Sat. Dec 28th, 2024

Belthangady: ಅನ್ಯಕೋಮಿನ ವ್ಯಕ್ತಿಗಳಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ – ಅಬ್ದುಲ್ ಕರೀಂ ಹಾಗೂ ಸಾದೀಕ್‌ ಗೆ ಜೈಲು ಶಿಕ್ಷೆ !!

ಬೆಳ್ತಂಗಡಿ:(ಡಿ.10) ಅಪ್ರಾಪ್ತ ಬಾಲಕಿಗೆ ಆಟೋರಿಕ್ಷಾದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಫೋಕ್ಸೋ) ಎಫ್ಟಿಎಸ್‌ಸಿ-1 ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ – ರಕ್ಷಿತ್ ಶಿವರಾಮ್

ಬೆಳ್ತಂಗಡಿ ತಾಲೂಕು ಇಳಂತಿಲದ ನಿವಾಸಿ ಬೀಡಿ ತೆಗೆಯುವ ವೃತ್ತಿಯ ಅಬ್ದುಲ್‌ ಕರೀಂ (39), ಮೊಗ್ರು ಗ್ರಾಮ ಪಚ್ಚಡ್ಕ ಮನೆಯ ನಿವಾಸಿ ಆಟೋರಿಕ್ಷಾ ಚಾಲಕ ಸಾದಿಕ್‌ (34) ಶಿಕ್ಷೆಗೊಳಗಾದವರು.

ಜೂ.18,2023 ರಂದು ಅಪ್ರಾಪ್ತ ಬಾಲಕಿ ಬಂದಾರು ಗ್ರಾಮದ ನೇಲಾಳು ಪಲ್ಕೆ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಕರೀಂ ಎಲ್ಲಿಗೆ ಹೋಗುವುದಾಗಿ ಬಾಲಕಿಯಲ್ಲಿ ಪ್ರಶ್ನೆ ಮಾಡಿದ್ದ.

ಕುಂಟಾಲಪಲ್ಕೆ ತಲುಪಿದಾಗ ಆಟೋರಿಕ್ಷಾ ನಿಲ್ಲಿಸಿ ರಿಕ್ಷಾದಲ್ಲಿ ಬರಲು ಕರೆದಿದ್ದ. ಈತ ಇನ್ನೋರ್ವ ಆರೋಪಿ ಆಟೋರಿಕ್ಷಾ ಚಾಲಕ ಸಾದಿಕ್ ಕೂಡಾ ಬಾಲಕಿಯನ್ನು ಕರೆದಿದ್ದ. ಬಾಲಕಿ ರಿಕ್ಷಾದಲ್ಲಿ ಕುಳಿತಿದ್ದಳು. ಕರೀಂ ಆಕೆಗೆ 200 ರೂ. ನೀಡಿ ಅದನ್ನು ಸಂಘಕ್ಕೆ ಕಟ್ಟಿ ವಾಪಾಸು ಬರುವಾಗ ಆಟೋದಲ್ಲಿ ಬರುವಂತೆ ಹೇಳಿದ್ದ. ಬಾಲಕಿ ಹಣವನ್ನು ವಾಪಸ್‌ ಆತನಿಗೆ ನೀಡಿದ್ದಳು.

ಆಗ ಬೆಳ್ತಂಗಡಿಗೆ ಬರುತ್ತೀಯಾ ಎಂದು ಕೇಳಿದ್ದ. ಆಕೆ ಬರಲ್ಲ ಎಂದು ಹೇಳಿದಾಗ ಆಕೆಯ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಆಟೋರಿಕ್ಷಾದಿಂದ ಹಾರಿದ್ದು, ಗಾಯಗೊಂಡಿದ್ದಳು. ಕೂಡಲೇ ಆಟೋರಿಕ್ಷಾದಿಂದ ಹಾರಿದಾಗ ಇಬ್ಬರು ಆಟೋ ನಿಲ್ಲಿಸದೇ ತೆರಳಿದ್ದು, ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಒಂದನೇ ಆರೋಪಿ ಅಬ್ದುಲ್‌ ಕರೀಂ ಗೆ ಫೋಕ್ಸೋ ಕಾಯ್ದೆಯಡಿ ಕಲಂ 8 ರ ಅಡಿಯಲ್ಲಿ 5 ವರ್ಷಗಳ ಜೈಲು, 5000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಆರು ತಿಂಗಳ ಹೆಚ್ಚುವರಿ ಸಜೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯ ಕಲಂ 3(1)(ಡಬ್ಲ್ಯು) (ಐ) ಅಡಿಯಲ್ಲಿ 5 ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ, ಅಲ್ಲದೆ ಪರಿಶಿಷ್ಟ ಜಾತಿ, ಪಂಗಡದವರ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(2)(ವಿಎ) 83 0 3542(1)(3) ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಇನ್ನೋರ್ವ ಆರೋಪಿ ಸಾದಿಕ್‌ಗೆ ಪೋಕ್ಸೋ ಕಾಯ್ದೆಯ ಕಲಂ 8ರಡಿಯಲ್ಲಿ 3 ವರ್ಷಗಳ ಜೈಲು ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ ವಿಧಿಸಿದ್ದಾರೆ.

Leave a Reply

Your email address will not be published. Required fields are marked *