Fri. Dec 27th, 2024

Bantwal: ಹೃದಯಘಾಕ್ಕೊಳಗಾದ ವ್ಯಕ್ತಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಜೀವ ಉಳಿಸಿದ ಪ್ರದೀಪ್ ನಾಯಕ್ ರವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

ಬಂಟ್ವಾಳ:(ಡಿ.9) ಹೃದಯಘಾಕ್ಕೊಳಗಾದ ವ್ಯಕ್ತಿಯೋರ್ವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಿದ ಕಾರಣದಿಂದ ಅಪಾಯದಿಂದ ಪಾರಾದ ಘಟನೆ ನಡೆದಿದ್ದು, ಚಿಕಿತ್ಸೆ ಒದಗಿಸಿದವರು ಸಾರ್ವಜನಿಕವಾಗಿ ಪ್ರಶಂಸೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ: ಮಣಿಪಾಲ : ರಸ್ತೆ ಬದಿ ಕೆಟ್ಟು ನಿಂತ ಲಾರಿಗೆ ಬೈಕ್ ಡಿಕ್ಕಿ


ಮಂಗಳೂರು ಕೆ.ಎಂ.ಸಿ.ಆಸ್ಪತ್ರೆಯ ಸಿಬ್ಬಂದಿ ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ಅವರು ಸಕಾಲದಲ್ಲಿ ಚಿಕಿತ್ಸೆ ಒದಗಿಸಿದ್ದು ಹೃದಯಘಾತಕ್ಕೊಳಗಾದ ಬೆಳ್ತಂಗಡಿ ತಾಲೂಕಿನ ಅಳಕೆ ನಿವಾಸಿ ಮಿಥುನ್ ಅವರು ಸಾವಿನಿಂದ ಪಾರಾಗಿದ್ದಾರೆ.

ಮಿಥುನ್ ಅವರು ಲಘು ಹೃದಯಘಾತಕ್ಕೊಳಗಾಗಿದ್ದು, ಅವರ ಇಸಿಜಿ ರಿಪೋರ್ಟ್ ನ್ನು ಅವರ ಸಂಬಂಧಿಕರು ಪ್ರದೀಪ್ ನಾಯಕ್ ಕಳುಹಿಸಿದ್ದರು. ಈ ವರದಿಯನ್ನು ಪ್ರದೀಪ್ ನಾಯಕ್ ಅವರು ಖ್ಯಾತ ಹೃದಯತಜ್ಞ ಡಾ| ಪದ್ಮನಾಭ ಕಾಮತ್ ಅವರಿಗೆ ಕಳುಹಿಸಿದ್ದರು.


ವರದಿಯನ್ನು ನೋಡಿ ಕಾಮತ್ ಅವರು ತಕ್ಷಣವೇ ರೋಗಿಯನ್ನು ಮಂಗಳೂರು ಆಸ್ಪತ್ರೆಗೆ ಕರೆತರಲು ಸೂಚಿಸಿದ್ದರು. ಅದರಂತೆ ಉಪ್ಪಿನಂಗಡಿ ಬಳಿಯ ತಣ್ಣೀರುಪಂತ ಅಳಕೆಯಿಂದ ಮಿಥುನ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಮಂಗಳೂರಿಗೆ ಬರುತ್ತಿದ್ದರು. ಇದೇ ವೇಳೆ ಪ್ರದೀಪ್ ನಾಯಕ್ ಅವರು ತನ್ನ ಮನೆಯಿಂದ ಬಸ್ಸಿನಲ್ಲಿ ಹೊರಟಿದ್ದರು.


ಮಿಥುನ್ ಅವರು ಪುಂಜಾಲಕಟ್ಟೆ ಕಳೆದು ಸಾಗುತ್ತಿರುವಾಗ ಅವರಿಗೆ ಎದೆನೋವು ತೀವ್ರವಾಯಿತು. ಈ ವಿಚಾರ ತಿಳಿದ ಪ್ರದೀಪ್ ನಾಯಕ್ ಅವರು ವಗ್ಗ ಬಳಿ ಬಸ್ಸಿನಿಂದ ಇಳಿದು, ಮಿಥುನ್ ಅವರಿಗಾಗಿ ಕಾದಿದ್ದರು. ಅವರ ಬಳಿ ಹೃದಯಾಘಾತ ವಾದ ಕೂಡಲೇ ಅಗತ್ಯವಾಗಿ ನೀಡಬೇಕಾದ ಔಷಧಿಯನ್ನು ಇರಿಸಿಕೊಂಡಿದ್ದು, ರೋಗಿಗೆ ನೀಡಿದರು.

ಇದರಿಂದ ಮಿಥುನ್ ಅವರಿಗೆ ಮತ್ತೆ ಹೃದಯಾಘಾತವಾಗುವುದು ತಪ್ಪಿತು. ಬಳಿಕ ಅವರು ಅದೇ ಕಾರಿನಲ್ಲಿ ಮಂಗಳೂರಿಗೆ ಸಾಗುತ್ತಿರುವಾಗ ಟ್ರಾಫಿಕ್ ಜಾಮ್ ಇರುವ ಕಾರಣ ಕೆ.ಎಂ.ಸಿ.ಯ ಅಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿ ಬರಿಸಿ, ರೋಗಿಯನ್ನು ಶೀಘ್ರವಾಗಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು.


ಇದೀಗ ಮಿಥುನ್ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆದಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯ ಡಾ| ಪದ್ಮನಾಭ ಕಾಮತ್ ತಿಳಿಸಿದ್ದು, ಪ್ರದೀಪ್ ನಾಯಕ್ ಅವರ ಸಕಾಲಿಕ ಕಾರ್ಯವೈಖರಿಗೆ ಶ್ಲಾಘನೆಯನ್ನು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *