Thu. Dec 26th, 2024

Gujarat: ಕೈದಿಯ ಗುದನಾಳದಲ್ಲಿ ಪತ್ತೆಯಾದ ಮೊಬೈಲ್ ಫೋನ್ – ಎಕ್ಸ್ ರೇ ನೋಡಿ ಬೆಚ್ಚಿಬಿದ್ದ ಪೋಲಿಸರು!!

ಗುಜರಾತ್‌:(ಡಿ.8) ಫೋಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿಯೊಬ್ಬನ ವಿಚಿತ್ರ ವರ್ತನೆ ಗಮನಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Chikkamagaluru: ಇಬ್ಬರು ಮಕ್ಕಳಾದ ಮೇಲೂ ಸಿಗದ ಸುಖ

ಪರೀಕ್ಷೆಯ ಒಳಪಡಿಸಿದ ವೈದ್ಯರು ಎಕ್ಸ್ ರೇ ಕಂಡು ಬೆಚ್ಚಿ ಬಿದ್ದಿದ್ದಾರೆ. ಎಕ್ಸ್ ರೇ ವರದಿಯಲ್ಲಿ ಕೈದಿಯ ಗುದನಾಳದಲ್ಲಿ ಮೊಬೈಲ್ ಫೋನ್ ಇರುವುದು ಕಂಡುಬಂದಿದೆ. ಈ ಘಟನೆ ಗುಜರಾತ್‌ನ ಭಾವನಗರ ಜೈಲಿನಲ್ಲಿ ನಡೆದಿದೆ.

ರವಿ ಬಾರಯ್ಯ (33) ಎಂಬ ಕೈದಿಯನ್ನು ಫೋಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಅಕ್ಟೋಬರ್ 19 ರಿಂದ ಗುಜರಾತ್‌ನ ಭಾವನಗರ ಜಿಲ್ಲಾ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ. ಜೈಲಿನೊಳಗೆ ಮೊಬೈಲ್ ಫೋನ್‌ಗಳನ್ನು ಬಳಸುವಂತಿಲ್ಲ. ಆದರೆ ಡಿಸೆಂಬರ್ 4 ರಂದು ಕಾರಾಗೃಹಕ್ಕೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಮೊಬೈಲ್ ಫೋನ್ ಚಾರ್ಜರ್ ಪತ್ತೆಯಾದಾಗ ಅಧಿಕಾರಿಗಳಿಗೆ ಅನುಮಾನ ಬಂದಿದೆ.

ಎಲ್ಲಾ ಕಡೆ ಹುಡುಕಾಡಿದರೂ ಫೋನ್ ಸಿಗದಿದ್ದಾಗ ಬಾರಯ್ಯನ ವಿಚಿತ್ರ ವರ್ತನೆ ಕಂಡು ಪೊಲೀಸರು ಅನುಮಾನಗೊಂಡು ಆತನ ಸೆಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಫೋನ್ ಪತ್ತೆಯಾಗಿಲ್ಲ. ಆದಾಗ್ಯೂ, ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಎಕ್ಸ್ ರೇ ತೆಗೆಯಲಾಯಿತು. ಸ್ಕ್ಯಾನ್ ಮಾಡಿದಾಗ ಗುದದ್ವಾರದಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ. ಇದರಿಂದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಘಟನೆಯ ಬಗ್ಗೆ ಜೈಲು ಅಧಿಕಾರಿಗಳು ದೂರು ನೀಡಿದಾಗ, ಕೈದಿಗಳ ಕಾಯ್ದೆಯ ಬಿಎನ್‌ಎಸ್ 223, ಸೆಕ್ಷನ್ 42, 43 ಮತ್ತು 45(12) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿಷೇಧಿತ ಮೊಬೈಲ್ ಫೋನ್ ಮತ್ತು ಚಾರ್ಜರ್ ಅನ್ನು ಜೈಲಿಗೆ ತಂದವರು ಯಾರು? ರವಿ ಎಷ್ಟು ಸಮಯದಿಂದ ಫೋನ್ ಬಳಸುತ್ತಿದ್ದ ಎಂದು ಜೈಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *