Tue. Jan 14th, 2025

Bantwala: ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಪೋಸ್ಟ್‌ – ವೈರಲ್‌ ಆದ ಬೆನ್ನಲ್ಲೇ ವ್ಯಕ್ತಿ ಅಂದರ್!!

ಬಂಟ್ವಾಳ:(ಡಿ.9) ಕೋಮುಭಾವನೆ ಕೆರಳಿಸುವ ಅವಹೇಳನಕಾರಿ ಪೋಸ್ಟ್‌ವೊಂದನ್ನು ಫೇಸ್‌ಬುಕ್‌ನಲ್ಲಿ ಬರೆದು ಪೋಸ್ಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನ ಬಂಧನ ಮಾಡಿರುವ ಘಟನೆಯೊಂದು ಬಂಟ್ವಾಳದಲ್ಲಿ ನಡೆದಿದೆ.

ಇದನ್ನೂ ಓದಿ: ಹಣದ ಆಸೆಗೋಸ್ಕರ ಮಕ್ಕಳನ್ನ ಕಿಡ್ನಾಪ್‌ ಮಾಡಿದ ಮೋಕ್ಷಿತಾ ಪೈ ನಿಜವಾದ ಹೆಸರೇನು ಗೊತ್ತಾ?

ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನವಗ್ರಾಮ ಸೈಟ್‌ ನಿವಾಸಿ ಜಯಪೂಜಾರಿ ಎಂಬಾತನೇ ಬಂಧನಕ್ಕೊಳಗಾದ ವ್ಯಕ್ತಿ.

ಮಹಿಳೆಯರ ಬಗ್ಗೆ ಮಾನಕ್ಕೆ ಕುಂದುಂಟಾಗುವ, ಮಹಿಳೆಯರ ತೇಜೋವಧೆಯುಂಟಾಗುವ ರೀತಿಯಲ್ಲಿ ಧರ್ಮ ಧರ್ಮಗಳ ಮಧ್ಯೆ ಕೋಮುಭಾವನೆ ಕೆರಳುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟೊಂದನ್ನು ಮಾಡಿದ್ದಾನೆ.

ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸರು ಸುಮೋಟೋ ಕೇಸನ್ನು ದಾಖಲಿಸಿದ್ದು, ಆರೋಪಿಯ ಬಂಧನ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Leave a Reply

Your email address will not be published. Required fields are marked *