Fri. Dec 27th, 2024

Telugu Bigg Boss : ತೆಲುಗು ಬಿಗ್ ಬಾಸ್​ ಕಿರೀಟ ಗೆದ್ದ ಕನ್ನಡದ ಹುಡುಗ!!

Telugu Bigg Boss (ಡಿ.16) ಬಿಗ್ ಬಾಸ್​ನಲ್ಲಿ ಸ್ಪರ್ಧೆ ಮಾಡಬೇಕು ಎಂದರೆ ಸಾಕಷ್ಟು ಟ್ಯಾಲೆಂಟ್ ಬೇಕು. ಅದನ್ನು ವಿನ್ ಆಗಬೇಕು ಎಂದರೆ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿರಬೇಕು.

ಇದನ್ನೂ ಓದಿ: ಉಜಿರೆ: ಕಾರು ಹಾಗೂ ಸ್ಕೂಟರ್‌ ನಡುವೆ ಭೀಕರ ಅಪಘಾತ

ಈಗ ‘ತೆಲುಗು ಬಿಗ್ ಬಾಸ್ ಸೀಸನ್ 8’ರಲ್ಲಿ ಕನ್ನಡದ ಹುಡುಗ ನಿಖಿಲ್ ಮಳಿಯಕ್ಕಲ್ ಗೆದ್ದಿದ್ದಾರೆ. ಈ ಮೂಲಕ ಅವಾರ್ಡ್​ನ ಬಾಚಿಕೊಂಡಿದ್ದಾರೆ. ರಾಮ್ ಚರಣ್ ಅವರು ಚೆಕ್ ಹಾಗೂ ಅವಾರ್ಡ್​ನ ನಿಖಿಲ್​ಗೆ ನೀಡಿದ್ದಾರೆ. ಬೇರೆ ಭಾಷೆಗೆ ತೆರಳಿ ಕನ್ನಡದ ಹುಡುಗ ಗೆದ್ದಿರುವುದರಿಂದ ದಾಖಲೆ ಸೃಷ್ಟಿ ಆಗಿದೆ.

ನಿಖಿಲ್ ಅವರು ಮೂಲತಃ ಕರ್ನಾಟಕದವರು. ಅವರು ಹುಟ್ಟಿದ್ದು ಮೈಸೂರಿನಲ್ಲಿ. ಅವರಿಗೆ ತೆಲುಗು ಚಿತ್ರರಂಗದ ಜೊತೆ, ಅಲ್ಲಿನ ಕಿರುತೆರೆ ಜೊತೆ ಒಳ್ಳೆಯ ನಂಟು ಬೆಳೆದಿದೆ. ಅವರು ನಟ ಹಾಗೂ ಯೂಟ್ಯೂಬರ್. ನಿಖಿಲ್​ಗೆ ಇನ್ನೂ 27 ವರ್ಷ.

ಅವರು 2016ರಲ್ಲಿ ‘ಊಟಿ’ ಹೆಸರಿನ ಕನ್ನಡ ಸಿನಿಮಾ ಮಾಡಿದರು. 1991ರಲ್ಲಿ ನಡೆದ ಕಾವೇರಿ ಧಂಗೆಯಲ್ಲಿ ಬೇರೆ ಆಗುವ ಜೋಡಿ 12 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಾರೆ. ಈ ರೀತಿಯ ಕಥೆಯನ್ನು ಸಿನಿಮಾ ಹೊಂದಿತ್ತು. 2019ರಲ್ಲಿ ಪ್ರಸಾರ ಆರಂಭಿಸಿದ ತೆಲುಗಿನ ‘ಗೋರಿಂಟಕು’ ಧಾರಾವಾಹಿ ಮೂಲಕ ಅವರು ತೆಲುಗು ರಂಗದಲ್ಲಿ ಫೇಮಸ್ ಆದರು.

ನಿಖಿಲ್ ಅವರು ಸೆಪ್ಟೆಂಬರ್ 1ರಂದು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು. ಬಿಗ್ ಬಾಸ್​ನಲ್ಲಿ ಭರ್ಜರಿ ಮನರಂಜನೆ ನೀಡಿ ಗಮನ ಸೆಳೆದರು. ಈಗ ಬಿಗ್ ಬಾಸ್ ವಿನ್ ಆಗಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಜೊತೆಗೆ ಸುಂದರವಾದ ಒಂದು ಕಪ್ ಸಿಕ್ಕಿದೆ. ಜೊತೆಗೆ ಒಂದು ಕಾರ್ ಕೂಡ ಗಿಫ್ಟ್ ಆಗಿ ಸಿಕ್ಕಿದೆ.

Leave a Reply

Your email address will not be published. Required fields are marked *