Thu. Dec 26th, 2024

ಮೇಷ ರಾಶಿ: ಹಲವರಿಂದ ಹೇಳಿದ್ದನ್ನೇ ಹೇಳಿಸಿಕೊಳ್ಳಬೇಕಾಗುವುದು. ಎಂತಹ ಎತ್ತರವನ್ನೇ ಏರಿದರೂ ನಿಮ್ಮ ಮೂಲ ಸ್ಥಾನದ ಬಗ್ಗೆ ಪ್ರೀತಿ ಇರಲಿ. ಹಣಕಾಸಿನ ವಿಷಯದಲ್ಲಿ ನೀವು ಎಷ್ಟೇ ಎಚ್ಚರದಿಂದ ಇದ್ದರೂ ವ್ಯಯವಾಗುವ ಸಾಧ್ಯತೆ ಹೆಚ್ಚು ಇರಲಿದೆ. ನಿಮ್ಮ ಸ್ಥಿರಾಸ್ತಿಯ ಮಾರಾಟಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಮನಸ್ಸಿನ ನೋವಿಗೆ ಮದ್ದರೆಯಲಾಗದು. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ.

ವೃಷಭ ರಾಶಿ: ವಿದೇಶೀ ವ್ಯವಹಾರದಲ್ಲಿ ತೊಡಗುವ ಅವಕಾಶ ಸಿಗುವುದು. ನಿಮ್ಮ ಸಂಧಾನದ ಮಾತುಗಳು ನಿಷ್ಫಲವಾಗಬಹುದು.ಆರ್ಥಿಕ ವಿಚಾರವಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ವಿದೇಶ ಪ್ರಯಾಣಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳುವಿರಿ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಇಂದು ಅವಕಾಶಗಳು ಸಿಗುವುದು. ನಿಮಗೆ ಆಗದ ಕಾರ್ಯಕ್ಕೆ ಬದಲಿ ವ್ಯವಸ್ಥೆ ಮಾಡುವಿರಿ. ಇನ್ನೊಬ್ಬರ ಕ್ಷೇಮವನ್ನು ವಿಚಾರಿಸಿ ಅವರ ಜೊತೆ ಭಾಗಿಯಾಗುವಿರಿ.

ಮಿಥುನ ರಾಶಿ: ಕೊಡಬೇಕಾದ ಹಣವನ್ನು ನೀಡಿ ನಂಬಿಕೆಯನ್ನು ಉಳಿಸಿಕೊಳ್ಳುವಿರಿ. ಅನಿರೀಕ್ಷಿತ ಕೊಡುಗೆಗಳಿಂದ ನಿಮಗೆ ಸಂತೋಷವಾಗಲಿದೆ. ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಪಾಲುದಾರಿಕೆಯಲ್ಲಿ ಕಲಹವು ಶುರುವಾಗಬಹುದು. ಯಂತ್ರಗಳ ಮಾರಾಟದಿಂದ ಹೆಚ್ಚಿನ ಲಾಭಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು.

ಕರ್ಕಾಟಕ ರಾಶಿ: ಸ್ನೇಹದಿಂದ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಕಾರ್ಯದ ಕೌಶಲ್ಯತೆಯು ಸಹೋದ್ಯೋಗಿಗಳಿಗೆ ಇಷ್ಟವಾಗುವುದು. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಒತ್ತಡದ ಕಾರಣಕ್ಕೆ ಸಿಟ್ಟಾಗುವಿರಿ. ವ್ಯರ್ಥ ಓಡಾಟದಿಂದ ಬೇಸರವಾಗುವುದು. ನಿಮ್ಮ ಇಂದಿನ ತುರ್ತು ಕಾರ್ಯಗಳನ್ನು ಮುಂದೂಡುವಿರಿ. ಲಾಭ ಬರುವ ಕಾರ್ಯದಲ್ಲಿ ಮಾತ್ರ ಇಚ್ಛೆಯು ಇರುವುದು. ಮನಸ್ಸಿನ ಚಾಂಚಲ್ಯವನ್ನು ಧ್ಯಾನದಿಂದ ಸರಿ ಮಾಡಿಕೊಳ್ಳಿ.

ಸಿಂಹ ರಾಶಿ: ಇಂದು ಅಪರಿಚಿತರ ಜೊತೆ ವಿವಾದವನ್ನು ಮಾಡಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಮಕ್ಕಳಿಂದ ನಿಮಗೆ ಕೀರ್ತಿಯು ಪ್ರಾಪ್ತವಾಗುವುದು. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಅಧಿಕಾರವು ಸಿಗಬಹುದು. ಪರಿಚಿತರ ವಿವಾಹಕ್ಕೆ ಓಡಾಟ ಮಾಡಿ ಸಫಲರಾಗುವಿರಿ. ನಿಮ್ಮ ಸಂಪತ್ತಿನ ರಹಸ್ಯವನ್ನು ಮೈಮರೆತು ಹೇಳುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ವಾಹನವನ್ನು ಸರಿ ಮಾಡಿಸಲು ಹಣವು ಖರ್ಚಾಗಲಿದೆ.

ಕನ್ಯಾ ರಾಶಿ: ನಿಮ್ಮ ಸಣ್ಣ ಬದಲಾವಣೆಯು ಪ್ರೀತಿಪಾತ್ರರ ಅರಿವಿಗೆ ಬರುವುದು. ವಿದ್ಯಾರ್ಥಿಗಳು ಕಲಿತದ್ದನ್ನೇ ಕಲಿಯಬೇಕಾದ ಅನಿವಾರ್ಯತೆ ಬಂದೀತು. ಅಧಿಕಾರ ತಪ್ಪುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ಭೂಮಿಯ ವ್ಯವಹಾರದಲ್ಲಿ ತೊಡಗಿಕೊಳ್ಳುವಿರಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ನಿಮ್ಮ ಸುತ್ತ ಅಂತಹ ವಾತಾವರಣವು ಇರುವುದು.

ತುಲಾ ರಾಶಿ: ಯಾರಾದರೂ ಜವಾಬ್ದಾರಿಯನ್ನು ವಹಿಸಬಹುದು. ನೀವು ಯಾವ ಮಾತನ್ನು ಒಮ್ಮೆಲೆ ನಂಬುವುದಿಲ್ಲ. ರಾಜಕೀಯವಾಗಿ ಇರುವವರು ಹಿನ್ನಡೆಯನ್ನು ಅನುಭವಿಸಬೇಕಾದೀತು. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡುವಿರಿ. ರಾಜಕೀಯವಾಗಿ ಹಿನ್ನಡೆಯನ್ನು ಅನುಭವಿಸುವರು. ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳಬೇಕಾದೀತು. ಸಿಟ್ಟಾಗುವ ಸಂದರ್ಭದಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳಿ.

ವೃಶ್ಚಿಕ ರಾಶಿ: ನೀವು ಉದ್ಯೋಗವನ್ನು ಇಂದು ಗಂಭೀರವಾಗಿ ಸ್ವೀಕರಿಸುವಿರಿ‌. ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು.‌ ವೃತ್ತಿಯಲ್ಲಿ ನಿಮಗೆ ಆಕಸ್ಮಿಕ ಪ್ರಶಂಸೆಯಿಂದ ಅಚ್ಚರಿಗೊಳ್ಳುವಿರಿ. ನಿಮ್ಮ ಗೌರವಕ್ಕೆ ಧಕ್ಕೆ ಬರುವ ಮಾತನ್ನು ನೀವು ಸಹಿಸಲಾರಿರಿ. ವಾಮಮಾರ್ಗದಿಂದ ಹಣವನ್ನು ಸಂಪಾದಿಸುವ ಮನಸ್ಸು ಇರಲಿದೆ. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು. ಬಾಲ್ಯದ ನೆನಪುಗಳು ನಿಮ್ಮನ್ನು ಕಾಡುವುದು.

ಧನು ರಾಶಿ: ದೊಡ್ಡ ಕಾರ್ಯದಲ್ಲಿ ಸಣ್ಣ ತಪ್ಪುಗಳು ಆಗಬಹುದು. ಅದನ್ನು ಸರಿಮಾಡಿಕೊಳ್ಳಬೇಕು. ಚಾಣಾಕ್ಷತನದಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ‌ಮಾಡುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವುದು. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ನಿಮ್ಮ ಮಾತಿಗೆ ಇಂದು ವಿರೋಧವು ಉಂಟಾಗುವುದು.

ಮಕರ ರಾಶಿ: ಇಂದು ಸ್ವಂತಿಕೆಯನ್ನು ನೀವು ಯಾವ ಸನ್ನಿವೇಶದಲ್ಲಿಯೂ ಬಿಟ್ಟುಕೊಡಲಾರಿರಿ. ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ. ಅದೃಷ್ಟದ ಪರೀಕ್ಷೆಯು ಆಗಬಹುದು. ಪ್ರತಿಭೆಯ ಪ್ರದರ್ಶನಕ್ಕೆ ಉತ್ತಮ ಅವಕಾಶವು ಸಿಗುವುದು. ಅದೃಷ್ಟದ ಕಾರಣ ವಂಚನೆಯಿಂದ ಜಾರಿಕೊಳ್ಳುವಿರಿ. ಅಜಾಗರೂಕತೆಯಿಂದ ನಿಮಗೆ ನಷ್ಟ ಮಾಡಿಕೊಳ್ಳುವಿರಿ. ಅಧಿಕ ಆಲೋಚನೆಯಿಂದ ಮನಸ್ಸು ದುರ್ಬಲವಾಗುವುದು.

ಕುಂಭ ರಾಶಿ: ಇಂದು ನಿಮಗೆ ಆತ್ಮೀಯರ‌ ಒಡನಾಡ ಅಧಿಕವಾಗಲಿದೆ. ಸಾಹಿತ್ಯಾಸಕ್ತರಿಗೆ ಹೆಚ್ಚು ಅನುಕೂಲಕರ ವಾತಾವರಣವು ಇರುವುದು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ನಿಮ್ಮ ಆಕರ್ಷಕ ರೂಪಕ್ಕೆ ಮನವು ಸೋಲಬಹುದು. ಪರರ ದುಃಖಕ್ಕೆ ಆಸರೆಯಾಗುವಿರಿ. ಬರುವ ಯೋಜನೆಗಳನ್ನು ಸಕಾರಾತ್ಮಕವಾಗಿ ಪಡೆಯುವಿರಿ. ಆನಂದದಿಂದ ಈ ದಿನವನ್ನು ಕಳೆಯಬೇಕು ಎನಿಸುವುದು.‌ ಅನಿರೀಕ್ಷಿತ ಪ್ರಯಾಣದಿಂದ ಸುಖವಿರಲಿದೆ.‌ ನಿಮ್ಮ ವಿವಾಹದ ಮಾತುಕತೆ ವಿಳಂಬವಾಗಿ‌ದೆ ಎಂದು ಬೇಸರ ಆಗಬಹುದು.

ಮೀನ ರಾಶಿ: ಇಂದು ವ್ಯವಹಾರದಲ್ಲಿನ ಸೂಕ್ಷ್ಮ ವಿಚಾರಗಳನ್ನು ವೇಗವಾಗಿ ಅರಿತುಕೊಳ್ಳಬೇಕು. ಮನೆಯಲ್ಲಿ ನಿಮಗೆ ನಿರಾಶೆಯ ಅನುಭವ ಆಗಬಹುದು. ಇಂದು ನಿಮ್ಮ ಸ್ವಭಾವವು ಕಾರಣಾಂತರದಿಂದ ಉಗ್ರವಾಗಿರಲಿದೆ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ನೀವು ಇಂದು ಅತಿಥಿಯಾಗಿ ಭಾಗವಹಿಸುವಿರಿ. ನಿಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳುವುದು ಉತ್ತಮ. ನಿಮ್ಮಿಂದಾಗಿ ಮನೆಯಲ್ಲಿ‌ ಇಂದು ಸಂತೋಷವು ಇರಲಿದೆ. ‌ಕಳೆದ ದಿನಗಳನ್ನು ಒಂದೊಂದಾಗಿಯೇ ಮೆಲುಕು ಹಾಕಿಕೊಂಡು ಹಂಚಿಕೊಳ್ಳುವಿರಿ. ಬರಬೇಕಾದ ಹಣವು ವಿಳಂಬವಾಗುವುದು.

Leave a Reply

Your email address will not be published. Required fields are marked *