Mon. Apr 7th, 2025

Bantwal: ಸಂಪ್ಯ ಮೂಲದ ವಾರಂಟ್ ಆರೋಪಿಯನ್ನು ಮುಂಬಯಿಯಲ್ಲಿ ಅರೆಸ್ಟ್‌ ಮಾಡಿದ ಬಂಟ್ವಾಳ ಪೊಲೀಸರು .!!

ಬಂಟ್ವಾಳ:(ಡಿ.14) ವಂಚನೆ ಪ್ರಕರಣದ ಆರೋಪಿಯಾಗಿದ್ದು, ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಮುಂಬಯಿಯಲ್ಲಿ ಬಂಧಿಸಿ‌ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ: ಉಜಿರೆ: ಶ್ರೀ ಭಗವದ್ಗೀತಾ ಸ್ಪರ್ಧೆಯಲ್ಲಿ ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಹಂಸಿನಿ ಭಿಡೆಗೆ ರಾಜ್ಯಮಟ್ಟದಲ್ಲಿ ತೃತೀಯ ಬಹುಮಾನ


ಪುತ್ತೂರು ತಾಲೂಕಿನ ಸಂಪ್ಯ ನಿವಾಸಿ ಅಬ್ದುಲ್ ಅಜೀಜ್ ಎಂಬಾತನ್ನು ಬಂಧಿಸಲಾಗಿದ್ದು, ಈತನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು ನಾಲ್ಕು ವಂಚನೆ ಪ್ರಕರಣಗಳು ದಾಖಲಾಗಿವೆ.


ವಂಚನೆ ಸಹಿತ ಇನ್ನಿತರ ಪ್ರಕರಣಗಳಲ್ಲಿ ಈತನ ಮೇಲೆ ಪ್ರಕರಣ ದಾಖಲಾಗಿದ್ದು, ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಬಂಟ್ವಾಳ ಉಪವಿಭಾಗದ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ,

ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಅನಂತಪದ್ಮನಾಭ ಹಾಗೂ ಪೋಲೀಸ್ ಉಪನಿರೀಕ್ಷಕರುಗಳಾದ ರಾಮಕೃಷ್ಣ, ಕಲೈಮಾರ್, ದುರ್ಗಪ್ಪ, ಗೋಪಾಲ‌ ಅವರ ನೇತೃತ್ವದಲ್ಲಿ ಎ.ಎಸ್.ಐ.ಸುಜು, ಹೆಚ್.ಸಿ. ಜಗದೀಶ್ ಅವರು ಮಾಹಿತಿ ಸಂಗ್ರಹಿಸಿ ಮಹಾರಾಷ್ಟ್ರದ ಮುಂಬಯಿ ಎಂಬಲ್ಲಿಗೆ ತೆರಳಿ ಬಂಧಿಸಿದ್ಧಾರೆ.

Leave a Reply

Your email address will not be published. Required fields are marked *