ಕಾರ್ಕಳ:(ಡಿ.14) ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಕಾರ್ಕಳದ ಮುಟ್ಲುಪಾಡಿಯ ಪ್ರೀತಂ ಶೆಟ್ಟಿ(26) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಮಂಡ್ಯದ ನಾಗಮಂಗಲದಲ್ಲಿ ಕಬಡ್ಡಿ ಆಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿದೆ.
ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ , ದಾರಿ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ. ಪ್ರೀತಂ ಶೆಟ್ಟಿ ಉಜಿರೆ ಎಸ್ ಡಿಎಂ ತಂಡದ ಮಾಜಿ ಆಟಗಾರ, ಹಲವು ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.