ಬೆಳ್ತಂಗಡಿ:(ಡಿ.11) ನವ ಮಾಧ್ಯಮಗಳು, ಯು ಟ್ಯೂಬ್ ಮತ್ತು ವಾರ್ತಾ ಮಾದ್ಯಮಗಳಲ್ಲಿ ದೇಶದ ಸ್ಥಿತಿಗತಿಗಳ ಬಗ್ಗೆ ಬರುತ್ತಿರುವ ವೈಭವೋಪೇತ ಸನ್ನಿವೇಶಗಳ ಬಗೆಗಿನ ಸತ್ಯಾನ್ವೇಷಣೆಗಾಗಿ ಕೇರಳದ ವಿಜೇಶ್ ಇದೀಗ “ಭಾರತ ಯಾತ್ರೆ” ಹೊರಟಿದ್ದಾರೆ.
ಇದನ್ನೂ ಓದಿ: ಪುತ್ತೂರು: ಅಯ್ಯಪ್ಪ ಸ್ವಾಮಿಯ ಮಹಿಮೆ
ಎರ್ನಾಕುಳಂ ಜಿಲ್ಲೆಯ ಪೆರುಂಬಾವೂರು ನಿವಾಸಿ, ಐ.ಟಿ ಉದ್ಯೋಗಿ ವಿಜೇಶ್ ತಮ್ಮ ಯಾತ್ರೆಗೆ ಈಗಾಗಕೇ ಅಡಿ ಇಟ್ಟಿದ್ದು ಕರ್ನಾಟಕ ಪ್ರವೇಶ ಮಾಡಿದ್ದಾರೆ.
ಐ.ಟಿ ಉದ್ಯೋಗಿ;
ಮೋರಲ್ ಪೈಂಟಿಂಗ್, ಟೆಂಪಲ್ ಆರ್ಟ್ಸ್ ಇತ್ಯಾಧಿ ಒಳಗೊಂಡ “ಫೈನ್ ಆರ್ಟ್ಸ್” ಇದರಲ್ಲಿ ಪರಿಣತರಾಗಿರುವ ವಿಜೇಶ್ಕಂ ಪ್ಯೂಟರ್ ಗೇಮಿಂಗ್ ಕಂಪೆನಿಯಲ್ಲಿ (ಐಟಿ) ಉದ್ಯೋಗದಲ್ಲಿದ್ದಾರೆ. ವರ್ಕ್ ಫ್ರಂ ಹೋಮ್ ನಲ್ಲಿರುವ ಅವರು ಯಾತ್ರೆಯುದ್ದಕ್ಕೂ ಕೆಲಸ ನಿರ್ವಹಿಸುತ್ತಲೇ ಮುಂದುವರಿಯಲಿದ್ದಾರೆ.
ಕೋವಿಡ್ ಉತ್ತರದಲ್ಲಿ ವರ್ಕ್ ಫ್ರಂ ಹೋಮ್ ಉತ್ತಮ ಅನುಸರಣಾ ಮಾರ್ಗವಾದರೂ ಕೆಲಸಗಾರರು ತಮ್ಮದೇ ಒತ್ತಡದಿಂದ ಬಳಲುತ್ತಿದ್ದಾರೆ. ಜನರ ಸಂಪರ್ಕವಿಲ್ಲದೆ, ಸಹೋದ್ಯೋಗಿಯನ್ನೂ ಕಂಡು ಮಾತನಾಡಿದಲಾಗದೆ ಅತೀವ ಒತ್ತಡದಿಂದ ಕೆಲಸ ಮಾಡಬೇಕು. ಇದರಿಂದ ಪ್ರತಿಯೊಬ್ಬರೂ ಸಂಕುಚಿತಗೊಳ್ಳುತ್ತಿದ್ದಾರೆ. ಅದಕ್ಕಾಗಿ ಹೊರಪ್ರಪಂಚದ ಜೊತೆ ಬೆರೆಯಲು, ಬಹುವಿಧ ಜನರ ಬಹುವಿಧ ಸಂಸ್ಕೃತಿಗಳ ಬಗ್ಗೆ, ಅವರ ಆಚಾರ, ವಿಚಾರ, ವಿಹಾರ, ಉದ್ಯೋಗ, ಸಾಮಾಜಿಕ – ಆರ್ಥಿಕ ಸ್ಥಿತಿಗತಿ ಬಗ್ಗೆ ನೇರ ಕಂಡು ಅರಿಯಲು ಈ ಯಾತ್ರೆ ಪ್ರಯೀಜನಕಾರಿಯಾಗಲಿದೆ ಎಂಬುದು ವಿಜೇಶ್ ಅಭಿಮತ.
ದೇಶ ವಾಸಿಗಳ ಬಗ್ಗೆ ನಮ್ಮ ಮುಂದೆ ಇರುವ ಉಚ್ಚ ಚಿತ್ರಣದಂತೆಯೇ ದೇಶ ಪ್ರಗತಿಯ ಉನ್ನತಿಯಲ್ಲಿರುವುದು ಹೌದೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಗ್ರಾಮಾಂತರ ಭಾಗದ ಜನರ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂಬುದರ ಜೊತೆಗೆ ನಮ್ಮ ಸಾಮರ್ಥ್ಯ ಮಟ್ಟವನ್ನು ನಾವೇ ಅಳೆದುಕೊಂಡು ನಮ್ಮಲ್ಲಿ ನಾವೆಷ್ಟು ಬದಲಾವಣೆಗಳನ್ನು ತಂದುಕೊಳ್ಳಬೇಕು ಎಂಬುದೇ ಈ ಯಾತ್ರೆಯ ಉದ್ದೇಶ.
ಕೇರಳದಿಂದ ಹೊರಟಿರುವ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಿದ್ದು, ಬೀದರ್ ಮೂಲಕ ರಾಜ್ಯ ಬಿಟ್ಟು ಹೊರಹೋಗಲಿದ್ದಾರೆ. ಔರಂಗಾಬಾದ್, ರಾಜಸ್ಥಾನ, ದೆಹಲಿ, ವಾರಣಾಸಿ, ವಿಶಾಖಪಟ್ಟಣಂ, ಪಾಂಡಿಚೇರಿ ಇವೇ ಮೊದಲಾದ ಪ್ರದೇಶಗಳಲ್ಲಿ ಸುತ್ತಾಡಿ ಮತ್ತೆ ಕೇರಳಕ್ಕೆ ವಾಪಾಸಾಗಲಿದ್ದಾರೆ.
ಕಿಚನ್, ಬೆಡ್ ಕಚೇರಿ ಇರುವ ಕಾರು; ವಿಜೇಶ್ ಅವರು ಈ ಯಾತ್ರೆಗಾಗಿ ಇಕೋ ಕಾರು ಖರೀದಿಸಿದ್ದು ಅದರಲ್ಲಿ ತಮ್ಮ ಕರ್ತವ್ಯಕ್ಕೆ ಅನುಕೂಲವಾಗುವ ಹೋಮ್ ಆಫೀಸ್, ವಿಶ್ರಾಂತಿಗೆ ಬೆಡ್, ಆಹಾರ ತಯಾರಿಸಿಕೊಳ್ಳಲು ಕಿಚನ್ ಎಲ್ಲವನ್ನೂ ಸ್ವತಃ ಆಲ್ಟ್ರೇಷನ್ ಮಾಡಿಸಿಕೊಂಡಿದ್ದಾರೆ. ಅವರಿಗೆ ಬೇಕಾದ ಆಹಾರ ಪದಾರ್ಥ ಗಳನ್ನು ಶೇಖರಿಸಿಟ್ಟುಕೊಂಡಿದ್ದು ಅವರೇ ಅವರಿಗೆ ಬೇಕಾದ ವೆಜ್- ನಾನ್ ವೆಜ್ ಆಹಾರ ತಯಾರಿಸಿಕೊಳ್ಳುತ್ತಿದ್ದಾರೆ.
