ಬಂಟ್ವಾಳ:(ಡಿ.14) ಗ್ಯಾಸ್ ಸಿಲಿಂಡರ್ ಕಳವು ಮಾಡಿದ ಕಳ್ಳನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೋಲೀಸರಿಗೊಪ್ಪಿಸಿದ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: ಸಾವ್ಯ: ಆಕಸ್ಮಿಕವಾಗಿ ಕುಸಿದು ಬಿದ್ದು ಸಾವ್ಯ ನಿವಾಸಿ ನಾಗೇಶ್ ಆಚಾರಿ ಸಾವು!!
ರೀಫಿಲ್‌ಗೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್‌ನ್ನು ಹಗಲು ಹೊತ್ತಿನಲ್ಲೇ ಕಳ್ಳರು ಎಗರಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಇಡ್ಕಿದು ಒಡ್ಯಡ್ಕ ನಿವಾಸಿ ಅಶ್ರಫ್ ಯಾನೆ ಅಚ್ಚುಕು ಎಂಬವ ಆರೋಪಿಯಾಗಿದ್ದು, ಈತನನ್ನು ಸಾರ್ವಜನಿಕರು ಹಿಡಿದು ಪೋಲೀಸರ ಕೈ ಗೆ ನೀಡಿದ್ದಾರೆ.
ಗ್ಯಾಸ್ ಸಿಲಿಂಡರ್ ಕಳವಾದ ವಿಚಾರ ತಿಳಿಯುತ್ತಿದ್ದಂತೆ ಸಿಸಿ.ಕ್ಯಾಮರದ ಪೂಟೇಜ್ ನ್ನು ಬಳಸಿಕೊಂಡು ಸಾರ್ವಜನಿಕರು ಕಳ್ಳನಿಗಾಗಿ ಬೇಟೆಯಾಡಿದ್ದಾರೆ.
ಬೇರಿಕೆ ಎಂಬಲ್ಲಿ ಸಿಲಿಂಡರ್ ಕಳ್ಳರನ್ನು ಅಡ್ಡಗಟ್ಟಿ ವಿಚಾರಿಸಿದಾಗ ಸಾಕ್ಷಿ ಸಮೇತ ಸಿಕ್ಕಿಬಿದ್ದು ಸಾರ್ವಜನಿಕರ ಕೈಯಿಂದ ಗೂಸ ತಿಂದಿದ್ದಾರೆ ಎಂದು ಹೇಳಲಾಗಿದೆ. ಬಳಿಕ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆರೋಪಿ ಅಶ್ರಫ್ ಯಾನೆ ಅಚೂಕು ಸಹಿತ ಕಳವಾದ ಗ್ಯಾಸ್ ಸಿಲಿಂಡರ್‌ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಶ್ರಫ್ ನಟೋರಿಯಸ್ ಆಗಿದ್ದು, ಗ್ರಾಮದಲ್ಲಿ ಅನೇಕ ಬಾರಿ ಸಾರ್ವಜನಿಕರಿಂದ ಬೇರೆ ಘಟನೆಗಳಲ್ಲಿ ಪೆಟ್ಟು ತಿಂದರೂ ಸರಿಯಾಗಿಲ್ಲ ಎಂದು ಹೇಳಲಾಗಿದೆ.