Fri. Dec 27th, 2024

Belal: ಬೆಳಾಲು ಗ್ರಾಮ ಪಂಚಾಯತ್‌ ನಲ್ಲಿ ಉಚಿತ ಫೂಟ್ ಪುಲ್ಸ್ ಥೆರಪಿ ಶಿಬಿರ

ಬೆಳಾಲು:(ಡಿ.13) ಗ್ರಾಮ ಪಂಚಾಯತ್ ಬೆಳಾಲು ಬೆಳ್ತಂಗಡಿ ತಾಲೂಕು ಮತ್ತು ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಪುತ್ತೂರು ಇದರ ಆಶ್ರಯದಲ್ಲಿ ಉಚಿತ ಫೂಟ್ ಪುಲ್ಸ್ ಥೆರಪಿ ಶಿಬಿರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಇದನ್ನೂ ಓದಿ: Drone Prathap: ಡ್ರೋನ್ ಪ್ರತಾಪ್ ಅರೆಸ್ಟ್ !!!

ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಉದ್ಘಾಟಸಿ ಗ್ರಾಮದ ಜನತೆ ಈ ಥೆರಪಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಬಗ್ಗೆ ಕೆ ಪ್ರಭಾಕರ ಸಾಲ್ಯಾನ್ ಬಾಕಿಲ ಗೊತ್ತು ಮಾಲಕರು ನೆಮ್ಮದಿ ವೆಲ್ನ ಸೆಂಟರ್ ಪುತ್ತೂರು ಇವರು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸತೀಶ್ ಎಳ್ಳುಗದ್ದೆ ಸದಸ್ಯರು ಗ್ರಾಮ ಪಂಚಾಯತ್‌ ಬೆಳಾಲು, ಶ್ರೀಮತಿ ಪ್ರೇಮ ಗ್ರಾಮ ಪಂಚಾಯತ್‌ ಬೆಳಾಲು ,

ಶ್ರೀ ತಾರಾನಾಥ್ ಸೇವಾ ನಿರತರು ಬೆಳಾಲು, ಶ್ರೀ ಗಂಗಾಧರ ಸಾಲಿಯನ್ ಅಧ್ಯಕ್ಷರು ಮಾಯ ಒಕ್ಕೂಟ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವು ಡಿಸೆಂಬರ್ 12 ರಿಂದ 26 ರ ವರೆಗೆ ನಡೆಯಲಿರುವುದು ಹಾಗೂ ಗ್ರಾಮದ ಹೆಚ್ಚಿನ ಜನರು ಭಾಗವಹಿಸಿ ಕಾರ್ಯಕ್ರಮ ದೇಶದ ಯಶಸ್ವಿಗೆ ಪಾತ್ರರಾದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.

Leave a Reply

Your email address will not be published. Required fields are marked *