ಪುದುವೆಟ್ಟು:(ಡಿ.13) ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕುಮಾರಿ ರವರ ವಿರುದ್ಧ ಸದಸ್ಯರು ತಂದ ಅವಿಶ್ವಾಸ ನಿರ್ಣಯ ಮಂಡನೆ ಯಶಸ್ವಿಯಾಗಿದ್ದು, ಅಧ್ಯಕ್ಷರು ಅಧಿಕಾರ ಕಳೆದುಕೊಂಡಿದ್ದಾರೆ. ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರ ಆಡಳಿತವಿದ್ದು, ಅಧ್ಯಕ್ಷರಾಗಿ ಅನಿತಾ ಕುಮಾರಿ ಕಳೆದ ಒಂದೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
![](https://uplustv.com/wp-content/uploads/2024/12/51b5a0cd-f9b6-499f-a45b-f15e5ee2ea78-1024x1024.jpg)
![](https://uplustv.com/wp-content/uploads/2024/12/u-plus-poster.jpg)
ಇದನ್ನೂ ಓದಿ: ಮಾಲಾಡಿ: ನಿಲ್ಲಿಸಿದ್ದ ಪಿಕಪ್ ವಾಹನ ಕಳ್ಳತನ
ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಬೆಳವಣಿಗೆಯಲ್ಲಿ ಅಧ್ಯಕ್ಷರ ವಿರುದ್ಧ ಅವರದೇ ಪಕ್ಷ ಬೆಂಬಲಿತ ಸದಸ್ಯರು ಅಸಮಾಧಾನಗೊಂಡು, ಅಧ್ಯಕ್ಷರ ಪದಚ್ಯುತಿಗೆ ನ. 20 ರಂದು ಪುತ್ತೂರು ಎ. ಸಿ ಯವರಿಗೆ ಅವಿಶ್ವಾಸ ಸೂಚನಾ ಪತ್ರ ಸಲ್ಲಿಸಿದ್ದರು.
![](https://uplustv.com/wp-content/uploads/2024/12/WhatsApp-Image-2024-07-12-at-16.54.12_23b03a5a.jpg)
![](https://uplustv.com/wp-content/uploads/2024/12/057b1d26-13c1-450b-9ca4-33b6e7226863-810x1024.jpg)
![](https://uplustv.com/wp-content/uploads/2024/12/WhatsApp-Image-2024-10-18-at-11.21.38_8ae796c7-667x1024.jpg)
ಡಿ. 12 ರಂದು ಬೆಳಿಗ್ಗೆ ಪುತ್ತೂರು ಸಹಾಯಕ ಕಮೀಷನರ್ ಉಪಸ್ಥಿತಿಯಲ್ಲಿ ಅವಿಶ್ವಾಸ ಸೂಚನೆ ನಿರ್ಣಯ ಸಭೆ ನಡೆಯಿತು. ಅಧ್ಯಕ್ಷರ ವಿರುದ್ಧ 7 ಮಂದಿ ಹಾಗೂ ಅಧ್ಯಕ್ಷರ ಪರ ಒಬ್ಬರು ಕೈ ಎತ್ತಿ ಬೆಂಬಲ ಸೂಚಿಸಿದರು. ಇದರಿಂದಾಗಿ ಅವಿಶ್ವಾಸ ನಿರ್ಣಯ ಮಂಜೂರಾಗಿದ್ದು, ಅವರು ಅಧಿಕಾರ ಕಳೆದುಕೊಂಡಿದ್ದಾರೆ.
![](https://uplustv.com/wp-content/uploads/2024/12/WhatsApp-Image-2024-11-27-at-14.35.46_c1324692-723x1024.jpg)