Thu. Dec 26th, 2024

Kolar: ಅವನಲ್ಲ ಅವಳಾಗಿ ಬದಲಾಗಿ ಒಂದು ವರ್ಷ ತುಂಬುವ ಮುನ್ನವೇ ದುರಂತ ಅಂತ್ಯ ಕಂಡ ಮಂಗಳಮುಖಿ!!! – ಆಲಿಯಾಳ ಪಕ್ಕದಲ್ಲೇ ಯುವಕನೋರ್ವನ ಶವ ಪತ್ತೆ!!! – ಸಾವಿನಸುತ್ತ ಅನುಮಾನಗಳ ಹುತ್ತ!!!

ಕೋಲಾರ (ಡಿ.14): ಖಾದ್ರಿಪುರ ಮೂಲದ ವಸೀಂ, ಆಲಿಯಾ ಆಗಿ ಬದಲಾಗಿ ಇನ್ನೇನು ಒಂದು ವರ್ಷ ತುಂಬುತ್ತಿತ್ತು. ಅವನಲ್ಲ ಅವಳಾಗಿ ಡಿಸೆಂಬರ್ 17ಕ್ಕೆ ಒಂದು ವರ್ಷ ಪೂರೈಸುತ್ತಿರುವುದರಿಂದ ವಸೀಂ ಆಲಿಯಾಸ್ ಅಲಿಯಾ ಎನ್ನುವ ಮಂಗಳಮುಖಿ ಸರ್ಜನ್​ ಮಾತಾ ಪೂಜೆ ಆಯೋಜಿಸಿದ್ದಳು. ಆದ್ರೆ, ದುರಂತ ಅಂದ್ರೆ ಆಲಿಯಾ ದುರಂತ ಅಂತ್ಯಕಂಡಿದ್ದಾಳೆ. ಕೋಲಾರ ನಗರದ ಕೀಲುಕೋಟೆ ರೈಲ್ವೇ ಹಳಿಯಲ್ಲಿ ಆಲಿಯಾಳ ಮೃತದೇಹ ಪತ್ತೆಯಾಗಿದೆ. ಅಚ್ಚರಿ ಅಂದ್ರೆ ಆಲಿಯಾಳ ಪಕ್ಕದಲ್ಲೇ ಯುವಕನೋರ್ವನ ಶವ ಸಹ ಸಿಕ್ಕಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಬಂಟ್ವಾಳ: ಎಸ್.ಡಿ.ಪಿ.ಐ.ಮತ್ತು ಕಾಂಗ್ರೆಸ್ ನಡುವೆ ಮಾರಾಮಾರಿ

ಖಾದ್ರಿಪುರ ಮೂಲದ ವಸೀಂ ಅಲಿಯಾಸ್ ಆಲಿಯಾ(28) ಸಾವನ್ನಪ್ಪಿದ ಮಂಗಳಮುಖಿ ಪಕ್ಕದಲ್ಲೇ ಮತ್ತೋಬ್ಬ ಅಯಾಜ್ ಎನ್ನುವ ಮೆಕಾನಿಕ್ ಮೃತದೇಹ ಪತ್ತೆಯಾಗಿದೆ. ಇಬ್ಬರ ಶವಗಳು ಅಕ್ಕಪಕ್ಕದಲ್ಲೇ ಬಿದ್ದಿದ್ದು, ಸ್ಥಳದಲ್ಲೇ ಬಿಯರ್ ಬಾಟಲಿ, ಮದ್ಯದ ಪ್ಯಾಕೇಟ್, ಕಬಾಬ್, ವಿಮಲ್ ಗುಟ್ಕಾ ಪ್ಯಾಕೇಟ್ ಸೇರಿದಂತೆ ಆಲಿಯಾಳ ಕಲೆಕ್ಷನ್ ಆಗಿದ್ದ ಹಣ ಸಹ ರೈಲ್ವೇ ಹಳಿಯಲ್ಲಿ ಬಿದ್ದಿದೆ. ಹೀಗಾಗಿ ಇಬ್ಬರು ಎಣ್ಣೆ ಮತ್ತಿನಲ್ಲಿದ್ದಾಗ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ. ಆದ್ರೆ, ಇಬ್ಬರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ.

ರಾತ್ರಿ ರೈಲ್ವೇ ಹಳಿ ಮೇಲೆ ಆಲಿಯಾ ಹಾಗೂ ಅಯಾಜ್ ಇಬ್ಬರು ಕೆಲಕಾಲ ಛತ್ರಿ ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಚೆನ್ನಾಗಿ ಕುಡಿದು ಮೈಮರೆತಿದ್ದಾರೆ. ಈ ವೇಳೆ ರೈಲು ಗುದ್ದಿಕೊಂಡು ಹೋಗಿರಬಹುದು ಎಂದು ಎನ್ನಲಾಗಿದೆ. ಸದ್ಯ ಅಕ್ಕಪಕ್ಕದಲ್ಲೇ ಇಬ್ಬರ ಶವಗಳು ಪತ್ತೆಯಾಗಿದ್ದು ಅನುಮಾನಕ್ಕೆ ಕಾರಣವಾಗಿದೆ. ಇಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ರಾ? ಅಥವಾ ತಾವೇ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ್ರಾ? ಇಲ್ಲ ಇದೇನು ಕೊಲೆಯೋ? ಇನ್ನು ಆಲಿಯಾ ಹಾಗೂ ಅಯಾಜ್​ ಹೇಗೆ ಪರಿಚಯ ಆಯ್ತು ಹೀಗೆ ಹತ್ತು ಹಲವು ಅನುಮಾನಗಳು ಕಾಡುತ್ತಿದ್ದು, ಏನಾಗಿದೆ ಎನ್ನುವುದೇ ನಿಗೂಢವಾಗಿದೆ.

15 ವರ್ಷಗಳಿಂದ ಮಂಗಳಮುಖಿಯರ ಸಮರ ಸಂಗಮ ಗ್ರೂಪ್ ನಲ್ಲಿದ್ದ ವಸೀಂ, ಆಲಿಯಾ ಆಗಿ ಬದಲಾಗಿ ಡಿಸೆಂಬರ್ 17ಕ್ಕೆ 1 ವರ್ಷ ಪೂರೈಸಲಿದೆ. ಹಾಗಾಗಿ ಮಂಗಳವಾರ ಸರ್ಜರಿ ಮಾತಾ ಪೂಜೆ ಮಾಡುಲು ಎಲ್ಲಾ ಏರ್ಪಾಟುಗಳನ್ನು ಮಾಡಿಕೊಳ್ಳಲಾಗಿತ್ತಂತೆ. ಅದಕ್ಕೆ ಆಲಿಯಾ ಹತ್ತಿರದ ಸ್ನೇಹಿತರಿಗೆ ಆಹ್ವಾನ ಮಾಡಿದ್ದಳು ಎನ್ನಲಾಗಿದೆ.

ಸಮರ ಸಂಗಮ ಮುಖ್ಯಸ್ಥೆ ಸಮೀರಾ ಜೊತೆಗೆ ಎರಡು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿ ಚಿಕಿತ್ಸೆ ಪಡೆದು ಸರ್ಜರಿ ಮಾತಾ ಪೂಜೆಗೂ ಬೇಕಾದ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿತ್ತು.ಆದ್ರೆ ಎಂದಿನಂತೆ ಕೋಲಾರ ಬಸ್ ನಿಲ್ದಾಣಕ್ಕೆ ಭಿಕ್ಷಾಟನೆಗೆ ಹೋದ ಆಲಿಯಾ ವಾಪಸ್ ಮನೆಗೆ ಬಂದಿಲ್ಲ.

ಲಿಂಗ ಪರಿವರ್ತನೆ ಮಾಡಿಕೊಂಡಿದ್ರು ಸಹ ಆಲಿಯಾಗೆ ಕುಟುಂಬ ಪೋಷಣೆ ಜವಾಬ್ದಾರಿ ಇತ್ತು. ಹಾಗಾಗಿ ಆಲಿಯಾ ತಮ್ಮ ಸ್ನೇಹಿತರೊಂದಿಗೆ ಇರದೆ ಖಾದ್ರಿಪುರದ ತಂದೆ-ತಾಯಿ ಹಾಗೂ ಅಕ್ಕನೊಂದಿಗೆ ಹೆಚ್ಚಾಗಿ ಇರುತ್ತಿದ್ದಳು. ಆದ್ರೆ ಆಲಿಯಾ ಹೀಗೆ ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರಿಗೆ ದಿಕ್ಕುತೋಚದಂತಾಗಿದೆ. ಸಂಜೆ ಮನೆಗೆ ಬರುವುದಾಗಿ ಹೇಳಿ ಹೋಗಿದ್ದ ಆಲಿಯಾ ಮನೆಗೆ ಬಂದಿಲ್ಲ .ಬೆಳಗ್ಗೆ ನೋಡಿದ್ರೆ ಹೆಣವಾಗಿದ್ದಾಳೆ ಎನ್ನುವುದು ಅಕ್ಕ ಹಾಗೂ ಸ್ನೇಹಿತೆ ವಾಸಖಿ ಮಾತು. ಇನ್ನು ಬಂಗಾರಪೇಟೆ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಒಟ್ಟಾರೆ ರೈಲ್ವೇ ಹಳಿಯಲ್ಲಿ ಮಂಗಳಮುಖಿ ಆಲಿಯಾ ಜೊತೆಗೆ ಅಯಾಜ್​ ಸಹ ಮೃತಪಟ್ಟಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ನಿಜಕ್ಕೂ ಅಲ್ಲಿ ಏನಾಗಿದೆ, ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರಾ, ಇಲ್ಲ ಬೇರೆ ಏನಾದ್ರು ಆಗಿದ್ಯಾ ಎನ್ನುವುದ ಮಾತ್ರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *