Thu. Dec 26th, 2024

ಮೇಷ ರಾಶಿ: ಇಂದು ಶಾಂತವಾದ ಮನಸ್ಸನ್ನು ಯಾರಾದರೂ ಕದಡಬಹುದು. ಕಾರ್ಯವನ್ನು ಚೆನ್ನಾಗಿ ನಿರ್ವಹಿಸಿದರೂ ಕೊನೆಯಲ್ಲಿ ಏನಾದರೂ ಮಾಡಿಕೊಳ್ಳುವಿರಿ. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ.

ವೃಷಭ ರಾಶಿ: ಇಟ್ಟ ನಂಬಿಕೆಗೆ ದ್ರೋಹವನ್ನು ನೀವೇ ಮಾಡಿಕೊಳ್ಳುವಿರಿ. ನಿಮ್ಮನ್ನು ನಂಬಿ ಬಂದವರಿಗೆ ಬೇಸರಕೊಡುವುದು ಬೇಡ. ಹಳೆಯ ಮನೆಯ ದುರಸ್ತಿಗೆ ಹಣವನ್ನು ಖರ್ಚು ಮಾಡುವಿರಿ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಂಧುಗಳ ಸಹಕಾರ ಇಂದು ಲಭ್ಯವಾಗುವುದು.

ಮಿಥುನ ರಾಶಿ: ಹಳೆಯ ದ್ವೇಷವನ್ನು ಮರೆಯಲಾರಿರಿ. ಮೊದಲು ನೀವು ಗಟ್ಟಿಯಾಗಿ ನಿಂತು, ಮತ್ತೊಬ್ಬರನ್ನು ನಿಲ್ಲಿಸಬೇಕು. ನೀವು ಯಾರನ್ನೂ ನಿರ್ಲಕ್ಷ್ಯದಿಂದ ನೋಡುವುದು ಬೇಡ. ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಡುವರು. ನಿಮ್ಮನ್ನು ಕೆಲವು ಸಹೋದ್ಯೋಗಿಗಳು ಟೀಕಿಸಬಹುದು.

ಕರ್ಕಾಟಕ ರಾಶಿ: ಟೀಕಾಸ್ತ್ರಗಳು ನಿಮ್ಮ ಮೇಲೆ ಪ್ರಹಾರವಾಗಬಹುದು. ನಿಮ್ಮ ಅನನುಕೂಲವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳುವಿರಿ. ಮಕ್ಕಳ‌ ಭವಿಷ್ಯಕ್ಕೆ ಹಣವನ್ನು ಕೂಡಿ ಇಡುವಿರಿ. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಇದ್ದುಬಿಡುವಿರಿ. ಸಿಕ್ಕಿದ್ದರಲ್ಲಿ ಸಂತೋಷ ಪಡುವುದನ್ನ ನೀವು ಬೆಳೆಸಿಕೊಳ್ಳಬೇಕಾಗುವುದು. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ.

ಸಿಂಹ ರಾಶಿ: ಉದ್ಯೋಗದ ಕ್ಷೇತ್ರದಲ್ಲಿ ಶತ್ರುಗಳ ಕಾಟ. ಸುಮ್ಮನೇ ವಾದ ಮಾಡುವ ಚಪಲವನ್ನು ಬಿಟ್ಟು ಸಹಜವಾಗಿ ಎಲ್ಲರ ಜೊತೆ ಮಾತನಾಡಿ. ದೈಹಿಕ‌ ಕಾರ್ಯದಲ್ಲಿ ತೊಡಗಿದವರಿಗೆ ಹೆಚ್ಚು ಆದಾಯವು ಇರುವುದು. ಕಾರ್ಯಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ಧಾರ್ಮಿಕ ಸೇವೆಯಲ್ಲಿ ನೀವು ಭಾಗಿಗಳಾಗುವಿರಿ. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು.

ಕನ್ಯಾ ರಾಶಿ: ಉಪಕಾರಕ್ಕೆ ಅಲ್ಪವಾದರೂ ಪ್ರತ್ಯುಪಕಾರವಿರಲಿ. ಕೃತಜ್ಞತೆಯನ್ನು ಬಿಡುವುದು ಬೇಡ. ಇಂದು ನಿಮ್ಮ ಮೇಲೆ ಎಲ್ಲರಿಂದ ಆಕ್ರಮಣವಾಗಬಹುದು. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ದುಡುಕಿ ಯಾವುದನ್ನೂ ಮಾಡುವುದು ಬೇಡ. ನಿಮಗೆ ಸ್ಥಿರಾಸ್ತಿಯ ಮಾರಾಟದಲ್ಲಿ ಏಕಮುಖವಾದ ಅಭಿಪ್ರಾಯ ಬೇಡ. ನಿಮ್ಮ ಕೆಲವು ಆಸೆಗಳನ್ನು ಪೂರೈಸಿಕೊಳ್ಳುವಿರಿ. ಸಮಾಜವು ನಿಮ್ಮ ಸಾಧನೆಯನ್ನು ಗುರುತಿಸೀತು.

ತುಲಾ ರಾಶಿ: ಕಳೆದುಕೊಂಡಲ್ಲಿಯೇ ಹುಡುಕಿದರೆ ಸಿಗಬಹುದು. ನಿಮ್ಮನ್ನು ಗೌರವಿಸಿಲ್ಲ ಎಂಬ ಅಳುಕು ಕಾಣಿಸಬಹುದು. ಅನಿರೀಕ್ಷಿತ ಪ್ರಯಾಣ ಹೋಗುವ ಸಾಧ್ಯತೆ ಇದೆ. ನಿಮ್ಮದಾದ ಕೆಲವು ಅಸಂಬದ್ಧ ವ್ಯವಸ್ಥೆಯನ್ನು ನೀವು ಸರಿ ಮಾಡಿಕೊಳ್ಳಬೇಕು. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು.

ವೃಶ್ಚಿಕ ರಾಶಿ; ಹಣಕಾಸಿನ ವಿಚಾರದಲ್ಲಿ ಅಪನಂಬಿಕೆ ಕಾಣಿಸುವುದು. ಒಳ್ಳೆಯ ಆಚಾರದಿಂದ ನಿಮಗೇ ಸಂತೃಪ್ತಿ ಸಿಗುವುದು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಬಹಳ ದಿನಗಳ‌ ಅನಂತರ ನ್ಯಾಯಾಲಯದಿಂದ ಸಿಕ್ಕ ಜಯವು ಸಂತಸವನ್ನು ಉಂಟುಮಾಡುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ಇಂದು ತುರ್ತಾಗಿ ಬೇಕಾಗಿರುವ ಹಣವನ್ನು ಹೊಂದಿಸಲು ನಿಮಗೆ ಕಷ್ಟವಾಗುವುದು. ಕೃಷಿಗೆ ಸಂಬಂಧಿಸಿದಂತೆ ಹೊಸ ಕಲ್ಪನೆಯನ್ನು ಇಟ್ಟುಕೊಳ್ಳುವಿರಿ.

ಧನು ರಾಶಿ: ಪರಧನದ ಅಲಭ್ಯತೆ ಕಾಣಿಸುವುದು. ಖುಷಿಯಾಗಿರಲು ಹಲವು ಸಂಗತಿಗಳಿದ್ದರೂ ಅದನ್ನು ನಿರ್ಲಕ್ಷಿಸುವಿರಿ. ನಿರುದ್ಯೋಗವು ಚಿಂತೆಯಾಗಿ ನಿಮ್ಮ ಬಗ್ಗೆಯೇ ನಿಮಗೆ ಹಗುರಾದ ಭಾವ ಬರಬಹುದು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ.

ಮಕರ ರಾಶಿ: ನೀವು ಇಂದು ಸೇವಾಮನೋಭಾವದಿಂದ ಕಾರ್ಯದಲ್ಲಿ ತತ್ಪರರಾಗುವಿರಿ. ನಿಮಗೆ ಅನ್ಯತರ ಮಾತು ಬಹಳ ಹಿತವೆನಿಸವುದು. ಅಭಿವೃದ್ಧಿಗೆ ಅವಕಾಶವಿದ್ದರೂ ನಿಮಗೆ ಹಿನ್ನಡೆಯಂತೆ ಎಲ್ಲವೂ ಭಾಸವಾಗುವುದು. ಶ್ರಮಕ್ಕೆ ತಕ್ಕ ಫಲವು ಲಭಿಸಿಲ್ಲ ಎಂದು ನಿಮ್ಮ ಮನಸ್ಸಿಗೆ ಗಾಢವಾಗಿ ತಿಳಿಯುವುದು. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ಸಂಗಾತಿಯ ಮನೋಭಾವವು ನಿಮಗೆ ಇಂದು ಸರಿ ಹೊಂದದು. ವ್ಯವಹಾರದಲ್ಲಿ ನೀವು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬ ಭಾವವು ಆಗಾಗ ಬರುವುದು.

ಕುಂಭ ರಾಶಿ: ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಕಾಣಿಸುವುದು. ಮನಸ್ಸಿನಲ್ಲಿಯೇ ಎಲ್ಲ ಸಂಕಟವನ್ನೂ ನೀವು ಅನುಭವಿಸುವಿರಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ನಂಬಿಕೆ ಕಡಿಮೆ ಆಗುವುದು. ಸಂಬಂಧದಲ್ಲಿ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಳ್ಳಬೇಡಿ. ಯಾರಾದರೂ ಧನಸಹಾಯವನ್ನು ನಿಮ್ಮ ಬಳಿ ಕೇಳಬಹುದು.‌

ಮೀನ ರಾಶಿ: ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವ ಉತ್ಸಾಹದಲ್ಲಿ‌ ಇರುವಿರಿ. ಮನೆಯ ಧಾರ್ಮಿಕ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದುಕೊಂಡರೂ ಅದು ಅಸಾಧ್ಯ ಎನಿಸಬಹುದು. ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬವಾಗಿ ಬರುತ್ತದೆ ಎಂದುಕೊಂಡ ನಿಮ್ಮ ಹಣವು ಬೇಗ ಬರಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ವಿವಾಹಜೀವನವು ಅತ್ಯಂತ ಸುಖದಂತೆ ತೋರುವುದು.

Leave a Reply

Your email address will not be published. Required fields are marked *