ಉಪ್ಪಿನಂಗಡಿ:(ಡಿ.17) ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಯದ್ವಾತದ್ವಾ ಬಸ್ ಚಲಾಯಿಸಿ ಪ್ರಯಾಣಿಕರನ್ನು ಭೀತಿಯಲ್ಲಿ ಕೆಡವಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಇದನ್ನೂ ಓದಿ: ಉಡುಪಿ : ತೆಂಗಿನ ಕಾಯಿ ಕತ್ತ ಸಾಗಿಸುತ್ತಿದ್ದ ಗೂಡ್ಸ್ ವಾಹನಕ್ಕೆ ಬೆಂಕಿ
ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸಿ ಆಲಂತಾಯದತ್ತ ಸಾಗುತ್ತಿದ್ದ ಕೆಎ 19 ಎಫ್3324 ಕೆಎಸ್ಸಾರ್ಟಿಸಿ ಬಸ್ಸನ್ನು ಅದರ ಚಾಲಕ ಮದ್ಯ ಅಮಲಿನಲ್ಲಿ ಓಲಾಡುತ್ತಾ ಬಸ್ಸನ್ನು ಮನಸೋ ಇಚ್ಛೆ ಚಲಾಯಿಸಿದ ಪರಿಣಾಮ ಮಹಿಳೆಯರು,ಪ್ರಯಾಣಿಕರೆಲ್ಲ ಭಯದಿಂದ ಚೀರಾ ತೊಡಗಿದರು.
ಇದನ್ನು ಗಮನಿಸಿದ ಸ್ಥಳೀಯ ನಾಗರಿಕರು ಬಸ್ಸನ್ನು ಬಲವಂತವಾಗಿ ನಿಲ್ಲಿಸಿ ಚಾಲಕನನ್ನು ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡರು.
ದೇಹದ ನಿಯಂತ್ರಣ ಕಳೆದುಕೊಂಡು ತೂರಾಡುತ್ತಿದ್ದ ಚಾಲಕನನ್ನು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಪ್ರಯಾಣಿಕರು ಅತಂತ್ರರಾಗುವುದನ್ನು ತಪ್ಪಿಸುವ ಸಲುವಾಗಿ ನಿರ್ವಾಹಕನೇ ಬಸ್ಸನ್ನು ಚಲಾಯಿಸಿದರು ಎಂದು ತಿಳಿದು ಬಂದಿದೆ.