ಉಜಿರೆ(ಡಿ. 7): ಬಂಗಾಡಿಯ ಇಂದಬೆಟ್ಟು (ಕಲ್ಲಾಜೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಉಜಿರೆ ಶ್ರೀ ಧ. ಮಂ. ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದಲ್ಲಿ ಎರಡನೇ ದಿನ ಶ್ರಮದಾನಕ್ಕೆ ಚಾಲನೆ ದೊರೆಯಿತು.
ಇದನ್ನೂ ಓದಿ: ಮಂಗಳೂರು: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರಿಂದ ಶಾಲಾ – ಕಾಲೇಜುಗಳಿಗೆ ಖಡಕ್ ಸೂಚನೆ!!
ಇಂದಬೆಟ್ಟು ಗ್ರಾಮದ ಪ್ರಗತಿಪರ ಕೃಷಿಕ ಗಣೇಶ್ ಗೌಡ ಅವರು ತೆಂಗಿನಕಾಯಿ ಒಡೆಯುವ ಮೂಲಕ ಶ್ರಮದಾನ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಲಕರಣೆಗಳಿಗೆ ಪೂಜೆ ಸಲ್ಲಿಸಲಾಯಿತು. ಗಣ್ಯರು ಮೂರು ಅಡಿಕೆ ಸಸಿಗಳನ್ನು ನೆಟ್ಟರು.
ಕೃಷಿಕರಾದ ಹರೀಶ್ ಕಲ್ಲಾಜೆ, ಆನಂದ ಕೊಪ್ಪದಕೋಡಿ, ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್., ಪ್ರೊ. ದೀಪ ಆರ್. ಪಿ., ಶಿಬಿರಾಧಿಕಾರಿಗಳಾದ ಅಮಿತ್ ಕುಮಾರ್ ಮತ್ತು ಶೃತಿ ಮಣಿಕೀಕರ್ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ಸ್ವಯಂಸೇವಕಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು.