Sat. Dec 28th, 2024

Romantic Kiss: ರೊಮ್ಯಾಂಟಿಕ್‌ ಕಿಸ್‌ ಮಾಡಲು ಹೋಗಿ ಅನಾರೋಗ್ಯಕ್ಕೀಡಾದ ಯುವತಿ – ಆಕೆ ಬದುಕುಳಿದಿದ್ದೇ ಪವಾಡ!!! – ಅಷ್ಟಕ್ಕೂ ಆಕೆಗೆ ಬಂದ ರೋಗ ಯಾವುದು ಗೊತ್ತಾ?!

Romantic Kiss: (ಡಿ.18) ಚಲನಚಿತ್ರ ನಿರ್ಮಾಪಕಿ ಫೋಬೆ ಕ್ಯಾಂಪ್‌ಬೆಲ್-ಹ್ಯಾರಿಸ್ (28) ಅವರ ಜೀವನದಲ್ಲಿ ರೋಮ್ಯಾಂಟಿಕ್‌ ಕಿಸ್‌ ಒಂದು ಸಾವಿನ ಹತ್ತಿರ ಕರೆದುಕೊಂಡು ಹೋಗಿದೆ. ಒಂದು ʼಮುತ್ತುʼ ವಿಷವಾಗಿ ಆಕೆಗೆ ಪರಿಣಮಿಸಿದೆ. ಕಿಸ್‌ನಿಂದ ತೀವ್ರವಾದ ಅಲರ್ಜಿ ಪ್ರತಿಕ್ರಿಯೆ ಉಂಟಾಗಿ, ರೋಮ್ಯಾಂಟಿಕ್ ಕಿಸ್ ತನ್ನ ಜೀವನವನ್ನು ಹೇಗೆ ನರಕಕ್ಕೆ ತಳ್ಳಿತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ : ಅಪಘಾತದಲ್ಲಿ ಗಂಭೀರ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ಮಾಡಿದ್ದ ಶಿಕ್ಷಕಿ ಭಾರತಿ ನಿಧನ

18 ನೇ ವಯಸ್ಸಿನಲ್ಲಿ, ಪ್ಯಾರಿಸ್ ನೈಟ್‌ಕ್ಲಬ್‌ನಲ್ಲಿ ಭೇಟಿಯಾದ ವ್ಯಕ್ತಿಯನ್ನು ಚುಂಬಿಸಿದ್ದು, ಮತ್ತು ನಂತರ ಆಕೆಯ ಮೈಮೇಲೆ ಅಲರ್ಜಿ ಉಂಟಾಗಿದೆ. ಅನಾಫಿಲ್ಯಾಕ್ಟಿಕ್ ಎಂಬ ಅಲರ್ಜಿ ಆಕೆಗೆ ಕೂಡಲೇ ಕಾಡಿದೆ. ಆಕೆಯ ಮುಖ ಮತ್ತು ಕುತ್ತಿಗೆಯ ಮೇಲೆ ದದ್ದುಗಳನ್ನು ಕ್ಷಣ ಮಾತ್ರದಲ್ಲಿ ಮೂಡಿತು.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ತಾನು ರೊಮ್ಯಾಂಟಿಕ್ ಕ್ಷಣವನ್ನು ಹಂಚಿಕೊಂಡ ಫ್ರೆಂಚ್ ಹುಡುಗ ಕಿಸ್‌ ಕೊಡುವ ಮೊದಲು ಆತ ಕಡಲೆಬೀಜವನ್ನು ತಿಂದಿದ್ದು, ಇದು ಆಕೆಗೆ ತೀವ್ರ ಅಲರ್ಜಿಯನ್ನು ಉಂಟು ಮಾಡಿತು ಎಂಬುವುದು ಅನಂತರ ತಿಳಿದು ಬಂದಿದೆ.

ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಈಕೆ, ಪಾರ್ಟಿಯಲ್ಲಿ ಓರ್ವನನ್ನು ಚುಂಬಿಸಿದ ನಂತರ ಅನಾಫಿಲ್ಯಾಕ್ಟಿಕ್ ಅಲರ್ಜಿಗೆ ಒಳಗಾಗಿದ್ದಾಳೆ. ತನ್ನದೇ ಆದ ಭಯಾನಕ ಅನುಭವವನ್ನು ನೆನಪಿಸಿಕೊಳ್ಳುತ್ತಾ, ಫೋಬೆ, ನಾವು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ.

ಅನಾಫಿಲ್ಯಾಕ್ಸಿಸ್ ಒಂದು ಮಾರಣಾಂತಿಕ ಅಲರ್ಜಿಯ ಪ್ರತಿಕ್ರಿಯೆಯಾಗಿದ್ದು, ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ಮಾರಕವಾಗಬಹುದು. NHS ಪ್ರಕಾರ, ರೋಗಲಕ್ಷಣಗಳು “ಸಾಮಾನ್ಯವಾಗಿ ನೀವು ಆಹಾರ, ಔಷಧಿ ಅಥವಾ ಕೀಟಗಳ ಕುಟುಕುಗಳಂತಹ ಅಲರ್ಜಿಯೊಂದಿಗೆ ಸಂಪರ್ಕಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ ಪ್ರಾರಂಭವಾಗುತ್ತವೆ” ಎಂದು ಸರ್ರೆ ಲೈವ್ ವರದಿ ಮಾಡಿದೆ.

ಗಂಟಲು ಅಥವಾ ನಾಲಿಗೆಯ ಊತ, ಉಸಿರಾಟ ಅಥವಾ ನುಂಗಲು ತೊಂದರೆಗಳು, ಸುಸ್ತು ಅಥವಾ ಮೂರ್ಛೆ, ಮತ್ತು ಚರ್ಮವು ನೀಲಿ, ಬೂದು ಅಥವಾ ತೆಳು ಬಣ್ಣಕ್ಕೆ ತಿರುಗುವುದು, ಆರೋಗ್ಯ ಸೇವೆಯನ್ನು ಎತ್ತಿ ತೋರಿಸುತ್ತದೆ.

Leave a Reply

Your email address will not be published. Required fields are marked *