Sun. Dec 29th, 2024

Ujire: ಉಜಿರೆ, ಬೆಳಾಲು ಮತ್ತು ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ

ಉಜಿರೆ:(ಡಿ.8) ಉಜಿರೆ, ಬೆಳಾಲು ಮತ್ತು ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ ನಡೆಯಿತು.

ಇದನ್ನೂ ಓದಿ: ಬಂಟ್ವಾಳ: ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪಿಕಪ್

ಸುತ್ತುಪೌಳಿಯ ಮತ್ತು ತೀರ್ಥಮಂಟಪದ ಹಂಚಿನ ಛಾವಣಿಯ ಮರಗಳು ಶಿಥಿಲವಾಗಿರುವುದರಿಂದ ಮಾಡಿನ ಹಂಚುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು.

ಗ್ರಾಮಸ್ಥರ ಸಹಕಾರದೊಂದಿಗೆ 2025 ಇಸವಿಯ ಫೆಬ್ರವರಿ ನಲ್ಲಿ ನಡೆಯುವ ಬ್ರಹ್ಮಕಲಶದ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಇದರ ಭಾಗವಾಗಿ ಶ್ರಮದಾನ ಮಾಡಲಾಯಿತು.

ಇನ್ನೂ ಹೆಚ್ಚಿನ ಶ್ರಮದಾನದ ಅಗತ್ಯವಿರುವುದರಿಂದ ಆಸುಪಾಸಿನ ಆಸಕ್ತ ಸಂಘಟನೆಗಳ ಸಹಕಾರ ಬೇಕಾಗಿದೆ ಎಂದು ಇಲ್ಲಿಯ ಕೆಲಸಗಳ ಉಸ್ತುವಾರಿಯನ್ನು ವಹಿಸಿರುವ ಉಮೇಶ್ ರವರು ಈ ಸಮಯದಲ್ಲಿ ವಿನಂತಿಸಿದರು. ಆಸಕ್ತ ಶ್ರಮದಾನಿಗಳು ಸಂಪರ್ಕಿಸಬೇಕಾದ ಸಂಖ್ಯೆ – 9480055522.

Leave a Reply

Your email address will not be published. Required fields are marked *