Sun. Dec 29th, 2024

Belthangady: ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 27ನೇ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಕಾರ್ಯಕ್ರಮ

ಬೆಳ್ತಂಗಡಿ:(ಡಿ.9) ಸೇವಾಭಾರತಿ ಸೇವಾಧಾಮ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಆದರ್ಶ ಆಸ್ಪತ್ರೆ, ಪುತ್ತೂರು ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ (ರಿ), ಪುತ್ತೂರು ಇವರ ಸಹಯೋಗದಲ್ಲಿ ಎಂ. ಸಂಜೀವ ಶೆಟ್ಟಿ, ಜವಳಿ ವ್ಯಾಪಾರಸ್ಥರು ಪುತ್ತೂರು ಮತ್ತು ಸೋಜಾ ಮೆಟಲ್ ಮಾರ್ಟ್, ಪುತ್ತೂರು ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 27ನೇ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಆದರ್ಶ ಆಸ್ಪತ್ರೆ, ಪುತ್ತೂರಿನಲ್ಲಿ ನೆರವೇರಿತು.

ಇದನ್ನೂ ಓದಿ: ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ನ ಸಂಸ್ಥಾಪಕರಾದ ದೀಪಕ್. ಜಿ ರವರಿಗೆ “ಸ್ಫೂರ್ತಿ ಕುಮಾರ ಸೇವಾ ರತ್ನ ಪ್ರಶಸ್ತಿ”


ಕಾರ್ಯಕ್ರಮವನ್ನು ಡಾ. ವೈ. ಸುಬ್ರಾಯ ಭಟ್, ಹೆರಿಗೆ ಮತ್ತು ಸ್ತ್ರೀರೋಗ ತಜ್ಯರು ಆದರ್ಶ ಆಸ್ಪತ್ರೆ, ಪುತ್ತೂರು ಇವರು ಉದ್ಘಾಟಿಸಿ, ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕೆ ವಿನಾಯಕ ರಾವ್, ಖಜಾಂಚಿ, ಸೇವಾಭಾರತಿ ಮತ್ತು ಸಂಸ್ಥಾಪಕರು, ಸೇವಾಧಾಮ ಇವರು ಪ್ರಾಸ್ತಾವಿಕ ನುಡಿಯನ್ನು ಆಡಿದರು. ಡಾ. ಎಂ. ಕೆ ಪ್ರಸಾದ್ ಭಂಡಾರಿ, ಸರ್ಜನ್ ಆದರ್ಶ ಆಸ್ಪತ್ರೆ, ಪುತ್ತೂರು ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿ ಇಂತಹ ಶಿಬಿರವನ್ನು ಇನ್ನೂ ಹೆಚ್ಚು ಆಯೋಜಿಸಲು ಸದಾ ನಾವು ಸಹಕರಿಸುತ್ತೇವೆ ಹಾಗೂ ಶಿಬಿರಾರ್ಥಿಗಳಿಗೆ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸುವುದಾಗಿ ಹೇಳಿದರು.


ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶ್ರೀ ಸಹಜ್ ರೈ, ಸ್ಥಾಪಕಾಧ್ಯಕ್ಷರು, ವಿಜಯ ಸಾಮ್ರಾಟ್ (ರಿ.), ಪುತ್ತೂರು ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಪತ್ರವನ್ನು ಸ್ವೀಕರಿಸಿದ ನಂತರ ಅವರು ಸೇವಾಧಾಮ ದ ನೂತನ ಕಟ್ಟಡ ನಿರ್ಮಾಣಕ್ಕೆ ತಮ್ಮ ಕೈಲಾದಷ್ಟು ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೊರ್ವ ಅತಿಥಿಯಾದ ಡಾ. ದೀಪಕ್ ರೈ, ತಾಲೂಕು ಆರೋಗ್ಯಧಿಕಾರಿ, ಪುತ್ತೂರು ತಾಲೂಕು ಇವರಿಗೂ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿ ಪತ್ರವನ್ನು ಸ್ವೀಕರಿಸಿ ಇವರು ಪುತ್ತೂರು ತಾಲೂಕಿನಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ಎಲ್ಲಾ ದಿವ್ಯಾoಗರಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಎರಡು ತಿಂಗಳ ಒಳಗೆ ದೊರಕಿಸುವುದಾಗಿ ಭರವಸೆ ನೀಡಿದರು.
ಹಾಗೂ ಡಾ. ಶ್ಯಾಮ್ ಭಟ್, ವೈಧ್ಯಾದಿಕಾರಿ, ಆದರ್ಶ ಆಸ್ಪತ್ರೆ ಪುತ್ತೂರು ಇವರು ಕಾರ್ಯಮವನ್ನು ಉದ್ದೇಶಿಸಿ ಮಾತನಾಡಿ ಸೇವಾಭಾರತಿ ಸಂಸ್ಥೆಗೆ ಹಾಗೂ ಎಲ್ಲಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *