ಬೆಳ್ತಂಗಡಿ:(ಡಿ.18) ಬೆಳ್ತಂಗಡಿ ವಕೀಲರ ಸಂಘ (ರಿ.) ಹಾಗೂ ಯುವ ವಕೀಲರ ವೇದಿಕೆ ವತಿಯಿಂದ ವಕೀಲರ ಭವನದಲ್ಲಿ ಆಚರಿಸಲಾಯಿತು.
ಇದನ್ನೂ ಓದಿ: ಚಾರ್ಮಾಡಿ: ಕ್ಷುಲ್ಲಕ ವಿಚಾರಕ್ಕೆ ಮಸೀದಿಗೆ ನುಗ್ಗಿದ ತಂಡ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಶ್ರೀ ಮನು ಬಿ ಕೆ, ಪ್ರಧಾನ ನ್ಯಾಯಾಧೀಶರಾದ ಶ್ರೀ ಸಂದೇಶ್ ಕೆ, ಹೆಚ್ಚುವರಿ ನ್ಯಾಯಾಧೀಶರಾದ ಶ್ರೀ ವಿಜಯೇಂದ್ರ ಟಿ ಎಚ್ ಉಪಸ್ಥಿತರಿದ್ದರು.
ಗೌರವ ಅಥಿತಿಗಳಾಗಿ ಮಂಗಳೂರಿನ ಹಿರಿಯ ನ್ಯಾಯವಾದಿ ಶ್ರೀ ಎಂ ಪಿ ನೋರೋನ್ಹ ಕ್ರಿಸ್ಮಸ್ ಹಬ್ಬದ ಸಂದೇಶವನ್ನು ಸಾರಿದರು, ಈ ಸಂದರ್ಭದಲ್ಲಿ ಈ ಹಬ್ಬವು ಶಾಂತಿಯ ಸಂಕೇತವಾಗಿದೆ, ಇಂತಹ ಆಚರಣೆಯನ್ನು ಹಮ್ಮಿಕೊಂಡ ಬೆಳ್ತಂಗಡಿ ವಕೀಲರ ಸಂಘವನ್ನು ಅಭಿನಂದಿಸಿ ಈ ಸಂಘವು ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಅಧ್ಯಕ್ಷರ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಇವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕೀಲರಾದ ಫಾದರ್ ಶ್ರೀ ವಿನೋದ್ ಮಸ್ಕರೆನ್ಹಸ್ ರವರನ್ನು ಸನ್ಮಾನಿಸಲಾಯಿತು.
ಸೆಲ್ಫಿ ವಿತ್ ಸಾಂತಾ ಕ್ಲಾಸ್, ಲಕ್ಕಿ ಪರ್ಸನ್ ಆಫ್ ದಿ ಇಯರ್, ಲಕ್ಕಿ ಚೇರ್ ನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ವಿಶೇಷ ಆಕರ್ಷಣೆಯಾಗಿ ಸಾಂತ ಕ್ಲಾಸ್ ( ಸುಶಾಂತ್ ) ಹಬ್ಬದ ಮೆರುಗನ್ನು ಹೆಚ್ಚಿಸಿದರು.
ಸಮಿತಿಯ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಎಸ್ ಲೋಬೊ ರವರು ಸ್ವಾಗತಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿಕೆ ರವರು ನೆರೆದಿದ್ದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಯುವಕೀಲರ ವೇದಿಕೆ ಅಧ್ಯಕ್ಷರಾದ ಶ್ರೀ ಸಂದೀಪ್ ಡಿಸೋಜ ಇವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಹಿರಿಯ ವಕೀಲರಾದ ಶ್ರೀ ಸೇವಿಯರ್ ಪಾಲೇಲಿ ಹಾಗೂ ಶ್ರೀಮತಿ ಜೋಸ್ನಾ ವೇಲೋನ ಕೊರೆಯ ನಿರೂಪಿಸಿದರು.