Thu. Dec 26th, 2024

Puttur: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳಿಗೆ ಬಿಗ್ ಶಾಕ್..!!! A1‌ & A2ನೇ ಆರೋಪಿಗಳಾದ ಚೇತನ್ ಹಾಗೂ ಮನೀಷ್ ಜಾಮೀನು ಅರ್ಜಿ ರಿಜೆಕ್ಟ್!!! – ಜಾಮೀನು ಅರ್ಜಿ ರಿಜೆಕ್ಟ್‌ ಗೆ ಪ್ರಮುಖ ಕಾರಣವೇನು?!

ಪುತ್ತೂರು :(ಡಿ.13) ನವೆಂಬರ್ 6ರಂದು ತಡರಾತ್ರಿ ಪುತ್ತೂರಿನ ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಮತ್ತು 2ನೇ ಆರೋಪಿಗಳಾದ ಚೇತನ್ ಹಾಗೂ ಮನೀಷ್ ಇವರ ಅರ್ಜಿಯನ್ನು

ಇದನ್ನೂ ಓದಿ: Gukesh: ಚೆಸ್‌ ನಲ್ಲಿ ಇತಿಹಾಸ ನಿರ್ಮಿಸಿದ ಗ್ರ‍್ಯಾಂಡ್ ಮಾಸ್ಟರ್ ಗುಕೇಶ್

ಮಾನ್ಯ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಾದ ಪ್ರತಿದಾದ ನಡೆದು ಇದೀಗ ಮಾನ್ಯ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿ ಅರ್ಜಿಯನ್ನು ತಿರಸ್ಕೃತಗೊಳಿಸಿದೆ.

ದೂರುದಾರರ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡ ಪ್ರತಿಷ್ಠಿತ ಖ್ಯಾತ ನ್ಯಾಯವಾದಿಗಳಾದ ಮಹೇಶ್ ಕಜೆ ಸಮರ್ಥವಾಗಿ ವಾದಮಂಡಿಸಿದ್ದರು.

ಜಾಮೀನು ನಿರಾಕರಣೆಗೆ ಪ್ರಮುಖ ಕಾರಣ..!!!

  1. ಕಲ್ಲೇಗ ಟೈಗರ್ಸ್ ಟೀಂನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಭೀಕರ ಕೊಲೆ ಪುತ್ತೂರಿಗರನ್ನು ಬೆಚ್ಚಿಬೀಳಿಸಿತ್ತು. ಅಕ್ಷಯ್ ಕಲ್ಲೇಗರ ಮೈಮೇಲೆ ಇದ್ದ 50 ಕ್ಕೂ ಹೆಚ್ಚು ಗಾಯದ ಗುರುತುಗಳು ಇದೊಂದು ಭೀಕರ ಕೊಲೆ ಪ್ರಕರಣ ಎಂಬುದನ್ನು ಎತ್ತಿ ತೋರಿಸಿವಂತೆ ಇದೆ.
  2. ಪೋಲೀಸರು ಕಲೆ ಹಾಕಿದ ಪ್ರಮುಖ ಸಾಕ್ಷಿಗಳು ಮಹತ್ವದ ಪಾತ್ರ ವಹಿಸಲಿದೆ. 55 ಸಾಕ್ಷಿಗಳು ಈ ಪ್ರಕರಣದಲ್ಲಿ ಇದ್ದು, ಸಮರ್ಥವಾದ ಸಾಕ್ಷಾಧಾರಗಳು ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
  3. ಪ್ರಮುಖ ಸಾಕ್ಷ್ಯಾಧಾರಗಳ ತನಿಖೆ ನಡೆಯುವ ತನಕ ಆರೋಪಿಗಳನ್ನು ಹೊರ ಬಿಡುವುದು ಸರಿಯಲ್ಲ, ಸಾಕ್ಷಿದಾರರನ್ನು ಬೆದರಿಸುವ ಹಾಗೂ ಭಯಪಡಿಸುವ ಎಲ್ಲಾ ಸಾಧ್ಯತೆಗಳು ಇದೆ ಎಂಬುದು ಅವರ ಕೊಲೆ ಮಾಡಿದ ರೀತಿ, ಮತ್ತು ಕ್ರೌರ್ಯದಿಂದ ಕಂಡುಬರುತ್ತದೆ.

Leave a Reply

Your email address will not be published. Required fields are marked *