ಉಜಿರೆ (ಡಿ.7): ಆಳ್ವಾಸ್ ಸೆಂಟ್ರಲ್ ಸ್ಕೂಲ್ ಮೂಡಬಿದರೆಯಲ್ಲಿ ಡಿ.5 ರಂದು ಆಯೋಜಿಸಿದ್ದ ಸೈನ್ಸ್ ಸೊಸೈಟಿ ಆಫ್ ಇಂಡಿಯಾ (ಎಸ್‌ಎಸ್‌ಐ) ವತಿಯಿಂದರ ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ (ಐಎನ್‌ಎಸ್ ಇಎಫ್) 2024-25 ಪ್ರಾದೇಶಿಕ ಮಟ್ಟದ ಸ್ಪರ್ಧೆಯಲ್ಲಿ 10 ನೇ ತರಗತಿಯ ಅಧೀಶ್ ಬಿ.ಸಿ ಮತ್ತು ಆಲಾಪ್.ಎಂ ಭಾಗವಹಿಸಿ ಚಿನ್ನದ ಪದಕವನ್ನು ಪಡೆದುಕೊಂಡು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Kerala: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ನಟ ದಿಲೀಪ್ ಗೆ ವಿಐಪಿ ಟ್ರೀಟ್ ಮೆಂಟ್
ಈ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮತ್ತು ಸೈನ್ಸ್ ಸೊಸೈಟಿ ಆಫ್ ಇಂಡಿಯಾದ ತೀರ್ಪುಗಾರ ನಾರಾಯಣ ಅಯ್ಯರ್ ರವರು ಅಭಿನಂದಿಸಿದರು.
“ಕೃಷಿ ತ್ಯಾಜ್ಯಗಳು ಮತ್ತು ಕಳೆಗಳಿಗೆ ಮೌಲ್ಯವರ್ಧನೆ” ಎಂಬ ಶೀರ್ಷಿಕೆಯ ಯೋಜನೆಯನ್ನು ಪ್ರಸ್ತುತ ಪಡಿಸಿದ್ದರು. ಇವರಿಗೆ ಶಿಕ್ಷಕಿ ಧನ್ಯವತಿ ಕೆ ಮಾರ್ಗದರ್ಶನ ನೀಡಿರುತ್ತಾರೆ.