ಬೆಳ್ತಂಗಡಿ:(ಡಿ.9) ಕಳೆದ 12 ವರ್ಷಗಳಿಂದ ಸಮಾಜ ಸೇವೆಯಲ್ಲಿ ಅಪಾರ ಕೊಡುಗೆಗಳನ್ನು ನೀಡಿ ಇಡೀ ರಾಜ್ಯಮಟ್ಟದಲ್ಲಿ ತನ್ನ ಸಮಾಜ ಸೇವೆ ಮೂಲಕ ಗುರುತಿಸಿಕೊಂಡಿರುವ ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟಿನ ಇದರ ಸಂಸ್ಥಾಪಕರಾದ ದೀಪಕ್. ಜಿ ಬೆಳ್ತಂಗಡಿ ಇವರಿಗೆ ಮತ್ತೊಂದು ಪ್ರಶಸ್ತಿಯ ಗರಿ.
ಇದನ್ನೂ ಓದಿ: ಬೆಳ್ತಂಗಡಿ: ತಣ್ಣೀರುಪಂತ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗು ಲಾಭಾಂಶ ವಿತರಣೆ ಕಾರ್ಯಕ್ರಮ
ಬೆಂಗಳೂರಿನ ಕನಕಪುರದ ಸ್ಪೂರ್ತಿ ಕಲಾ ಟ್ರಸ್ಟ್ (ನೋಂ) ಇದರ 12ನೇ ವಾರ್ಷಿಕೋತ್ಸವದ ಪರವಾಗಿ ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಹೆಚ್ ಡಿ ಕುಮಾರಸ್ವಾಮಿ ಇವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ,
ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸಮಾಜ ಸೇವೆಯಲ್ಲಿ ಸದಾ ಗುರುತಿಸಿಕೊಂಡಿರುವ ಬೆಳ್ತಂಗಡಿಯ ರಾಜ ಕೇಸರಿ ಟ್ರಸ್ಟ್ (ರಿ.) ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಯವರಿಗೆ
“ಸ್ಫೂರ್ತಿ ಕುಮಾರ ಸೇವಾ ರತ್ನ ಪ್ರಶಸ್ತಿ” ಲಭಿಸಲಿದೆ. ಈ ಕಾರ್ಯಕ್ರಮವು 29.12.2024 ಭಾನುವಾರದಂದು ಉದಯ ಬಾನು ಕಲಾಸಂಘ ಕೆಂಪೇಗೌಡ ನಗರ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ.