ಬಂಟ್ವಾಳ:(ಡಿ.8) ಮಕ್ಕಳ ಅತ್ಯುತ್ತಮ ಸಾಹಸಮಯ ಪ್ರದರ್ಶನ ನೋಡಿದ ಬಳಿಕ ಭಾಷಣವೇ ಬೇಕಿಲ್ಲವಾಗಿದ್ದು ಆದರೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿ, ವೇದಿಕೆಯಲ್ಲಿ ಕೂರಿಸಿದ ಬಳಿಕ ಒಂದೆರೆಡು ಮಾತುಗಳನ್ನು ಆಡಬೇಕಿದ್ದು, ಅ ದೃಷ್ಟಿಯಿಂದ ನನ್ನ ಮಾತುಗಳನ್ನು ಮಂಡಿಸುತ್ತಿದ್ದೇನೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ್ ಡಾ| ಮೋಹನ್ ಜೀ ಭಾಗವತ್ ಹೇಳಿದರು.

ಇದನ್ನೂ ಓದಿ: Ullala: ಗ್ಯಾಸ್ ಸಿಲಿಂಡರ್ ಸ್ಪೋಟ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವ 2024 ಕಾರ್ಯಕ್ರಮವನ್ನು ಶ್ರೀ ರಾಮ ದೇವರಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಭಾರತವು ಇತ್ತೀಚೆಗಷ್ಟೇ ಹೊಸ ಶಿಕ್ಷಣ ನೀತಿಯನ್ನು ಪರಿಚಯಿಸಿದ್ದು, ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಈ ಹಿಂದೆಯೇ ಅದೇ ಮಾದರಿಯ ಶಿಕ್ಷಣ ಜಾರಿಯಲ್ಲಿದ್ದು, ಇಂತಹ ಅದ್ಬುತ ಕಲ್ಪನೆಯನ್ನು ಮೂಡಿಸಿದ ವಿದ್ಯಾಸಂಸ್ಥೆಯ ಸಂಸ್ಥಾಪಕರು, ಸಂಚಾಲರು ಹಾಗೂ ವಿದ್ಯಾಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.



ಸರ್ವರ ವಿಕಾಸ, ಸಮಗ್ರ ವಿಕಾಸ ದೃಷ್ಟಿಯಿಂದ ಪಂಚಯೋಚನೆಗಳನ್ನು ಅಳವಡಿಸಿಕೊಂಡು ಹೊಸ ಶಿಕ್ಷಣ ನೀತಿಯು ಅನುಷ್ಠಾನಗೊಳ್ಳುತ್ತಿದೆ.
ಶಿಕ್ಷಿತ ಮನುಷ್ಯ ತನ್ನ ಪರಿವಾರ ಸಲಹುವ ಜೊತೆಗೆ ಅನ್ಯರಿಗೆ ಜ್ಞಾನವನ್ನು ನೀಡಲು ಅದನ್ನು ಬಳಸಬೇಕಿದೆ ಎಂದು ಅವರು ತಿಳಿಸಿದರು.
ಪುಸ್ತಕ ಓದಿನ ಜೊತೆ ಎಲ್ಲರನ್ನೂ ಪ್ರೀತಿಸುವ ಗುಣವೂ ಅಗತ್ಯವಾಗಿದೆ ಎಂದು ತಿಳಿಸಿದರು.
ದೇಶದ ಸಂಸ್ಕೃತಿಯ ಜೊತೆಗೆ ದುರ್ಬಲರ ಶ್ರೇಯೋಭಿವೃದ್ದಿಗೆ ಶಿಕ್ಷಣ ಬಳಕೆಯಾಗಬೇಕಿದೆ ಎಂದರು. ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಮನುಷ್ಯನನ್ನು ವಿಚಾರ ಪೂರ್ವಕ ವ್ಯಕ್ತಿಯನ್ನಾಗಿಸಲು ಉತ್ಕೃಷ್ಟ ಮಟ್ಟದ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ, ಪುತ್ತೂರು ವಿವೇಕಾನಂದ ಕಾಲೇಜಿನ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಜಗತ್ತಿನ ಹಿಂದೂಗಳ ನಾಯಕ ಡಾ| ಮೋಹನ್ ಜೀ ಭಾಗವತ್ ಎಂದು ಅವರು ಹೇಳಿದರು.
ಇದು ಭಾಗ್ಯ ,ಇದು ಭಾಗ್ಯ…ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ ಎಂದು ಮೋಹನ್ ಜೀ ಭಾಗವತರ ಆಗಮನದ ಖುಷಿಯನ್ನು ಹಂಚಿಕೊಂಡರು. ಶಿಕ್ಷಣ ಸಂಸ್ಥೆಗೆ ಮಾರ್ಗದರ್ಶನ ನೀಡುವುದು ನಮ್ಮ ಪುಣ್ಯ ಎಂದು ತಿಳಿಸಿದರು.
