Fri. Dec 27th, 2024

Udupi: 23 ದಿನಗಳಿಂದ ರಕ್ಷಿಸಿಡಲಾಗಿದ್ದ ಅನಾಥ ಶವದ ಅಂತ್ಯಸಂಸ್ಕಾರ

ಉಡುಪಿ(ಡಿ.8): ಕಳೆದ 23 ದಿನಗಳಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಸುರಕ್ಷಿತವಾಗಿ ರಕ್ಷಿಸಿಡಲಾಗಿದ್ದ, ಅಪರಿಚಿತ ಶವದ ಅಂತ್ಯಸಂಸ್ಕಾರವು ದಫನ ನಿಯಮದಂತೆ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಪೋಲಿಸರ ಸಮಕ್ಷಮ ನಡೆಸಲಾಯಿತು.

ಇದನ್ನೂ ಓದಿ: ಉಜಿರೆ: ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಮಲ್ಪೆ ಕಡಲತೀರದ ಸೀವಾಕ್ ಬಳಿ ಅಪರಿಚಿತ ಗಂಡಸಿನ ಶವವು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಾರಸುದಾರರ ಪತ್ತೆಗಾಗಿ ಮಾಧ್ಯಮಗಳಲ್ಲಿ ಪ್ರಕಟಣೆ ನೀಡಲಾಗಿತ್ತು. ಸಮಯಮಿತಿ ಕಳೆದರೂ ವಾರಸುದಾರರು ಸಂಪರ್ಕಿಸದೆ ಇರುವುದರಿಂದ‌ ಕಾನೂನಿನಂತೆ ದಫನ ಮಾಡಲಾಯಿತು.

ಅಂತ್ಯಸಂಸ್ಕಾರವು ಸಮಾಜಸೇವಕ ನಿತ್ಯಾನಂದ ಒಳಕಾಡುವರ‌ ನೇತೃತ್ವದಲ್ಲಿ ನಡೆಯಿತು.‌ ಜಿಲ್ಲಾಸ್ಪತ್ರೆಯ ಡಾ. ರಮೇಶ್ ಕುಂದರ್ ಮರಣೋತ್ತರ‌ ಪರೀಕ್ಷೆ‌ ನಡೆಸಿದರು. ಮಲ್ಪೆ ಪೋಲಿಸ್ ಠಾಣೆಯ ಎ. ಎಸ್. ಐ ವಿಶ್ವನಾಥ್, ಹಾಗೂ ನಾಗರಾಜ್ ಕಾನೂನು ಪ್ರಕ್ರಿಯೆ ನಡೆಸಿದರು. ಸತೀಶ್ ಕುಮಾರ್, ಹರೀಶ್ ಪೂಜಾರಿ, ವಿಕಾಸ್ ಶೆಟ್ಟಿ, ಪ್ಲವರ್ ವಿಷ್ಣು, ನಗರಸಭೆ, ಸಹಕರಿಸಿದರು.

Leave a Reply

Your email address will not be published. Required fields are marked *