Sat. Dec 28th, 2024

Bandaru: ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮುಹೂರ್ತ ಕಾರ್ಯಕ್ರಮ

ಬಂದಾರು :(ಡಿ.16) ಜ. 7 ರಿಂದ ಜ. 12 ನಡೆಯುವ ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಬ್ರಹ್ಮಕಲಶೋತ್ಸವದ ಪ್ರಯುಕ್ತ ಡಿ 16 ರಂದು ದೇವಸ್ಥಾನದ ವಠಾರದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ಮಂಗಳೂರು: ಅಡಿಕೆ ಕ್ಯಾನ್ಸ‌ರ್ ಕಣ ಪ್ರತಿಬಂಧಕ

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರು ಹಾಗೂ ಕನಸಿನ ಮನೆ ಲಕ್ಷ್ಮೀ ಇಂಡಸ್ಟ್ರೀಸ್ ಉಜಿರೆ ಇದರ ಮಾಲಕರಾದ ಶ್ರೀ ಮೋಹನ್ ಕುಮಾರ್ ಈ ಚಪ್ಪರ ಮುಹೂರ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕರಾದ ಬಾಲಕೃಷ್ಣ ಪೂಜಾರಿ ಬಜಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಮಹಾಬಲ ಗೌಡ , ಪ್ರಧಾನ ಕಾರ್ಯದರ್ಶಿ ಹರೀಶ್ ಪರಪ್ಪಾಜೆ,

ಕೋಶಾಧಿಕಾರಿ ಕೇಶವ ಗೌಡ ಕೊಂಗುಜೆ, ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು, ಕಾರ್ಯದರ್ಶಿ ಉಮೇಶ್ ಗೌಡ ಅಂಗಡಿಮಜಲು, ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತರಾಮ ಶಬರಾಯ, ಅನುವಂಶೀಯ ಆಡಳಿತ ಮೊಕ್ತೇಸರಾದ ಕುಕ್ಕಪ್ಪ ಗೌಡ, ಆಡಳಿತ ಮಂಡಳಿ ಮಾಜಿ ಅಧ್ಯಕ್ಷರಾದ ಹೊನ್ನಪ್ಪ ಗೌಡ,

ಜೀರ್ಣೊದ್ದಾರ ಸಮಿತಿ ಮಾಜಿ ಅಧ್ಯಕ್ಷರಾದ ಆದಪ್ಪ ಗೌಡ ಹಾರ್ತ್ಯಾರು, ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ವೇತಾ ಹಾರ್ತ್ಯಾರು, ಚಪ್ಪರ ಸಮಿತಿ ಸಂಚಾಲಕರಾದ ಗೋಪಾಲಗೌಡ ಅಡ್ಡಾರು, ರಮೇಶ್ ಪೂಜಾರಿ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಚಪ್ಪರ ಮುಹೂರ್ತ ನಡೆದು ಬ್ರಹ್ಮಕಲಶೋತ್ಸವದ ಅಧಿಕೃತವಾಗಿ ಪೂರ್ವಸಿದ್ಧತೆ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಯಿತು.

Leave a Reply

Your email address will not be published. Required fields are marked *