Thu. Dec 26th, 2024

Mangaluru : ಹಿಂದೂ ಹೆಸರನ್ನಿಟ್ಟುಕೊಂಡು ಮಹಿಳೆ ಜೊತೆ ಸ್ನೇಹ – ಮಹಿಳೆ ವಾಸವಿದ್ದ ಮನೆಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ.!! – ಸ್ಥಳೀಯರಿಂದ ಬಿತ್ತು ಗೂಸಾ!!

ಮಂಗಳೂರು :(ಡಿ.7) ಹಿಂದೂ ಯುವತಿ ಮತ್ತು ಮಹಿಳೆ ವಾಸವಿದ್ದ ಮನೆಗೆ ಮುಸ್ಲಿಂ ಯುವಕನೊಬ್ಬ ನುಗ್ಗಿ ಕಿರುಕುಳ ಹಾಗೂ ಹಲ್ಲೆ ನಡೆಸಿದ ಘಟನೆ ಕುಲಶೇಖರದಲ್ಲಿ ನಡೆದಿದೆ.

ಇದನ್ನೂ ಓದಿ: Chaitra Kundapura: ಬಿಗ್ ಬಾಸ್ ನಿಂದ ಸೀದಾ ಜೈಲಿಗೆ ಹೋದ ಚೈತ್ರಾ ಕುಂದಾಪುರ

ಮನೆಗೆ ನುಗ್ಗಿದ ಆರೋಪಿಯನ್ನು ಸೈಯದ್ ನಹೀಮ್ (25) ಎಂದು ಗುರುತಿಸಲಾಗಿದೆ.

ಈತ ಮಹಿಳೆಗೆ ರವಿ ಎಂಬ ಹೆಸರಿನಲ್ಲಿ ಒಂದು ವರ್ಷದ ಹಿಂದೆ ಪರಿಚಯವಾಗಿದ್ದು ಆಗಾಗ ಮಹಿಳೆ ಮನೆಗೆ ಬರುತ್ತಿದ್ದ ಎನ್ನಲಾಗಿದೆ. ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರವೂ ಇತ್ತೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಡಿ.06 ಶುಕ್ರವಾರ ಬೆಳಿಗ್ಗೆ ಬಂದಿದ್ದ ಯುವಕ ಮಹಿಳೆ ಮತ್ತು ಮಹಿಳೆಯ ಅಕ್ಕನ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಇದರಿಂದ ಮಹಿಳೆ ಮತ್ತು ಯುವಕನ ಮಧ್ಯೆ ಗಲಾಟೆ ನಡೆದಿದೆ.

ಮಾಹಿತಿ ಪಡೆದ ಸ್ಥಳೀಯರು ಬಂದು ಯುವಕನನ್ನು ಹಿಡಿದು ಧರ್ಮದೇಟು ನೀಡಿ ವಿಚಾರಿಸಲಾಗಿ ಆತನೊಬ್ಬ ಮುಸ್ಲಿಂ ಹೆಸರು ಸೈಯದ್ ನಹೀಮ್ (25) ಶಿವಮೊಗ್ಗದವ ಎಂದು ಬಾಯ್ಬಿಟ್ಟಿದ್ದಾನೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಯುವಕಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಂಕನಾಡಿ ನಗರ ಠಾಣಾ ಪೊಲೀಸರು ಆರೋಪಿ ಸೈಯದ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.

ಈತ ಹಿಂದೂ ಹೆಸರಿನಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡು ವ್ಯವಹರಿಸುತ್ತಿರುವುದು ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಇಂತಹ ಘಟನೆಗಳು ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದು, ಸದ್ಯ ಈ ರೀತಿಯ ಘಟನೆ ಮಂಗಳೂರಿನಲ್ಲಿ ಮತ್ತೆ ಮತ್ತೆ ಬೆಳಕಿಗೆ ಬರುತ್ತಿವೆ. ಘಟನೆ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *