Chaitra Kundapura:(ಡಿ.7) ಕನ್ನಡ ಬಿಗ್ ಬಾಸ್ ಫೈರ್ ಬ್ರ್ಯಾಂಡ್ ಚೈತ್ರ ಕುಂದಾಪುರ ಅವರು ಇದೀಗ ಜೈಲು ಪಾಲಾಗಿದ್ದಾರೆ. ಮೊನ್ನೆ ತಾನೇ ಜಾಮೀನು ಅರ್ಜಿ ವಿಚಾರಣೆ ಇದ್ದ ಹಿನ್ನಲೆಯಲ್ಲಿ ಬಿಗ್ ಬಾಸ್ ಮನೆಯಿಂದಲೇ ಅವರು ಕೋರ್ಟ್ ಗೂ ಹೋಗಿದ್ದರು.
ಈ ಬೆನ್ನಲ್ಲೇ ಅವರು ಜೈಲು ಪಾಲಾಗಿದ್ದಾರೆ. ಜೈಲೆಂದರೇ ನಿಜವಾದ ಜೈಲಲ್ಲ ಕಂಡ್ರಿ.. ಬಿಗ್ ಬಾಸ್ ಮನೆ ಒಳಗೆ ಕಳಪೆ ಪಟ್ಟಕೊಟ್ಟು ಕಳುಹಿಸುವ ಜೈಲಿಗೆ ಹೋಗಿದ್ದಾರೆ.
ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರು ಉತ್ತಮ ಪ್ರದರ್ಶನ ನೀಡುವುದಿಲ್ಲವೋ ಆ ಸ್ಪರ್ಧಿಗೆ ಕಳಪೆ ಪಟ್ಟವನ್ನು ನೀಡಿ ಜೈಲು ಪಾಲು ಮಾಡುವುದು ವಾಡಿಕೆ. ಅಂತೆಯೇ ಈ ವಾರ ಕಳಪೆ ಪಟ್ಟ ಹೊತ್ತು ಚೈತ್ರ ಅವರು ಬಿಗ್ ಬಾಸ್ ನ ಜೈಲಿಗೆ ಹೋಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಬಿಗ್‌ಬಾಸ್ ಬಿಟ್ಟರೆ ಜೋರಾಗಿ ಮಾತನಾಡುವವರು ಅಂದರೆ ಅದು ಚೈತ್ರಾ ಕುಂದಾಪುರ. ತಮ್ಮ ಖಡಕ್ ಮಾತು, ಜೋರು ಧ್ವನಿಗೆ ಚೈತ್ರಾ ಬಿಗ್‌ಬಾಸ್ ಮನೆಯಲ್ಲಿ ಭಾರೀ ಫೇಮಸ್ ಆಗಿದ್ದಾರೆ.
ಇತ್ತೀಚಿಗೆ ಚೈತ್ರಾ ಮನೆಯ ಎಲ್ಲಾ ಸದಸ್ಯರೊಂದಿಗೆ ಜಗಳವಾಡುತ್ತಾ ಟಾರ್ಗೆಟ್ ಆಗಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೂ ಏರು ಧ್ವನಿಯಲ್ಲಿ ಕೂಗಾಡಿ ಮನೆಯ ಇತರ ಸದಸ್ಯರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಚೈತ್ರಾ ಸದ್ಯ ಜೈಲಿಗೆ ಹೋಗಿದ್ದಾರೆ.