ಮಿತ್ರರೇ ಗೈಡ್;
ತಾನು ಐಟಿ ಉದ್ಯೋಗಿಯಾಗಿರುವುದರಿಂದ ಈಗಾಗಲೇ ಅವರು ಯುಎಸ್‌ಎ, ಸ್ವಿಸರ್‌ಲ್ಯಾಂಡ್, ಫ್ಲೋರೆನ್ಸ್, ಮಾಲ್ಟಾ, ಪ್ಯಾರಿಸ್, ಅಮೇರಿಕಾದ ಸಿಯಾಟೆಲ್ ಇಲ್ಲಿಗೆಲ್ಲ ಪ್ರವಾಸ ಮಾಡಿದ್ದಾರೆ. ಭಾರತದಲ್ಲೂ ದೆಹಲಿಯಂತಹಾ ಮಹಾ ನಗರಿಯಲ್ಲೂ ಉದ್ಯೋಗ ಮಾಡಿದ್ದಾರೆ. ಆದ್ದರಿಂದ ಎಲ್ಲ ಕಡೆ ಅವರಿಗೆ ಅವರದ್ದೇ ಆದ ಮಿತ್ರ ಬಳಗ ಇದೆ. ಅವರ ಸಹಕಾರ ಪಡೆದು ಯಾತ್ರೆ ಮುಂದುವರಿಸುತ್ತಿದ್ದಾರೆ.
ಇಂಧನ ಮತ್ತು ಆಹಾರ ಸಾಮಾಗ್ರಿಗೆ ಮಾತ್ರ ಖರ್ಚು ತಗಕಳುತ್ತಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ಯಾತ್ರೆಯ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ವಾಹನದಲ್ಲೇ ಎಲ್ಲಾ ವ್ಯವಸ್ಥೆ ಇದ್ದರೂ ಕೆಲವು ಕಡೆ ಮಿತ್ರರು ಅವರನ್ನು ಆಹ್ವಾನಿಸಿದ್ದಾರೆ.
ವಿದೇಶದಲ್ಲಿ ಪ್ರೇರಣೆ;
ತಾನು ವಿದೇಶದಲ್ಲಿ ಕೆಲಸಕ್ಕಿದ್ದ ಸಂದರ್ಭ ಅವರ ಮಾಲಿಕ 4-5 ತಿಂಗಳು ಪ್ರವಾಸ ಮಾಡುತ್ತಿದ್ದರು. ಈ ವೇಳೆ ಅವರ ಕಾರು ಚಾಲಕ ಇದೇ ರೀತಿ 4 ತಿಂಗಳು ವಾಹನದಲ್ಲೇ ಜೀವನ ಮಾಡುತ್ತಿದ್ದುದ್ದರಿಂದ ಅವರಿಂದ ಪ್ರೇರಿತನಾಗಿ ಈ ಯೋಜನೆ ರೂಪಿತವಾಗಿದೆ ಎಂದು ಹೇಳುತ್ತಾರೆ ವಿಜೇಶ್.
