Fri. Dec 27th, 2024

ಮೇಷ ರಾಶಿ : ಗಟ್ಟಿಯಾದ ನಿಮ್ಮ ಮನಸ್ಸು ಇಂದು ಕರಗುವ ಸಂದರ್ಭವು ಬರುವುದು.‌ ಇಂದು ಮನೆಯ ಹಲವು ಕಾರ್ಯಗಳನ್ನು ಒಬ್ಬರೇ ಮಾಡಬೇಕಾಗುವುದು. ಕಟುವಾಗಿ ತಿರಸ್ಕರಿಸದೇ ಮೆಲ್ಲನೆ ಮಾತನಾಡಿ. ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ವರ್ಗಾವಣೆಯ ಭೀತಿ ಕಾಡಲಿದೆ.

ವೃಷಭ ರಾಶಿ :ಉದ್ಯೋಗಕ್ಕಾಗಿ ಅನೇಕ ಕರೆಗಳು ಬಂದು ನಿಮಗೆ ಕಿರಿಕಿರಿ ಮಾಡಬಹುದು. ಏನಾದರೂ ಹೊಸ ಉತ್ಪನ್ನಗಳನ್ನು ನಿರ್ಮಾಣ‌ಮಾಡುವ ಆಸೆ ಬರುವುದು. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ‌ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು.

ಮಿಥುನ ರಾಶಿ :ಅಲ್ಪ ಹಣವಾದರೂ ಕೈ ಸೇರಿದರೆ ಖುಷಿಪಡಿ. ಪುರುಷರ ಜೊತೆ ಸಹೋದರ ಭಾವವನ್ನು ಇಟ್ಟುಕೊಂಡು ವರ್ತಿಸುವಿರಿ. ಇಂದು ನಿಮ್ಮ ಮನಸ್ಸಿಗೆ ಬೇಕಾದ ವಿಶ್ರಾಂತಿಗೆ ಸ್ಥಳದ ಅನ್ವೇಷಣೆ ಮಾಡುವಿರಿ. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು.

ಕರ್ಕಾಟಕ ರಾಶಿ :ಯಾರಮೇಲಾದರೂ ಒಡೆತನ ಇಟ್ಟುಕೊಳ್ಳುವ ಹಂಬಲವಿರುವುದು. ಆಕಸ್ಮಿಕ ತೊಂದರೆಗಳನ್ನು ಎದುರಿಸುವ ಎದೆಗಾರಿಕೆ ಬೇಕು. ಇಂದು ನಿಮ್ಮ ಅಸತ್ಯದ ಮಾತು ಎಲ್ಲರಿಗೂ ತಿಳಿಯುವುದು. ಧಾರ್ಮಿಕ ಆಸಕ್ತಿಯು ಇಂದು ಅಧಿಕವಾಗಿ ಇದ್ದು ಹೆಚ್ಚಿನ ಸಮಯವನ್ನು ದೇವರ ಸನ್ನಿಧಿಯಲ್ಲಿ ಕಳೆಯುವಿರಿ.

ಸಿಂಹ ರಾಶಿ :ಸಿಟ್ಟನ್ನು ನಿಮ್ಮ ಕೈಗೆ ತೆಗೆದುಕೊಳ್ಳಬಹುದು. ಇಂದಿನ ದಿನವನ್ನು ಒಳ್ಳೆಯ ದಿನವನ್ನಾಗಿ ಮಾಡಿಕೊಳ್ಳಬಹುದು. ಇಂದು ಮಾಡಬೇಕಾದುದನ್ನು ಮಾಡಿ. ಅನಂತರ ಕೊರಗುತ್ತ ಇರುವುದು ಬೇಡ. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ಇಂದು ಒಂದು ಮಿತಿಯಲ್ಲಿ ನಿಮ್ಮ ಮಾತಿರಲಿ. ತಾಯಿಯ ಸಣ್ಣ ವಿಚಾರಕ್ಕೆ ಕೋಪಗೊಳ್ಳುವಿರಿ. ವೈವಾಹಿಕ ಜೀವನವನ್ನು ಅನಂದಿಸುವಿರಿ.

ಕನ್ಯಾ ರಾಶಿ :ಸುಂದರೀಕರಣದಲ್ಲಿ ಸಹಭಾಗಿತ್ವವನ್ನು ಕೊಡುವಿರಿ. ಸಕಾರಾತ್ಮಕ ಯೋಚನೆಯೇ ಬಂಧನವನ್ನು ಗಟ್ಟಿಯಾಗಿಸುವುದು. ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಅಭಿಮಾನಿಗಳ ಬಗ್ಗೆ ಸದಭಿಪ್ರಾಯವಿದ್ದರೂ ಪ್ರಕಟಿಸಲಾರಿರಿ. ಕಛೇರಿಯಲ್ಲಿ ಕೆಲಸವು ತುರ್ತು ಸಭೆಗಳ ಕಾರಣ ಹಿಂದುಳಿಯುವುದು.

ತುಲಾ ರಾಶಿ :ಇಂದು ನೀವು ಯಾರಿಗಾದರೂ ಸಮಾನವಾಗಿ ನಿಲ್ಲುತ್ತೇನೆ ಎಂಬ ನಿಲುವು ಬೇಡ. ನಿಮ್ಮ ಸಹಾಯವು ಕೆಲವರ‌ ಸಂತೋಷಕ್ಕೆ ಕಾರಣವಾಗುವುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ಮನೆಯಲ್ಲಿ ನಿಮ್ಮ ಮಾತಿಗೆ ಯಾವ ಉತ್ತರವೂ ಕೊಡದೇ ಇರುವುದು ನಿಮಗೆ ನೋವಾಗುವುದು.

ವೃಶ್ಚಿಕ ರಾಶಿ :ಯಾರಾದರೂ ನಿಮ್ಮನ್ನು ತಪ್ಪಾಗಿ ಗ್ರಹಿಸಿ ಅಪವಾದ ಹೇಳಬಹುದು. ಒಳ್ಳೆಯ ಕಾರ್ಯಗಳು ನಿಮ್ಮನ್ನು ಕಾಪಾಡಬಹುದು. ಇಂದು ಸಾಮಾಜಿಕ ಕಾರ್ಯಗಳಿಂದ ಸಂತೋಷವೂ ಹೊಸತನವೂ ನಿಮಗೆ ಸಿಗಲಿದೆ. ಕಛೇರಿಯ ಕಿರಿಕಿರಿಯಿಂದ‌ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಉತ್ಸಾಹವನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು.

ಧನು ರಾಶಿ :ಹಣವನ್ನು ನಿಮ್ಮ ಕೈಯಲ್ಲಿ ಇರಿಸಿಕೊಳ್ಳುವುದು ಬೇಡ. ಹೇಗಾದರೂ ಖರ್ಚಾಗಬಹುದು. ಹಿರಿತನವನ್ನು ಉಳಿಸಿಕೊಳ್ಳುವಂತೆ ನಡೆದುಕೊಳ್ಳಬೇಕು. ಇಂದು ಸಹಾಯ ಮಾಡುವ ನಿಮ್ಮ ನಿರಂತರ ಅಭ್ಯಾಸಕ್ಕೆ ನಿಮಗೆ ದಣಿವಾಗಬಹುದು. ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನೂ ಮಾಡುವಿರಿ. ನಿಮ್ಮ ವ್ಯವಹಾರದಲ್ಲಿ ಲೆಕ್ಕವು ತಪ್ಪಾಗಿ ನೀವು ಹಣವನ್ನು ಕಳೆದುಕೊಳ್ಳಬಹುದು. ಸ್ನೇಹಿತರ ಜೊತೆ ಎಲ್ಲಿಗಾದರೂ ಹೋಗಬೇಕು ಎನಿಸುವುದು. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ.

ಮಕರ ರಾಶಿ :ನಿಮ್ಮಿಂದ ತಪ್ಪಾದರೆ ಮತ್ತೆಲ್ಲರೂ ಅದನ್ನೇ ಅನುಸರಿಸುವರು. ಇಂದಿನ ನಿಮ್ಮ‌ ತೀರ್ಮಾನವು ಯೋಗ್ಯವಾಗಿ ಇರುವುದು. ನೀವು ಇಂದು ಅನಗತ್ಯ ವಾದಗಳಿಗೆ ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವದರ ಜೊತೆ ಹೆಸರೂ ಹಾಳಾಗುವುದು. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ. ಸಮಾರಂಭಗಳಿಗೆ ಆಹ್ವಾನ ಬರಬಹುದು.

ಕುಂಭ ರಾಶಿ :ದೇಹವು ಉತ್ಸಾಹದ ಕಾರ್ಯಕ್ಕೆ ಮುಂದಾಗದು. ಇಂದು ನಿಮ್ಮ ಉದಾರತೆಯು ಖರ್ಚಿನಿಂದ ಆರಂಭವಾಗುವುದು. ಇಂದು ಖರೀದಿಸಬೇಕಾದ ವಸ್ತಗಳು ಬಹಳ ಇರಲಿವೆ. ನಿಮಗೆ ವಹಿಸಿದ ಕಾರ್ಯದಲ್ಲಿ ಪ್ರಯತ್ನವು ಪೂರ್ಣವಾಗಿರಲಿ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತೆ ಪಡುವುದು ಬೇಡ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಕಾರಣಾಂತರಗಳಿಂದ ಬೇರೆ ಕಡೆ ವಾಸ ಮಾಡುವ ಸಂದರ್ಭವು ಬರಬಹುದು.

ಮೀನ ರಾಶಿ :ಕೆಲವನ್ನು ಸಹಿಸಿಕೊಳ್ಳುವುದೊಂದೇ ಮಾರ್ಗವಾಗಬಹುದು. ನಿಮ್ಮ ದಕ್ಷತೆಗೆ ಗೌರವ ಸಿಗಲಿದೆ. ಇಂದು ನಿಮ್ಮ ಸಂತೋಷದ ಕ್ಷಣಗಳನ್ನು ನೀವೇ ಸೃಷ್ಟಿಸಿಕೊಳ್ಳುವಿರಿ. ಮೋಹದ ಕಾರಣದಿಂದ ನಿಮ್ಮವರ ತಪ್ಪನ್ನು ಹೇಳಲು ನೀವು ತಯಾರಿರುವುದಿಲ್ಲ. ನಿಮ್ಮ ಪ್ರಾಮುಖ್ಯ ಕಡಿಮೆಯಾಗಿದ್ದು ಅರಿಯಬಹುದು. ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು