Sat. Dec 28th, 2024

Bengaluru: ನನ್‌ ಗಂಡ ನನಗಿಂತ ಬೆಕ್ಕನ್ನೇ ಹೆಚ್ಚು ಪ್ರೀತಿಸ್ತಾನೆ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ!!! – ಕೋರ್ಟ್‌ ನೀಡಿದ ತೀರ್ಪೇನು ಗೊತ್ತಾ?!

ಬೆಂಗಳೂರು:(ಡಿ.15) ಬೆಂಗಳೂರಿನ ಮಹಿಳೆಯೊಬ್ಬರು ಗಂಡ ನನಗಿಂತ ಮನೆಯಲ್ಲಿರುವ ಸಾಕು ಬೆಕ್ಕನ್ನೇ ಹೆಚ್ಚು ಪ್ರೀತಿಸ್ತಾನೆ, ಯಾವಾಗ ನೋಡಿದ್ರೂ ಆ ಬೆಕ್ಕಿನ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಾನೆ ಎಂದು ಪತಿ ಹಾಗೂ ಅತ್ತೆ ಮಾವನ ವಿರುದ್ಧ ಐಪಿಸಿ ಸೆಕ್ಷನ್‌ 498 A ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ಕರ್ನಾಟಕ ಹೈಕೋರ್ಟ್‌ ಆ ಮಹಿಳೆ ಪತಿ ವಿರುದ್ಧ ದಾಖಲಿಸಿದ್ದ ದೌರ್ಜನ್ಯ ಆರೋಪದ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ.

ಇದನ್ನೂ ಓದಿ: Raichur: ಕಾಮಂಧ ಮಾವನಿಂದ ಸೊಸೆಯ ಬರ್ಬರ ಹತ್ಯೆ

ದೂರುದಾರ ಮಹಿಳೆಯ ಪತಿ, ಅತ್ತೆ, ಮಾವನ ವಿರುದ್ಧ ದಾಖಲಿಸಿದ್ದ ದೂರಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು , ದೂರುದಾರ ಪತ್ನಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದ್ದಾರೆ.

ಸಾಮಾನ್ಯವಾಗಿ ಮಹಿಳೆಯರ ಮೇಲಾಗುವಂತಹ ದೌರ್ಜನ್ಯಗಳ ವಿರುದ್ದ ಐಪಿಸಿ ಸೆಕ್ಷನ್‌ 498 A ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತದೆ. ಆದ್ರೆ ಈ ಮಹಿಳೆಯ ಪ್ರಕರಣದಲ್ಲಿ ಪತಿ ವರದಕ್ಷಿಣೆ ಕಿರುಕುಳ ನೀಡಿಲ್ಲ ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿಲ್ಲ.

ಬದಲಿಗೆ ಇದೊಂದು ಸಾಕು ಬೆಕ್ಕಿಗೆ ಸಂಧಿಸಿದ ಜಗಳವಾಗಿದ್ದು, ಬೆಕ್ಕು ದೂರುದಾರ ಪತ್ನಿಗೆ ಹಲವು ಬಾರಿ ಪರಚಿರುವ ಆರೋಪವಿದೆ. ಇದೇ ಕಾರಣಕ್ಕೆ ಪತಿ ಪತ್ನಿಯರ ನಡುವೆ ಜಗಳಗಳು ನಡೆದಿವೆ ವಿನಃ ಗಂಡ, ಅತ್ತೆ ಹಾಗೂ ಮಾವ ವರದಕ್ಷಿಣೆ ಕಿರುಕುಳ ಅಥವಾ ಆಕೆಯ ಮೇಲೆ ಹಲ್ಲೆಯನ್ನು ನಡೆಸಿಲ್ಲ.

ಪ್ರಕರಣ ಸಂಬಂಧ ದಾಖಲಾಗಿರುವ ದೂರನ್ನು ಪರಿಶೀಲಿಸಿದರೆ ದೌರ್ಜನ್ಯ ಅಥವಾ ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಗಂಡ ಮತ್ತು ಅತ್ತೆ, ಮಾವನ ವಿರುದ್ಧ ಯಾವುದೇ ಆರೋಪಗಳಿಲ್ಲ. ಇದೊಂದು ಕ್ಷುಲ್ಲಕ ಪ್ರಕರಣವಾಗಿದ್ದು, ಇಂತಹ ಪ್ರಕರಣಗಳು ಕ್ರಿಮಿನಲ್‌ ನ್ಯಾಯ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತಿವೆ, ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

Leave a Reply

Your email address will not be published. Required fields are marked *