Fri. Dec 27th, 2024

Belthangady: ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಡಿ.14 ರಂದು ಗುರುವಾಯನಕೆರೆಯಲ್ಲಿ “ಯಕ್ಷ ಸಂಭ್ರಮ”

ಬೆಳ್ತಂಗಡಿ:(ಡಿ.10) ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ಡಿಸೆಂಬರ್ 14 ಶನಿವಾರದಂದು ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ “ಯಕ್ಷ ಸಂಭ್ರಮ” ಅದ್ಧೂರಿಯಾಗಿ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಳ್ತಂಗಡಿ: “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ ಬರೆದ ಕುಮಾರಿ ಅದಿತಿ ಮುಗೆರೋಡಿ


ಅವರು ಬೆಳ್ತಂಗಡಿ ಲಯನ್ಸ್ ಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಲ ಫೌಂಡೇಶನ್ ಮಹಾಪೋಷಕರಾದ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಶಶಿಧ‌ರ್ ಶೆಟ್ಟಿಯವರ ಮಾರ್ಗದರ್ಶನದಂತೆ ಕಳೆದ ಎರಡು ವರ್ಷಗಳಿಂದ ಉಜಿರೆಯಲ್ಲಿ ಯಕ್ಷ ಸಂಭ್ರಮ ಯಶಸ್ವಿಯಾಗಿ ನಡೆದಿದ್ದು, ತಾಲೂಕಿನ ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಗುರುವಾಯನಕೆರೆ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಮೂರನೇ ವರ್ಷದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉದ್ಘಾಟನಾ ಕಾರ್ಯಕ್ರಮದ ಬಳಿಕ ತಾಲೂಕಿನ 8 ಶಾಲೆಗಳ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ, ನಡೆಯಲಿದೆ. ಸಂಜೆ 5.30 ರಿಂದ ಗುರುವಾಯನಕೆರೆ ಬಂಟರ ಭವನದ ಬಳಿಯಿಂದ ಭಜನಾ ತಂಡಗಳು, ತಾಲೀಮು ತಂಡ, ಚೆಂಡೆ ವಾದ್ಯಗಳ ಭವ್ಯ ಮೆರವಣಿಗೆ ಕ್ರೀಡಾಂಗಣಕ್ಕೆ ಆಗಮಿಸಲಿದೆ. ಸಂಜೆ 7.30 ಕ್ಕೆ ಘಟಕದ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಯವರಿಗೆ ಯಕ್ಷ ಸಂಭ್ರಮ 2024 ಪ್ರಶಸ್ತಿ ಪ್ರಧಾನ ನಡೆಯಲಿದೆ. ಹಿರಿಯ ವೈದ್ಯರುಗಳಾದ ಗುರುವಾಯನಕೆರೆಯ ಡಾ. ವೇಣುಗೋಪಾಲ ಶರ್ಮ, ಬೆಳ್ತಂಗಡಿಯ ಡಾ.ಕೆ.ಜಿ. ಪಣಿಕರ್ ಅವರಿಗೆ ಗೌರವ ಸನ್ಮಾನ, ಹಾಗೂ ಸಾಧಕರಾದ ನಿಡ್ಲೆಯ ಅಗ್ರಿಲೀಫ್ ಸಂಸ್ಥೆಯ ಅವಿನಾಶ್ ರಾವ್ ಮತ್ತು ಅತಿಶಯ ಜೈನ್ ರಿಗೂ ಸನ್ಮಾನ ನಡೆಯಲಿದೆ.


ವಿಶೇಷ ರೀತಿಯ ಆಹಾರ ಖಾದ್ಯಗಳು ಹಾಗೂ ಬಂಗಾರ ಗೆಲ್ಲುವ ಅವಕಾಶ, ಕಾರ್ಯಕ್ರಮದಲ್ಲಿ ಇರಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಘುರಾಮ ಶೆಟ್ಟಿ ಉಜಿರೆ, ವಸಂತ ಶೆಟ್ಟಿ, ತುಕರಾಮ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *