ಬಂದಾರು :(ಡಿ.16) ಶಿವ ಫ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ – ಬಂದಾರು ಇದರ ಆಶ್ರಯದಲ್ಲಿ 9 ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಹಾಗೂ ಮುಕ್ತ ಮಹಿಳೆಯರ ತ್ರೋಬಾಲ್ ಮತ್ತು ಪುರುಷರ ಮತ್ತು ಮಹಿಳೆಯರ ಮುಕ್ತ
ಇದನ್ನೂ ಓದಿ: ಕೊಕ್ಕಡ: ಬೈಕ್ ಗೆ ಖಾಸಗಿ ಬಸ್ ಡಿಕ್ಕಿ
ಹಗ್ಗಜಗ್ಗಾಟ ಸ್ಪರ್ಧೆ ಡಿಸೆಂಬರ್ 15 ರಂದು ಶಿವಫ್ರೆಂಡ್ಸ್ ಕ್ರೀಡಾಂಗಣ ಖಂಡಿಗ – ಮೈರೋಳ್ತಡ್ಕ ದಲ್ಲಿ ನಡೆಯಿತು.ಕುರಾಯ ಶಿವ ಫ್ರೆಂಡ್ಸ್ ಅಧ್ಯಕ್ಷರಾದ ಸುಂದರ ಗೌಡ ಖಂಡಿಗ ಸಭಾಧ್ಯಕ್ಷತೆ ವಹಿಸಿದ್ದರು.
ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಇದರ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ , ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿಯಾದ ರಘುಪತಿ ಭಟ್ ಅನಾಬೆ,
ಬಂದಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ, ಬಂದಾರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶ್ರೀಮತಿ ಪರಮೇಶ್ವರಿ ಕೆ ಗೌಡ,
ಸಂದೀಪ್ ಎಂ ಮಿತ್ತೂರು ಮೆಸ್ಕಾಂ ಇಲಾಖೆ ಮಂಗಳೂರು., ಪದ್ಮುಂಜ ಸಿ ಎ ಬ್ಯಾಂಕ್ ನಿರ್ದೇಶಕರಾದ ಅಶೋಕ ಗೌಡ ಪಾಂಜಾಳ, ದಿನೇಶ್ ಗೌಡ ದಾಸರಕೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕು. ಕುಸುಮ ಎಂ ಎಸ್ ನೆರೋಲ್ದಪಲ್ಕೆ -ಪೆರ್ಲ ಬೈಪಾಡಿ. – ಯುವ ಗಾಯಕಿ, ಚಂದ್ರಹಾಸ ಕುಂಬಾರ ಶ್ರೀರಾಮನಗರ ಬಂದಾರು – ಯುವ ಕವಿ, ಕು. ತೇಜಸ್ವಿನಿ ಪೂಜಾರಿ ಬೊಲ್ಜೆ – ಬಂದಾರು,
ಸೀನಿಯರ್ & ಜೂನಿಯರ್ ವಿಭಾಗದಲ್ಲಿ ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ಚಿನ್ನದ ಪದಕ ವಿಜೇತೆ, ಶ್ರೇಯಸ್ ಬೆಂಗಾಯಿ ರಾಷ್ಟ ಮಟ್ಟದ ಕ್ರೀಡಾಪಟು,
ಇವರಿಗೆ ಸನ್ಮಾನ ಹಾಗೂ ಸಂದೀಪ್ ಎಂ ಮಿತ್ತೂರು ಮೆಸ್ಕಾಂ ಸಿಬ್ಬಂದಿ ಇವರಿಗೆ ಬೀಳ್ಕೊಡುಗೆ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿದರು. ಶಿವಫ್ರೆಂಡ್ಸ್ ಸದಸ್ಯರೆಲ್ಲರೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.