ಪತ್ನಿಯ ಪ್ರೋತ್ಸಾಹ;
ವಿವಾಹಿತರಾಗಿರುವ ವಿಜೇಶ್ ಪತ್ನಿ ಚಿಂದು ಇವರಿಗೆ ಪ್ರೋತ್ಸಾಹ ನೀಡಿದ್ದಾರೆ. 7 ವರ್ಷ ಮತ್ತು 10 ತಿಂಗಳ ಅದೀನಾ ಮತ್ತು ಓಶಿಯನ್ ಎಂಬಿಬ್ಬರು ಮಕ್ಕಳಿದ್ದು, ತಂದೆ ವಿಜಯನ್ ತಾಯಿ ಜಯ ಇವರು ಮಗನ ಆಲೋಚನೆಗೆ ಶಕ್ತಿ ತುಂಬಿದ್ದಾರೆ. ಪ್ರವಾಸದ ಬಗ್ಗೆ ಸ್ವ ಆಸಕ್ತಿ ಹೊಂದಿರುವ ಅವರ ಪತ್ನಿ ಚಿಂದು ಸ್ವತಂತ್ರ ಸಂಪಾದಕರಾಗಿ (ಫ್ರೀಲ್ಯಾನ್ಸ್ ಎಡಿಟರ್) ಅನುಭವಿ. ವಿಜೇಶ್ ಅವರ “ವೀಡು ಮೈ ಚಾನೆಲ್” ಯು ಟ್ಯೂಬ್ ಅನ್ನು ಅವರೇ ಆಪರೇಟ್ ಮಾಡುತ್ತಿದ್ದಾರೆ. ಈಗಾಗಲೇ ಚಾನೆಲ್ 50 ಸಾವಿರ ಸಬ್ಸ್‌ಕ್ರೈಬರ್ಸ್ ಗಳನ್ನು ಹೊಂದಿದೆ.
ಮನೆಯಲ್ಲಿ ಮಕ್ಕಳು ಮತ್ತು ತಂದೆ ತಾಯಿಯ ಹೊಣೆಯನ್ನು ಪತ್ನಿಯೇ ಹೊತ್ತುಕೊಂಡು ಅವಳೇ ನನಗೆ ಧೈರ್ಯ ತುಂಬಿದ್ದಾರೆ
ಎಂದು ವಿಜೇಶ್ ನೆನಪಿಸುತ್ತಾರೆ.
“ಇಗೋ” ದೂರ ಇಡಬೇಕು;
ನಾಗು ಇನ್ನೊಬ್ಬರ ಜೊತೆ ಮುಕ್ತವಾಗಿ ಬೆರೆಯಬೇಕಾದರೆ ಮೊದಲು ನಮ್ಮ “ಇಗೋ” ದೂರ ಮಾಡಿಕೊಳ್ಳಬೇಕು. ತಿಳಿಯದ ಸ್ಥಳದಲ್ಲಿ ಯಾವತ್ತೂ ರಿಸ್ಕ್ ತೆಗೆದುಕೊಳ್ಳಲು ಹೋಗಬಾರದು. ವಾಹನಕ್ಕೆ ಇಂಧನ ತುಂಬುವ ಕೆಲಸ ಸಹಿತ ಯಾವುದೇ ಸಣ್ಣ ಪುಟ್ಟ ಕೆಲಸವಾದರೂ ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆ ಮುಂದೂಡಬಾರದು. ಸಮಯದ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಎಂದೂ ಎಡವಬಾರದು, ತಿಳಿಯದ ಕೆಲಸಕ್ಕೆ ಎಂದೂ ಕೈ ಹಾಕಬಾರದು ಎಂಬಿತ್ಯಾಧಿಯಾಗಿ ಸ್ವ ಪಾಠ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ವಿಜೇಶ್.
ದೇಶಾಧ್ಯಂತ ಓಡಾಟ ಮಾಡಿ ಜನರು, ಆದಾಯ ಮಟ್ಟ, ರಾಜಕೀಯ ಬೆಳವಣಿಗೆ, ಸ್ಥಿತಿ ಗತಿ, ಜನರ ಉದ್ದಾರಕ್ಕಾಗಿ ಸಂಘ ಸಂಸ್ಥೆಗಳು ಕೈಗೊಳ್ಳುತ್ತಿರುವ ಕೆಲಸ-ಯೋಜನೆಗಳು, ಕೊನೆಯದಾಗಿ ನಮ್ಮಬಗ್ಗೆಯೇ ನಾವು ಅರಿಯಲು ಈ ಯಾತ್ರೆ ಪೂರಕವಾಗುತ್ತದೆ ಎಂದು ನಾನು ನಂಬುತ್ತೇನೆ ಎನ್ನುತ್ತಾರೆ ವಿಜೇಶ್.