ಮಂಗಳೂರು:(ಡಿ.10) ಜಿಲ್ಲೆಯೇ ತಲೆತಗ್ಗಿಸುವಂತಹ ಹೇಯ ಕೃತ್ಯವೊಂದು ಮಂಗಳೂರಿನ ಪ್ರಧಾನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸ್ ಇಲಾಖೆ ಕಾಮುಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಹೊರಜಿಲ್ಲೆಯ ಕೂಲಿ ಕಾರ್ಮಿಕರು ಮಲಗುತ್ತಾರೆ. ಅಲ್ಲಿ ರಿಕ್ಷಾ ನಿಲ್ಲಿಸಿದ ಮಧ್ಯ ವಯಸ್ಕ ಚಾಲಕ ಮಹಿಳೆಯ ಬಳಿ ಮಲಗಿ ಮೊಬೈಲ್ ಟಾರ್ಚ್ ಹಾಕಿ ಆಕೆಯ ಖಾಸಗಿ ಭಾಗವನ್ನು ಸ್ಪರ್ಶಿಸಿ ಕಾಮುಕತನ ಮೆರೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಬಳಿಕ ರಿಕ್ಷಾ ಚಾಲಕ ಅಲ್ಲಿಂದ ತೆರಳಿದ್ದಾನೆ. ಕಾಮುಕ ರಿಕ್ಷಾ ಚಾಲಕನನ್ನು ಕೂಡಲೇ ಪೊಲೀಸರು ಬಂಧಿಸಬೇಕು ಆತನ ಮಾಹಿತಿ ಇದ್ದರೆ ರಿಕ್ಷಾ ಚಾಲಕರು ಪೊಲೀಸರಿಗೆ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.