ಉಜಿರೆ:(ಡಿ.12) ಮಧ್ಯಪ್ರದೇಶದಲ್ಲಿ ನಡೆದ 34ನೇ ನ್ಯಾಷನಲ್ ತ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನವನ್ನು ಕರ್ನಾಟಕ ತಂಡ ಪಡೆದುಕೊಂಡಿದೆ.

ಇದನ್ನೂ ಓದಿ: Kisan yojana: ರೈತರಿಗೆ ಬಿಗ್ ಶಾಕ್
ತಂಡದಲ್ಲಿ ಅನುಗ್ರಹ ವಿದ್ಯಾ ಸಂಸ್ಥೆ ಉಜಿರೆಯ ಮತ್ತು ಎಸ್.ಡಿ.ಎಂ ಕಾಲೇಜಿನ ಹಳೆಯ ವಿದ್ಯಾರ್ಥಿ, ಪ್ರಸ್ತುತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಲೋನಾ ಡಿಕುನ್ಹ ಭಾಗವಹಿಸಿ “ಮ್ಯಾನ್ ಆಫ್ ದಿ ಮ್ಯಾಚ್” ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.



ತಂಡವು ಪ್ರಥಮ ಸ್ಥಾನ ಗೆಲ್ಲಲು ತನ್ನೆಲ್ಲಾ ಶ್ರಮವನ್ನು ಹಾಕಿ ಗೆಲ್ಲಿಸಿಕೊಡುವಲ್ಲಿ ಉತ್ತಮ ಆಟವನ್ನು ಆಡಿ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

