ಬೆಳ್ತಂಗಡಿ :(ಡಿ.18) ಚಾರ್ಮಾಡಿ ಗ್ರಾಮದ ಅನಾರುವಿನಲ್ಲಿರುವ ಮೃತ್ಯುಂಜಯ ನದಿಯಲ್ಲಿ ದನದ ಮಾಂಸ, ತಲೆ ಪತ್ತೆ ಈಗ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: New Airstrip: ಧರ್ಮಸ್ಥಳ ಮಿನಿ ವಿಮಾನ ನಿಲ್ದಾಣಕ್ಕೆ ಜಮೀನು ತೊಡಕು!
ಈ ಕುಕೃತ್ಯಕ್ಕೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷತ್ ನ ಮುಖಂಡ ನವೀನ್ ನೆರಿಯ, ಚಾರ್ಮಾಡಿ ಭಾಗದಲ್ಲಿ ಅಕ್ರಮ ಕಸಾಯಿಖಾನೆ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸರಿಗೆ ಮಾಹಿತಿ ನೀಡಿದರು ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಇದರಿಂದ ಏನ್ ಬೇಕಾದರೂ ನಡೆಯುತ್ತೆ ಅನ್ನುವುದು ಕಸಾಯಿಖಾನೆಯವರಿಗೆ ತಿಳಿದಿದೆ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಕಸಾಯಿಖಾನೆಯಲ್ಲಿ ಉಳಿದ ದನದ ತಲೆ, ಮಾಂಸ, ಚರ್ಮವನ್ನು ತಂದು ನದಿಗೆ ಎಸೆದಿದ್ದಾರೆ ಎಂದು ಆರೋಪಿಸಿದರು.
ಶಬರಿಮಲೆಗೆ ಅಯ್ಯಪ್ಪ ಮಾಲಾಧಾರಿಗಳು ಹೋಗುವ ಸಮಯ ಮೃತ್ಯುಂಜಯ, ನೇತ್ರಾವತಿ ನದಿಯಲ್ಲಿ ಸ್ವಾಮಿಗಳು ಸ್ನಾನ ಮಾಡುತ್ತಾರೆ. ಅವರನ್ನು ಅಶುದ್ಧ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಎಸಗಿದ್ದಾರೆ.
ಈ ಮೂಲಕ ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಕೂಡಲೇ ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಂಡು ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆಯನ್ನು ನಿಲ್ಲಿಸಬೇಕು,
ಕಾನೂನಿನ ಪ್ರಕಾರ ಅಕ್ರಮ ಕಸಾಯಿಖಾನೆ ನಡೆಸುವವರಿಗೆ ಶಿಕ್ಷೆ ಕೂಡ ಇದೆ. ಹೀಗಾಗಿ ಪೊಲೀಸರು ಎಚ್ಚೆತ್ತುಕೊಳ್ಳದಿದ್ದರೆ. ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ವಿಶ್ವಹಿಂದೂ ಪರಿಷದ್ ಬೃಹತ್ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
11 ಚೀಲಗಳಲ್ಲಿ ಮಾಂಸ, ತಲೆ ಪತ್ತೆ..!
ಚಾರ್ಮಾಡಿ ಗ್ರಾಮದ ಅನಾರುವಿನಲ್ಲಿರುವ ಮೃತ್ಯುಂಜಯ ನದಿಯಲ್ಲಿ ಸರಿ ಸುಮಾರು 11 ಚೀಲಗಳಲ್ಲಿ ದನದ ಮಾಂಸ ಮತ್ತು ದನದ ತಲೆ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಧರ್ಮಸ್ಥಳ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ, ತನಿಖೆ ನಡೆಸುತ್ತಿದ್ದಾರೆ. ಆದರೆ ಇಷ್ಟು ಪ್ರಮಾಣದ ತಲೆ ಮತ್ತು ಮಾಂಸ ನೋಡಿ ಜನ ಬೆಚ್ಚಿಬಿದ್ದಿದ್ದರು. ಅಲ್ಲದೇ, ಅಕ್ರಮ ಕಸಾಯಿಖಾನೆಯವರು ತಂದು ಇಲ್ಲಿ ಎಸೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.