ಮೇಷ ರಾಶಿ: ನೀವಾಗಿಯೇ ನಿಮ್ಮ ಸ್ಥಾನವನ್ನು ಹೇಳಿ, ಮುಗ್ಗರಿಸುವಿರಿ. ನೀವು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳುವುದು ಕಷ್ಟವಾದೀತು. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ಅತಿಯಾದ ಕೋಪವನ್ನು ನಿಯಂತ್ರಿಸಿದ್ದು ನಿಮ್ಮ ಅನುಭವಕ್ಕೆ ಬರಬಹುದು. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು.
ವೃಷಭ ರಾಶಿ: ಇಷ್ಟದ ವಸ್ತುವಿನ ಪ್ರಾಪ್ತಿಯ ಸಂತೋಷವಿದ್ದರೂ ಖರ್ಚಿನ ನೋವು ನಿಮ್ಮನ್ನು ಕಾಡಬಹುದು. ಮಾತಿಗೆ ಮಾತು ಬೆಳೆಯಬಹುದು. ಅದನ್ನು ನಿಭಾಯಿಸುವ ಕಲೆ ಗೊತ್ತಿರಲಿ. ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು. ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ.
ಮಿಥುನ ರಾಶಿ: ಹೊಸ ಬಾಂಧವ್ಯವನ್ನು ಬೆಳೆಸುವ ಪ್ರಯತ್ನ ಮಾಡುವಿರಿ. ಇಂದು ಸಹೋದರನ ನಡತೆ ನಿಮಗೆ ಸಂಶಯ ತರಿಸಬಹುದು. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು. ತಪ್ಪನ್ನು ಸರಿಮಾಡಿಕೊಳ್ಳುವ ಮಾರ್ಗದಲ್ಲಿ ಯೋಚನೆ ಇರಲಿ.
ಕರ್ಕಾಟಕ ರಾಶಿ; ಉದ್ಯೋಗದಲ್ಲಿ ಹೇಗಾದರೂ ಪ್ರಗತಿಯನ್ನು ಕಾಣುವ ಮನಸ್ಸಾಗುವುದು. ಯಾರದೋ ಯೋಜನೆಯನ್ನು ನೀವು ಬಳಸಿಕೊಳ್ಳಬಹುದು. ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯ ಸಿಗಲಿದೆ. ನಿಮ್ಮ ಶ್ರಮವು ದುರುಪಯೋಗವಾಗುವುದು. ಅಪರಿಚಿತ ವ್ಯಕ್ತಿಗಳ ಜೊತೆ ವ್ಯಾಪರ ಸಂಬಂಧವು ಬರುವುದು. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು.
ಸಿಂಹ ರಾಶಿ: ಎಂದೋ ಮಾಡಿದ ಅಲ್ಪ ಶುಭಕಾರ್ಯವೂ ನಿಮಗೆ ಇಂದು ಫಲ ಕೊಡುವುದು. ಅನಪೇಕ್ಷಿತ ಮಾತನ್ನು ಬಿಡುವುದು ಒಳ್ಳೆಯದು. ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆ ಇದೆ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ಕೃಷಿಯಲ್ಲಿ ಲಾಭವನ್ನು ಪಡೆಯಲು ಹೆಚ್ಚಿನ ಓಡಾಟ ಮಾಡಬೇಕಾಗುವುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು.
ಕನ್ಯಾ ರಾಶಿ: ತೊಂದರೆಗಳನ್ನು ನಿವಾರಿಸುತ್ತಲೇ ಸಮಯ ಕಳೆದುಹೋಗುವುದು. ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ಇಂದು ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ಅವಿಶ್ರಾಂತ ಕಾರ್ಯದಿಂದ ಮನಸ್ಸಿಗೆ ತೊಂದರೆ ಸಾಧ್ಯ. ಅಪರಿಚಿತ ಕರೆಗಳು ನಿಮಗೆ ಹಿಂಸೆಯನ್ನು ಕೊಡಬಹುದು.
ತುಲಾ ರಾಶಿ: ಆತ್ಮರಕ್ಷಣೆ ಮೊದಲು, ಅನಂತರ ಮುಂದಿನದ್ದು. ಇಂದು ನಿಮ್ಮ ಎಂತಹ ಎಚ್ಚರಿಕೆಯೂ ಹಾದಿ ತಪ್ಪಿಸೀತು. ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕಾರ್ಯದಲ್ಲಿ ನೀವು ತೊಡಗಿಗೊಳ್ಳಿ. ಖಾಲಿ ಇರುವುದು ಬೇಡ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ಶತ್ರುಗಳಿಂದ ನಿಮಗೆ ಆಗಬೇಕಾದ ಕಾರ್ಯವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ.
ವೃಶ್ಚಿಕ ರಾಶಿ: ಸ್ವ ಉದ್ಯಮಕ್ಕೆ ಸಮಯ ಕೊಡುವುದು ಕಷ್ಟವಾಗಬಹುದು. ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ನಿಗದಿತ ಸಮಯಕ್ಕೆ ಕೆಲಸವಾಗದೇ ಇರುವ ಕಾರಣ ಕೆಲಸವನ್ನು ಕೊಟ್ಟವರು ನಿಮ್ಮ ಮೇಲೆ ಮುನಿಸಿಕೊಂಡಾರು.
ಧನು ರಾಶಿ: ನ್ಯಾಯಾಲಯದಲ್ಲಿ ಜಯ ಸಿಕ್ಕರೂ ಅದನ್ನು ಪಡೆಯುವ ಬಗೆ ನಿಮಗೆ ಅರಿಯದಾಗದು. ಎರಡು ದೋಣಿಯಲ್ಲಿ ಕಾಲು ಹಾಕಿ ಸಾಗಲಾಗದು. ಖರ್ಚನ್ನು ನಿಭಾಯಿಸುವ ಕೌಶಲವನ್ನು ಅನುಭವಿಗಳಿಂದ ಪಡೆಯಬೇಕು. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಗೊಂದಲ ಬರಬಹುದು. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು. ಹೇಗಾದರೂ ಬರುವ ಹಣದಲ್ಲಿ ಉಳಿತಾಯ ಮಾಡಿಕೊಳ್ಳಿ.
ಮಕರ ರಾಶಿ: ವಾಹನದಿಂದ ನಿಮಗೆ ಭೀತಿಯಾಗುವ ಸಾಧ್ಯತೆ ಹೆಚ್ಚು. ಜಾಣ ಕಿವುಡುತನವನ್ನು ತೋರಿಸುವಿರಿ. ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಸಾಲವನ್ನು ಮಾಡಬೇಕಾಗಿಬರಬಹುದು. ಅಪರಿಚಿತರ ಜೊತೆ ವಿವಾದಕ್ಕೆ ಎಡೆಮಾಡಿಕೊಡುವಿರಿ. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ನಿಮ್ಮ ಸ್ವಭಾವವನ್ನು ಮರೆಮಾಚುವುದು ಕಷ್ಟಸಾಧ್ಯ. ಅಚಾತುರ್ಯದಿಂದ ತಪ್ಪು ನಡೆಯಬಹುದು.
ಕುಂಭ ರಾಶಿ: ಆಲಸ್ಯದ ಮನೋಭಾವದಿಂದ ಆಗಬೇಕಾದ ಕಾರ್ಯಗಳು ಆಗದೇಹೋಗಬಹುದು. ಸ್ಥಿರಾಸ್ತಿಯಿಂದ ಕೆಲವು ಲಾಭಗಳೂ ಆಗಲಿವೆ. ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ಆಸ್ತಿಯನ್ನು ಪಡೆಯುವ ಬಗ್ಗೆ ಉತ್ಸಾಹವಿರಲಿದೆ. ಸುಲಭವಾಗಿ ದೊರೆಯುವುದನ್ನು ಇಂಸು ಇಷ್ಟಪಡುವುದಿಲ್ಲ. ಒಂಟಿತನವು ನಿಮಗೆ ಅಭ್ಯಾಸವಾಗಲಿದ್ದು ನಿಶ್ಚಿಂತೆಯಿಂದ ಇರುವಿರಿ.
ಮೀನ ರಾಶಿ: ಅಮೂಲ್ಯವಾದ ವಸ್ತುಗಳನ್ನು ಕೇವಲ ಮಾತಿನ ಮೇಲೆ ಖರೀದಿ ಮಾಡುವುದು ಬೇಡ. ಪರೀಕ್ಷಿಸಿ ಪಡೆದುಕೊಳ್ಳಿ. ಕೆಡುಕಿನ ಆಲೋಚನೆಯಿಂದಲೇ ನೀವು ದೂರವಾಗುವುದು ಉತ್ತಮ. ನಿಮಗೆ ಸಿಗುವ ಕೆಲವು ಜವಾಬ್ದಾರಿಗಳಲ್ಲಿ ಹಿನ್ನಡೆಯಾಗಲಿದೆ. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು. ವ್ಯಾಪಾರದಲ್ಲಿ ಶತ್ರುಗಳು ಕಾಣಿಸಿಕೊಳ್ಳುವರು. ಸಂಗಾತಿಗೆ ನಿಮ್ಮ ವಾಸ್ತವದ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಆಕಸ್ಮಿಕವಾಗಿ ಸ್ನೇಹಿತರಿಂದ ಉಡುಗೊರೆ ಸಿಗಲಿದೆ. ಧಾರ್ಮಿಕ ಶ್ರದ್ಧೆಯಿಂದ ಅನುಕೂಲತೆ ಇರಲಿದೆ.