ಬೆಳ್ತಂಗಡಿ:(ಡಿ.8) ಬೆಳ್ತಂಗಡಿ ತಾಲೂಕಿನ ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ಯಾಡಿಯ ಮಾಲ್ದಂಡ ಎಂಬ ಪರಿಸರದಲ್ಲಿ ಚಿರತೆಯೊಂದರ ಓಡಾಟದ ದೃಶ್ಯ ಕಂಡು ಬಂದಿದೆ.
ಇದನ್ನೂ ಓದಿ: Kavalkatte: ಕಣಜ ಹುಳಗಳ ದಾಳಿ
ಇಲ್ಲಿನ ಸ್ಥಳೀಯ ನಿವಾಸಿಯಾಗಿರುವ ಸಂಜೀವ ಗೌಡ ಎಂಬವರ ಮನೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಡಿಸೆಂಬರ್ .7 ರಂದು ಚಿರತೆ ಓಡಾಡಿರುವ ದೃಶ್ಯ ಸೆರೆಯಾಗಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಹಲವು ಕೋಳಿಗಳು, ಸಾಕು ನಾಯಿಗಳು ಕಾಣೆಯಾಗುತ್ತಿದ್ದವು. ಈ ಬಗ್ಗೆ ಅನುಮಾನ ಬಂದು ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಗ್ರಾಮದಲ್ಲಿ ಚಿರತೆಗಳು ಓಡಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದರಿಂದ ಇಲ್ಲಿನ ನಿವಾಸಿಗಳು ಭಯದಿಂದ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅರಣ್ಯ ಇಲಾಖೆಯವರು ತಮಗೆ ರಕ್ಷಣೆ ನೀಡಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.