Fri. Dec 27th, 2024

Belthangady: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ – ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಛಾಯಾ ಮುದ್ದುಕಂದ ಫೋಟೋ ಸ್ಫರ್ಧೆ – 2024ರ ಬಹುಮಾನ ವಿತರಣಾ

ಬೆಳ್ತಂಗಡಿ:(ಡಿ.13) ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ. ಬೆಳ್ತಂಗಡಿ ವಲಯದ ಆಯೋಜಕತ್ವದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆದ ಛಾಯಾ ಮುದ್ದುಕಂದ ಫೋಟೋ ಸ್ಫರ್ಧೆ 2024ರ ಬಹುಮಾನ ವಿತರಣಾ ಕಾರ್ಯಕ್ರಮವು ಡಿ. 12 ರಂದು ಗುರುವಾಯನಕೆರೆ ಛಾಯಾ ಭವನದಲ್ಲಿ ನಡೆಯಿತು.

ಇದನ್ನೂ ಓದಿ: ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ

ಪ್ರಥಮ ಬಹುಮಾನ ಬೆಳ್ತಂಗಡಿಯ ಎಝಲ್ ಬಿಯಾಂಕ, ದ್ವಿತೀಯ ಬಹುಮಾನ ವೇಣೂರಿನ ಜಾಹ್ನವಿ ರೈ ಕುಕ್ಕೇಡಿ, ತೃತೀಯ ಬಹುಮಾನವನ್ನು ಗೇರುಕಟ್ಟೆಯ ಅನ್ಶಿ ಶೆಟ್ಟಿ ಇವರು ಪಡೆದುಕೊಂಡರು.

ಮೆಚ್ಚುಗೆ ಪಡೆದ ಚಿತ್ರಗಳು, ಶ್ರೀಯಾ. ಎಸ್ ಚಾರ್ಮಾಡಿ, ಸುಗ್ಯ ಎಸ್ ಕೋಟ್ಯಾನ್ ನಿಟ್ಟಡೆ, ಡೆನ್ವರ್ ಎವನ್ ಡಿಸೋಜಾ ಬೆಳ್ತಂಗಡಿ, ವೈಷ್ಣವಿ ಹೆಬ್ಬಾರ್ ಕಲ್ಮಂಜ , ಶಶಿಕಲಾ ಎಸ್ ಎಂಜಿರ.ರೆಖ್ಯಾ ಬಹುಮಾನ ಪಡೆದುಕೊಂಡರು.

ಈ ಕಾರ್ಯಕ್ರಮದಲ್ಲಿ ಎಸ್,ಕೆ.ಪಿ.ಎ ವಲಯ ಅಧ್ಯಕ್ಷೆ ಸಿಲ್ವಿಯಾ ,ಪ್ರಧಾನ ಕಾರ್ಯದರ್ಶಿ ವಿಜಯ ಎಚ್ ಪ್ರಸಾದ್ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರದ್ವಜ್, ಛಾಯಾ ಕಾರ್ಯದರ್ಶಿ ವೆಂಕಟೇಶ್ ಬೆಳಾಲ್ , ಗೌರವಾಧ್ಯಕ್ಷ ಜಗದೀಶ್ ಜೈನ್, ಉಪಾಧ್ಯಕ್ಷ ಗಣೇಶ್ ವೇಣೂರು, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಉಜಿರೆ, ಸಂಘಟನಾ ಕಾರ್ಯದರ್ಶಿ ಗಣೇಶ್ ಹೆಗ್ಡೆ ನಾರಾವಿ,

ಸಲಹಾ ಸಮಿತಿ ಸದಸ್ಯರು, ಪದಾಧಿಕಾರಿಗಳು ಹಾಗೂ ಸದಸ್ಯರು , ಛಾಯಾ ಮುದ್ದುಕಂದ ಫೋಟೋ ಸ್ಫರ್ಧೆಯ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ವಸಂತ್ ಶರ್ಮ ಸ್ವಾಗತಿಸಿ, ಪತ್ರಿಕಾ ಪ್ರತಿನಿಧಿ ರಂಜನ್ ಕುಮಾರ್ ನೆರಿಯ ವಂದಿಸಿ ,ಮನು ಮದ್ದಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *