Fri. Dec 27th, 2024

ಮೇಷ ರಾಶಿ: ಮಹಾತ್ಮರ ಆಶೀರ್ವಾದ ನಿಮಗೆ ಅಕಸ್ಮಾತ್ ಸಿಕ್ಕಿ ಸಂತೋಷವಾಗುವುದು. ಇಂದು ಮನೆಯಿಂದ ದೂರವಿರಬೇಕಾದ ಸ್ಥಿತಿ ಬರುವುದು. ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ನಿಮ್ಮ ಒತ್ತಡಗಳು ಎಂದಿಗಿಂತ ಕಡಿಮೆ ಇರಲಿದೆ. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವಂತೆ ನೋಡಿಕೊಳ್ಳುವಿರಿ. ಭೂಮಿಯ ಒಳಗೆ ಸಿಗುವ ವಸ್ತುಗಳಿಂದ ಲಾಭವನ್ನು ಪಡೆಯಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ.

ವೃಷಭ ರಾಶಿ: ಅನುಪಸ್ಥಿತಿಯಲ್ಲಿ ಆದ ಕಾರ್ಯಕ್ಕೆ ಬೇಸರವಾಗಲಿದೆ. ಇಂದು ಸ್ಥಿರಾಸ್ತಿಯ ಒಡೆತನ ನಿಮಗೆ ಸಿಗಬಹುದು. ಮನಸ್ಸಿಗೆ ಅಹಿತಕರ ಘಟನೆಗಳು ತೊಂದರೆಯನ್ನು ತರಬಹುದು. ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಸಂತೋಷದಿಂದ ಮಾಡುವುದನ್ನು ಕಷ್ಟಪಟ್ಟು ಮಾಡುವಿರಿ. ಸಂಚಾರದಲ್ಲಿ ಅಪಘಾತಗಳು ಸಂಭವಿಸಬಹುದು. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಚಾಲಾಯಿಸಿ. ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು.

ಮಿಥುನ ರಾಶಿ: ಪ್ರತಿಫಲಾಪೇಕ್ಷೆ ಇಲ್ಲದೇ ನಿಮ್ಮವರಿಗೆ ಧನಸಹಾಯವನ್ನು ಮಾಡುವಿರಿ. ಅಪ್ರಾಮಾಣಿಕತೆಯಿಂದ ಆದ ಲಾಭವು ಸದ್ಯಕ್ಕೆ ಸಂತೋಷವನ್ನು ಕೊಡುವುದು. ಪಾಲುದಾರಿಕೆಯಲ್ಲಿ ನಿಮಗೆ ಸೂಕ್ತ ವ್ಯಕ್ತಿಗಳ ಕೊರತೆ ಕಾಣಿಸುವುದು. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಸಹೋದ್ಯೋಗಿಗಳ ಸಹಾಕಾರವು ನೀವು ನಿರೀಕ್ಷಿಸಿದಂತೆ ಸಿಗಲಿದೆ. ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು.

ಕರ್ಕಾಟಕ ರಾಶಿ: ಅಲ್ಪ ಸಮಯವನ್ನು ಸಮಾಜದ ಕಾರ್ಯಕ್ಕೆ ಕೊಡಬೇಕೆನಿಸುವುದು. ಅನ್ಯರ ದೋಷವನ್ನೇ ಹುಡುಕುತ್ತ ಇರುವುದು ಸರಿಯಾಗದು. ಸಂಗಾತಿಗಾಗಿ ಮನಸ್ಸಿಲ್ಲದಿದ್ದರೂ ಖರ್ಚು ಮಾಡಬೇಕಾಗುವುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ವ್ಯಾಪಾರದಲ್ಲಿ ಅನುಕೂಲತೆ ಇದ್ದರೂ ಉದರ ಪೀಡಿಯು ನಿಮ್ಮ ವ್ಯಾಪಾರದ ಉತ್ಸಾಹವನ್ನು ಕಡಿಮೆ ಮಾಡುವುದು.

ಸಿಂಹ ರಾಶಿ: ಯಾರಿಂದಲೋ ನಿಮ್ಮಲ್ಲಿರುವ ಹೊಸ ವ್ಯಕ್ತಿತ್ವದ ಪರಿಚಯವಾಗಬಹುದು. ಅಪರಿಚಿತರ ಮಾತಿಗೆ ಮನಸೋಲುವಿರಿ. ಪ್ರೀತಿ ಶುರುವಾಗಬಹುದು. ನಿಮ್ಮ ಕಾರ್ಯವು ಸಫಲವಾಗಲು ಶ್ರಮ ಅಗತ್ಯ. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ರಾಜಕೀಯದ ಬಲದಿಂದ ಕಾನೂನಿನ ಸಮರವು ನಿಮ್ಮ ಪರವಾಗಬಹುದು. ವಾಹನ ಚಲಾಯಿಸುವಾಗ ಜಾಗರೂಕತೆ ಮುಖ್ಯ. ಪರಪುರುಷರಿಂದ ಏನಾದರೂ ತೊಂದರೆಗಳು ಆಗಬಹುದು. ಕಾರ್ಯದಲ್ಲಿ ಗೊಂದಲವನ್ನು ಮಾಡಿಕೊಳ್ಳುವುದು ಬೇಡ.

ಕನ್ಯಾ ರಾಶಿ: ಯಾರನ್ನೋ ನೋಯಿಸಿ ಅನಂತರ ಸಂಕಟಪಡುವಿರಿ. ಸಂಗಾತಿಯನ್ನು ಸಂಭಾಳಿಸಲು ಸೋಲಾಗಬಹುದು. ಶತ್ರುಗಳು ನಿಮ್ಮ ವಿರುದ್ಧ ಮಾಡುವ ತಂತ್ರಗಳು ನಿಮಗೆ ಪೂರಕವಾಗಿಯೇ ಬರುವುದು. ಮೇಲಧಿಕಾರಿಗಳ ಜೊತೆ ದೂರ ಪ್ರಯಾಣವನ್ನು ಮಾಡಬೇಕಾಗುವುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ.

ತುಲಾ ರಾಶಿ: ಯಾರದೋ ಮೆಚ್ಚುಗೆಗಾಗಿ ಮಾಡುವ ಕೆಲಸವು ವ್ಯರ್ಥವಾಗುವುದು. ಸ್ಪರ್ಧಾತ್ಮಕ ವಿಚಾರಗಳಲ್ಲಿ ನಿಮಗೆ ಸೋಲಾಗಬಹುದು. ಆಪ್ತರ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ. ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ನೀವು ಹಣದ ಸುಳಿವನ್ನು ಪಡೆದು ಪ್ರಪಾತಕ್ಕೆ ಬೀಳುವಿರಿ. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ: ಮೈ ಮರೆತು ಕೆಲವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ನಿಮ್ಮ ಗೃಹ ನಿರ್ಮಾಣಕ್ಕೆ ಯಾರಿಂದಲಾದರೂ ಸಹಕಾರ ಸಿಗಲಿದೆ. ಎಷ್ಟೋ ವರ್ಷಗಳ ಅನಂತರದ ಸ್ನೇಹಮಿಲನ ನಿಮಗೆ ಆಹ್ಲಾದವನ್ನು ತರುವುದು. ಇಂದು ನಿಮಗೆ ದಾನದಲ್ಲಿ ಮನಸ್ಸಾಗುವುದು. ಕೆಲವರ ಮಾತು ಶಾಪವಾದರೂ ವರವಾಗಬಹುದು. ಉದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಖುಷಿಗೆ ಅನೇಕ ಅವಕಾಶಗಳಿದ್ದರೂ ನೀವು ಅದೆಲ್ಲವನ್ನೂ ಬಿಟ್ಟು ನಕಾರಾತ್ಮಕವಾಗಿ ಯೋಚಿಸುವಿರಿ.

ಧನು ರಾಶಿ: ನಿಮ್ಮ ಬಗ್ಗೆ ಅನಪೇಕ್ಷಿತ ಮಾತುಗಳು ಕಿವಿಗೆ ಬೀಳುವುದು. ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧನಾ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸವು ನಿಮ್ಮ ಕಾರ್ಯವನ್ನು ಹಾಳುಮಾಡಬಹುದು.

ಮಕರ ರಾಶಿ: ಆರ್ಥಿಕ ನಷ್ಟವನ್ನು ಭರಿಸಿಕೊಳ್ಳಲು ಅನ್ಯ ಉಪಾಯವನ್ನು ಹೂಡುವಿರಿ. ಹೊಸ ಕಾರ್ಯವನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಅನಿವಾರ್ಯವಾಗಿ ಸಣ್ಣ ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ಮಂಗಲ ಕಾರ್ಯಕ್ಕೆ ಬಹಳ ಸಿದ್ಧತೆಯನ್ನು ಮಾಡುವಿರಿ. ಪ್ರಯಾಣದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ಕಳುಹಿಸಬಹುದು.

ಕುಂಭ ರಾಶಿ: ಇಂದು ಹಣದ ಹಂಚಿಕೆಯಲ್ಲಿ ನಿಮಗೆ ಕಲಹವಾಗುವುದು. ಕಾರ್ಯದಲ್ಲಿ ಒತ್ತಡವು ಒಮ್ಮೆಲೆ ಅಧಿಕವಾಗಿ ಬಂದು ದಿಕ್ಕು ಕಾಣದಗಬಹುದು. ನಿಮ್ಮವರನ್ನು ಕಂಡು ನೀವು ಅಸೂಯೆಪಡುವಿರಿ. ನಿಮ್ಮೆದುರು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಆಹಾರವು ನಿಮಗೆ ರುಚಿಸದೇ ಹೋಗುವುದು. ಮಕ್ಕಳಿಗೆ ಜೊತೆ ಇದ್ದು ಕಲಿಕೆಗೆ ಬೇಕಾದ ಸಹಾಯವನ್ನು ಮಾಡುವಿರಿ. ದೂರ ಪ್ರಯಾಣದಿಂದ ಆರೋಗ್ಯವು ಹದಗೆಡಬಹುದು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು.

ಮೀನ ರಾಶಿ: ಪದಾಧಿಕಾರವನ್ನು ಚಲಾಯಿಸುವುದು ಸೂಕ್ತವಲ್ಲ. ಕೆಲವಷ್ಟನ್ನು ಗಮನಿಸಿದರೆ ಸಾಕು. ಇಂದು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗಬಹುದು. ವಾಹನ ಖರೀದಿಗೆ ಮನೆಯಲ್ಲಿ ಮನಸ್ಸು ಮಾಡುವುದಿಲ್ಲ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು