Sun. Dec 29th, 2024

Venur: ಪತ್ನಿಯ ಮೇಲೆ ದೈಹಿಕ ಹಿಂಸೆ, ಹಲ್ಲೆ ಆರೋಪ – ಪತಿಯ ವಿರುದ್ಧ ದೂರು ನೀಡಿದ ಪತ್ನಿ!!!

ವೇಣೂರು :(ಡಿ.17) ನವೀನ್ ಎಂಬಾತನು ತನ್ನ ಪತ್ನಿ ಭಾಗ್ಯ ರವರಿಗೆ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ಡಿ.16 ರಂದು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೇರಳ: ಶಬರಿಮಲೆ ಸನ್ನಿಧಾನದಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಾಲಾಧಾರಿ

ಘಟನೆಯ ವಿವರ:

ಭಾಗ್ಯ ರವರು ಸುಮಾರು 16 ವರ್ಷಗಳ ಹಿಂದೆ ನವೀನ್ ರವನನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳು ಇರುತ್ತಾರೆ, ನವೀನ್ ಮದುವೆಯಾಗಿ ಸುಮಾರು 5 ವರ್ಷ ಅನ್ಯೋನ್ಯವಾಗಿದ್ದು

ನಂತರ ವಿಪರೀತ ಮದ್ಯ ಸೇವಿಸುವ ಚಟಹೊಂದಿ ವಿನಾ: ಕಾರಣ ಆಗಾಗ ಕ್ಷುಲ್ಲಕ ವಿಚಾರದಲ್ಲಿ ಮಾತಿನ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದನು.

ಡಿ.15 ರಂದು ರಾತ್ರಿ ನವೀನ್ ನನು ತನ್ನ ಮನೆಯಾದ ಮೂಡುಕೋಡಿ ಗ್ರಾಮದ ಶಿವಕೃಪಾ ಎಂಬಲ್ಲಿ ಭಾಗ್ಯ ರವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವುದಾಗಿ ಭಾಗ್ಯ ರವರು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *