ಉಜಿರೆ:(ಡಿ.11) ವಾಣಿ ಪಿಯು ಕಾಲೇಜು, ಹಳೆಕೋಟೆ ಬೆಳ್ತಂಗಡಿ, ಇದರ “ವಿಂಶತಿ” ಸಂಭ್ರಮದ ಆಚರಣೆಯ ಅಂಗವಾಗಿ ಪ್ರತಿಷ್ಠಿತ “ಉತ್ಕರ್ಷ 2024” ಸಾಂಸ್ಕೃತಿಕ ಶೈಕ್ಷಣಿಕ ಸ್ಪರ್ಧೆಯಲ್ಲಿ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಮಂಗಳೂರು: ಜೈಲಿನಿಂದ ಹೊರಬಂದು ಮತ್ತೆ ಸರಗಳ್ಳತನ ಪ್ರಾರಂಭಿಸಿದ ಕಳ್ಳರನ್ನು ಮತ್ತೆ ಜೈಲಿಗಟ್ಟಿದ ಪೊಲೀಸರು
ಈ ಸ್ಪರ್ಧೆಗಳಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳು ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿ, ಹಲವಾರು ಬಹುಮಾನಗಳನ್ನು ಪಡೆದರು.
ನಿಧಿ ವಿಹಾರ ಸ್ಪರ್ಧೆಯಲ್ಲಿ ಯಶಸ್ ಮತ್ತು ಅನ್ವಯ್ ಮೂರನೇ ಸ್ಥಾನ, ವರ್ತಿಕ (ವರದಿಗಾರಿಕೆ) ಸ್ಪರ್ಧೆಯಲ್ಲಿ ಶ್ರೀಮಾ ಮತ್ತು ಚಂಪಾ ಎರಡನೇ ಸ್ಥಾನ, ನೃತ್ಯ ಪ್ರತಿಭಾ ಸ್ಪರ್ಧೆಯಲ್ಲಿ ಧೃತಿ, ಧನ್ವಿ ಭಂಡಾರಿ, ಧನ್ವಿ, ವೈಷ್ಣವಿ, ಅಹನಾ, ತುಷಾರ್, ದೀಕ್ಷಿತಾ, ಮನ್ವಿತಾ ಮತ್ತು
ಪ್ರೇರಣಾ ಪ್ರಥಮ ಸ್ಥಾನ, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಸಮ್ಮೇದ್, ಕನಿಷ್ಕ, ಅಕ್ಷಮ್ ಮತ್ತು ಗೌರವ್ ಪ್ರಥಮ ಸ್ಥಾನ, ಮತಿ-ಸ್ಮೃತಿ ಸ್ಪರ್ಧೆಯಲ್ಲಿ ನಿನಾದ್ ಮತ್ತು ತೇಜಸ್ ಪ್ರಥಮ ಸ್ಥಾನ ಪಡೆದು ಶಾಲೆ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಭಾಜನವಾಗಿದೆ.
ವಿಜೇತರಾದ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಪ್ರಾಂಶುಪಾಲ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದರು.