ಮೇಷ ರಾಶಿ: ಅಲ್ಪವನ್ನು ಕಳೆದುಕೊಂಡಾದರೂ ಒಳ್ಳೆಯದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಉದ್ಯೋಗದ ಸ್ಥಳದಲ್ಲಿ ಇಂದು ನಿಮಗೆ ಒಳ್ಳೆಯವರಾಗುವುದೂ ಕಷ್ಟವೆನಿಸಬಹುದು. ಈ ದಿನ ತಂತ್ರಜ್ಞರಿಗೆ ಒತ್ತಡದ ದಿನವಾಗಲಿದೆ. ಅನಿವಾರ್ಯವಾಗಿ ಕಾರ್ಯಗಳನ್ನು ಮಾಡಬೇಕಾಗಬಹುದು. ನಿಮ್ಮ ಆತ್ಮೀಯವಾದ ಮಾತಿನಿಂದ ಅಪರಿಚಿತರ ಸ್ನೇಹವನ್ನು ಗಳಿಸುವಿರಿ. ಆಕಸ್ಮಿಕವಾಗಿ ಅಪರೂಪದ ವಸ್ತು ಲಾಭವಾಗುವುದು. ದಾಂಪತ್ಯದಲ್ಲಿ ನಂಬಿಕೆ ಹೆಚ್ಚಾಗುವುದು.
ವೃಷಭ ರಾಶಿ: ಇರುವುದನ್ನು ಇರುವಂತೆ ಹೇಳಿ. ಅದಕ್ಕೆ ಕಾಲು ಬಾಲ ಸೇರಿಸಿ ಮತ್ತೇನನ್ನೋ ಮಾಡುವುದು ಬೇಡ.ವಿದ್ಯಾರ್ಥಿಗಳು ಓದಿನ ಬಗ್ಗೆ ಗಂಭೀರವಾದ ನಿರ್ಧಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಆರೋಗ್ಯದ ಸಮಸ್ಯೆಯನ್ನು ತಳ್ಳಿಹಾಕುವುದು ಬೇಡ. ಗುರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವೈಫಲ್ಯಕ್ಕೆ ಕಾರಣವಾಗುವುದು. ನಿಮ್ಮಲ್ಲಿ ಯಾರೂ ಸಾಧಿಸದಿರುವ ಹಾಗೂ ತಾನು ಸಾಧಿಸಿದೆನೆಂಬ ತೃಪ್ತಿ, ಅದಕ್ಕಿಂತ ಹೆಚ್ಚು ಅಹಂಕಾರವು ಕಾಣಿಸುವುದು.
ಮಿಥುನ ರಾಶಿ: ಇಷ್ಟವಿಲ್ಲದಿದ್ದರೂ ಕೆಲವು ಕಾರ್ಯಗಳನ್ನು ಮಾಡಲೇಬೇಕಾಗುವುದು. ದಾಂಪತ್ಯದ ಕಲಹಕ್ಕೆ ಬೇಕೆಂದು ಮಾಡದಿದ್ದರೂ ನಿಮ್ಮ ಮೇಲೆ ಕೆಲವು ಆರೋಪಗಳು ಬರುವುದು. ಚರಾಸ್ತಿಯ ವಿಷಯದಲ್ಲಿ ನೀವು ಅಸ್ವತಂತ್ರರಾಗಿರುವಿರಿ. ಮನೆಯ ಕಾರ್ಯದಲ್ಲಿ ನಿಮಗೆ ಒತ್ತಡವು ಅಧಿಕವಾಗಿ ಇರಲಿದೆ. ಯಾವುದೋ ಸಂಸ್ಥೆಯಲ್ಲಿ ಹಣ ಹೂಡಿಕೆಯನ್ನು ಮಾಡಲು ಹೋಗುವಿರಿ.
ಕರ್ಕಾಟಕ ರಾಶಿ: ತಪ್ಪಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಇಂದು ನಿಮ್ಮ ಉದ್ಯೋಗವನ್ನು ನಿರ್ವಹಣೆ ಮಾಡುವುದು ಕಷ್ಟವಾದೀತು. ಯಾರಾದರೂ ನಿಮ್ಮನ್ನೇ ಗುರಿ ಮಾಡಿಕೊಂಡು ಇರಬಹುದು. ಸಹೋದ್ಯೋಗಿಗಳ ಕಾರಣದಿಂದ ನಿಮ್ಮ ಮೇಲೆ ಒತ್ತಡ ನಿರ್ಮಾಣವಾಗಲಿದ್ದು ಇದರಿಂದ ಎಲ್ಲರ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ನಿಮ್ಮ ನಾಯಕತ್ವವನ್ನು ಇತರರು ಒಪ್ಪಿಕೊಳ್ಳುವುದು ಕಷ್ಟ. ಹಲವು ದಿನಗಳಿಂದ ನಿರೀಕ್ಷಿಸುತ್ತಿದ್ದ ಘಟನೆಯು ಇಂದು ನಡೆಯುವುದು.
ಸಿಂಹ ರಾಶಿ: ಅನಿರೀಕ್ಷಿತವಾಗಿ ಬರುವ ಹಣನ್ನು ಒಪ್ಪಿಕೊಳ್ಳಲಾರಿರಿ. ನಿರಂತರ ಪ್ರಯತ್ನಕ್ಕೆ ಫಲವು ಸಿಗುವುದು. ಇಂದಿನ ತಪ್ಪು ಕಾರ್ಯಗಳಿಗೆ ಆತ್ಮ ಸಾಕ್ಷಿ ಅಡ್ಡ ಬರಬಹುದು. ಸಾಹಿತ್ಯಾಸಕ್ತರಿಗೆ ಕಲಾವಿದರಿಗೆ ಸಮ್ಮಾನಾದಿಗಳು ಸಿಗುವುದು. ಹಿತಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲಾಗದು. ಉಗುಳಲೂ ನುಂಗಲೂ ಆಗದ ತುಪ್ಪದಂತೆ ಆಗುವುದು. ಅಪರಿಚಿತ ಕರೆಗಳು ಹೆಚ್ಚಾಗುವುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯನ್ನು ತಂದುಕೊಳ್ಳಲಾರಿರಿ.
ಕನ್ಯಾ ರಾಶಿ: ನಿಯಂತ್ರಣವನ್ನು ತಪ್ಪದೇ ಹೆಜ್ಜೆ ಇಡುವುದು ಕಷ್ಟ. ಹಣಕಾಸಿನ ವ್ಯವಹಾರದಿಂದ ನಿಮಗೆ ಶುಭವಾಗಲಿದೆ. ಹೊಸ ಯೋಜನೆಗಳು ನಿಮ್ಮನ್ನು ಹಿಡುಕಿ ಬರಬಹುದು. ಎಂತಹ ನೈಪುಣ್ಯವಿದ್ದರೂ ವ್ಯವಹಾರದಲ್ಲಿ ಒಮ್ಮೆ ಎಚ್ಚರ ತಪ್ಪುವ ಸಾಧ್ಯತೆ ಇದೆ. ನಿಮ್ಮ ಕರ್ಮವೇ ನಿಮಗೆ ಹಿಂದಿರುಗಿ ಬರುವಂತೆ ಕಾಣಿಸುವುದು. ನಿಮ್ಮ ಜವಾಬ್ದಾರಿಯ ಕಾರ್ಯಕ್ಕೆ ಕೆಲವು ಅಡೆತಡೆಗಳು ಬರಬಹುದು. ಮನಸ್ಸಿನ ನೋವಿಗೆ ಒಳ್ಳೆಯ ಮದ್ದನ್ನು ಮಾಡಬೇಕಿದೆ.
ತುಲಾ ರಾಶಿ: ನೀವು ಹೆಚ್ಚು ಚಲಾವಣೆಯಲ್ಲಿ ಇರಲು ಬಯಸುವಿರಿ. ಮನೆಯ ಖರೀದಿ ವ್ಯವಹಾರದಲ್ಲಿ ಗೊಂದಲವಾಗುವುದು. ಹತ್ತಿರದವರನ್ನು ನೀವು ಕಳೆದುಕೊಳ್ಳಬೇಕಾದೀತು. ನಿಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲವನ್ನೂ ಹೇಳುವಿರಿ. ತಪ್ಪುಗಳನ್ನು ಸರಿ ಮಾಡಿಯೇ ನಿಮಗೆ ಇಂದಿನ ಶ್ರಮವೆಲ್ಲ ವ್ಯರ್ಥವಾಗುವುದು. ಕಪಟವನ್ನು ನೀವು ಪರೋಕ್ಷವಾಗಿ ನಿಮ್ಮವರ ಮೇಲೇ ಮಾಡುವಿರಿ. ಸಂಗಾತಿಯ ಇಷ್ಟವನ್ನು ಕೇಳಿ ಅವರಿಗೆ ಸಂತೋಷವನ್ನು ನೀಡುವಿರಿ.
ವೃಶ್ಚಿಕ ರಾಶಿ: ಶ್ರಮದ ಕತ್ತಿಯನ್ನು ಎಲ್ಲರ ಮೇಲೆ ಪ್ರಹಾರ ಮಾಡುವಿರಿ. ನಿಮ್ಮ ವಿವಾಹಕ್ಕೆ ಮನೆಯವರಿಂದ ಒತ್ತಡ ಹೆಚ್ಚಾಗುವುದು. ಮಕ್ಕಳ ವಿಚಾರದಲ್ಲಿ ನೀವು ಅನಾದರ ತೋರುವುದು ಸರಿಯಲ್ಲ. ಶಿಸ್ತಿನಿಂದ ಇಂದಿನ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಸುಳ್ಳು ವಿಚಾರವನ್ನು ಹೇಳುವರು. ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಅನಾದರ ತೋರುವುದು ಬೇಡ. ನಿಮ್ಮ ಬಗ್ಗೆ ನಿಮಗೇ ಪೂರ್ಣ ಪ್ರಮಾಣದ ನಂಬಿಕೆ ಸಾಲದು. ನೌಕರರಿಂದ ಕೆಟ್ಟ ಹೆಸರು ಬರಬಹುದು.
ಧನು ರಾಶಿ: ಬಂಧುಗಳ ಒರಟುತನ ನಿಮಗೆ ಇಷ್ಟವಾಗದು. ಉನ್ನತವಾದ ವಿದ್ಯಾಭ್ಯಾಸದ ಕನಸನ್ನು ನೀವು ನನಸು ಮಾಡಿಕೊಳ್ಳುವಿರಿ. ಕೆಲವು ಸವಾಲುಗಳನ್ನು ನೀವು ಎದುರಿಸುವುದು ಅನಿವಾರ್ಯವಾದೀತು. ಮಕ್ಕಳಿಗಾಗಿ ಹಣವನ್ನು ಖರ್ಚು ಮಾಡುವಿರಿ. ಬಂಧುಗಳಿಂದ ಮನೆಯು ತುಂಬಿರುವುದು. ಸಾಮಾಜಿಕ ಗೌರವವನ್ನು ಪಡೆಯುವ ನಿರೀಕ್ಷೆಯು ಹುಸಿಯಾಗುವುದು. ಆಲಸ್ಯದಿಂದ ಈ ದಿನವನ್ನು ಕಳೆಯುವಿರಿ.
ಮಕರ ರಾಶಿ: ಇಂದು ನಿಮ್ಮ ಸನ್ನಿವೇಶಗಳು ಹೊಸ ಆಯಾಮವನ್ನು ಸೃಷ್ಟಿಸಬಹುದು. ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ಸಾಹವನ್ನು ಪಡೆಯುವಿರಿ. ಅನಿರೀಕ್ಷಿತ ವಾರ್ತೆಯಿಂದ ನಿಮಗೆ ಕಷ್ಟವಾಗುವುದು. ಸಾಲವನ್ನು ಹಿಂದಿರುಗಿಸಲು ನಿಮ್ಮ ಹೂಡಿಕೆಯನ್ನು ತೆಗೆಯಬೇಕಾಗುವುದು. ಕೆಲವು ವ್ಯವಹಾರದಲ್ಲಿ ನೀವು ಹಿಂದುಳಿದಂತೆ ನಿಮಗೆ ಅರಿವಾಗುವುದು. ಕಛೇರಿಯಲ್ಲಿ ಇಂದು ಹೇಳಿದ್ದಷ್ಟನ್ನು ಮಾತ್ರ ಮಾಡಿ. ಸಮಾರಂಭಗಳಿಗೆ ಆಹ್ವಾನ ಬರಬಹುದು. ಒಂದೇರೀತಿಯ ಕೆಲಸವು ನಿಮಗೆ ಬೇಸರ ತರಿಸಬಹುದು.
ಕುಂಭ ರಾಶಿ:ಶಸ್ತ್ರಗಳಿಂದ ದೇಹಕ್ಕೆ ಘಾಸಿಯಾಗಬಹುದು. ಒಳ್ಳೆಯದನ್ನು ಬಿಟ್ಟು ಇರುವುದು ನಿಮಗೆ ಸರಿ ಕಾಣಿಸದು. ಸ್ನೇಹಿತರನ್ನು ದೂರ ಮಾಡಿಕೊಂಡು ಒಂಟಿಯಾಗಿ ಇರಲು ಇಚ್ಛಿಸುವಿರಿ. ಯಾರ ಮೇಲೂ ಹಗುರಾದ ಮನೋಭಾವ ಬೇಡ. ಕೆಟ್ಟ ಸನ್ನಿವೇಶವನ್ನು ನೀವು ಅನಿವಾರ್ಯವಾಗಿ ಎದುರಿಸಬೇಕಾಗಬಹುದು. ದೀರ್ಘಕಾಲದ ಗೆಳೆತನವು ಮಾತಿನಿಂದ ಒಡೆದುಹೋಗಬಹುದು. ಹೂಡಿಕೆಯ ಬಗ್ಗೆ ನಿಮ್ಮ ಗಮನವು ಹೆಚ್ಚಾಗಿರಲಿದೆ. ಸ್ವಂತ ಕೆಲಸಗಳಿಗೆ ಸಮಯ ಹೊಂದಾಣಿಕೆ ಮಾಡುವುದು ಕಷ್ಟ. ಸಂಗಾತಿಯಿಂದ ನಿಮಗೆ ಯಾವ ಬೆಂಬಲವೂ ಸಿಗದು.
ಮೀನ ರಾಶಿ: ಮಕ್ಕಳ ಸ್ವಾತಂತ್ರ್ಯಕ್ಕೆ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ನಿಮಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಬಂದಿರುವುದು ಕುಟುಂಬದಲ್ಲಿ ಅಚ್ಚರಿ ತರಿಸುವುದು. ಇಂದು ನಿಮಗೆ ಭೂಮಿಯ ಉತ್ಪನ್ನದಿಂದ ಆದಾಯ ಕಡಿಮೆ ಆಗುವುದು. ನಿಮ್ಮ ಮಾತಿನಿಂದ ನಿಮಗಾಗದವರು ಹುಟ್ಟಿಕೊಳ್ಳುವರು. ಮನೆಯ ಕಾರ್ಯದಲ್ಲಿ ಇಂದು ಮಗ್ನರಾಗುವಿರಿ.ಮನಸ್ಸು ಬಹಳ ಗೊಂದಲದಲ್ಲಿ ಸಿಕ್ಕಿಕೊಳ್ಳಲಿದೆ. ಮನಸ್ಸನ್ನು ಸ್ವಲ್ಪ ಕಾಲ ಬೇರೆ ಕಾರ್ಯಕ್ಕೆ ಜೋಡಿಸಬೇಕಾಗುವುದು.