Sat. Dec 28th, 2024

Charmadi Ghat: ಹಾಸನ ಮೂಲದ ವ್ಯಕ್ತಿ ಚಾರ್ಮಾಡಿ ಘಾಟ್ ನಲ್ಲಿ ಆತ್ಮಹತ್ಯೆಗೆ ಯತ್ನ – ಜೀವ ಉಳಿಸಿದ ಪೊಲೀಸರು!!!

Charmadi Ghat:(ಡಿ.17) ಚಾರ್ಮಾಡಿ ಘಾಟಿಯ ಏಕಲವ್ಯ ಶಾಲೆಯ ಸಮೀಪ ಹಾಸನ ಮೂಲದ ವ್ಯಕ್ತಿಯೋರ್ವ ಹರಿತದ ಆಯುಧದಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ವೇಣೂರು: ಪತ್ನಿಯ ಮೇಲೆ ದೈಹಿಕ ಹಿಂಸೆ, ಹಲ್ಲೆ ಆರೋಪ


ಆದರೆ 112 ಸಂಚಾರಿ ಪೊಲೀಸರು ವ್ಯಕ್ತಿ ಹಾಸನ ಮೂಲದ ಮನು ಎಂಬುವರನ್ನು ರಕ್ಷಿಸಿ ಉಳಿಸಿದ್ದಾರೆ. ಹಾಸನದಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ ಬಳಿ ಏಕಲವ್ಯ ಶಾಲೆಯ ಸಮೀಪ ರಸ್ತೆಯಲ್ಲಿ ತನ್ನ ಕುತ್ತಿಗೆಯನ್ನು ಬ್ಲೇಡಿನಿಂದ ಕುಯ್ದು ಸ್ನೇಹಿತರಿಗೆ ವ್ಯಾಟ್ಸ್ ಆಫ್ ಮೂಲಕ ವೀಡಿಯೋ ಸಂದೇಶ ಕಳುಹಿಸಿದ್ದಾನೆ.

ಅಲರ್ಟ್ ಆದ ಸ್ನೇಹಿತರು 112 ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ 112 ಪೊಲೀಸರು ಚಾರ್ಮಾಡಿ ಘಾಟ್ ಗೆ ತೆರಳಿ ವ್ಯಕ್ತಿಯಿಂದ ಹರಿತವಾದ ಬ್ಲೇಡ್ ಕಸಿದು ಹರಸಾಹಸ ಪಟ್ಟು ಆತನನ್ನು

ಹಿಡಿದು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕುತ್ತಿಗೆಗೆ ವೈದ್ಯರಿಂದ ಹೊಲಿಗೆ ಹಾಕಿಸಿ ಪ್ರಾಣ ಉಳಿಸಿದ್ದಾರೆ. ಬಳಿಕ ಅವರ ಪತ್ನಿಗೆ ಕರೆ ಮಾಡಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಿ ಎಸ್.ಅಭಿಷೇಕ್, ದಿಲೀಪ್, ಓಂಕಾರ ನಾಯ್ಕ್ ಭಾಗವಹಿಸಿದ್ದರು. ಪೊಲೀಸರ ಕ್ಷಿಪ್ರವಾದ ಕಾರ್ಯವನ್ನು ಸಾರ್ವಜನಿಕರು ಪ್ರಶಂಶಿಸಿದ್ದಾರೆ.

Leave a Reply

Your email address will not be published. Required fields are marked *