ಬಂಟ್ವಾಳ :(ಡಿ.19) ಕ್ರೀಡೆ ಅನ್ನೋದು ಮನಸ್ಸು ಮತ್ತು ಆರೋಗ್ಯವನ್ನು ವೃದ್ಧಿ ಮಾಡಲು ಇರುವ ಸುಲಭ ಸಾಧನವಾಗಿದೆ. ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ಕ್ರೀಡೆ ಸಂಸ್ಕೃತಿ ಮೂಲಕ ಮನೆ ಹಾಗೂ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದು ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ವಕೀಲೆ ಶೈಲಜ ರಾಜೇಶ್ ಹೇಳಿದರು.
ಇದನ್ನೂ ಓದಿ: ಮಂಗಳೂರು: ಭಾರೀ ಮಾದಕ ದ್ರವ್ಯ ಜಾಲ ಪತ್ತೆ ಹಚ್ಚಿದ ಕಾವೂರು ಪೊಲೀಸರು.!!
ಅವರು ಗುರುವಾರ ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟ 2024-25 ರ ಧ್ವಜಾರೋಹಣ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗೊಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಪ್ರೇಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಮ್ಯೂಸಿಯಂ ಮಾಲಕ ಮಹಮ್ಮದ್ ಯಾಸಿರ್ ಮಕ್ಕಳ ಪತ ಸಂಚಲನದ ಗೌರವ ದೀಕ್ಷೆ ಸ್ವೀಕಾರ ಮಾಡಿ, ಸ್ವಚ್ಛತೆ ಹಾಗೂ ಶಿಸ್ತಿಗೆ ಕಲ್ಲಡ್ಕ ಶಾಲಾ ಮಕ್ಕಳು ಮಾದರಿ ಆಗಿದ್ದಾರೆ ಅಂದರು.
ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ರೈ ಕ್ರೀಡಾ ಜ್ಯೋತಿಯ ಪ್ರಜ್ವಲನೆ ಮಾಡಿ ಕ್ರೀಡಾಕೂಟ ಯಶಸ್ವಿ ಆಗಲಿ ಎಂದು ಶುಭ ಹಾರೈಸಿದರು.
ಮಕ್ಕಳಿಂದ ಪಥಸಂಚಲನೆ, ವಿವಿಧ ಕ್ರೀಡಾ ಸಾಂಸ್ಕೃತಿಕ, ಶಾರೀರಿಕ ಪ್ರದರ್ಶನ ಕಾರ್ಯಕ್ರಮಗಳು ಜರಗಿತು.
ಈ ಸಂದರ್ಭದಲ್ಲಿ ರಾಜ್ಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ಶಾಲಾ ಮಕ್ಕಳಾದ ಯಶ್ವಿತ್ , ರಿಶಾಂತ್, ಮೊಹಮ್ಮದ್ ನಿಪಾಲ್, ಶಮ್ರಿಬ್, ದೀಕ್ಷಾ ಪ್ರಭು,ದೃತಿ, ಮನ್ವಿ, ಯವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ಎ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಲ್ಲಡ್ಕ ಶಾಲಾ ಶತಮಾನೋತ್ಸವ ಬೆಳ್ಳಿಹಬ್ಬ ಸಮಿತಿ ಮಾಜಿ ಅಧ್ಯಕ್ಷ ನಾಗೇಶ್ ಕೆ, ಗೊಳ್ತಮಜಲ್ ಗ್ರಾಮ ಪಂಚಾಯತ್ ಸದಸ್ಯರುಗಳಾದ ರಾಜೇಶ್ ಕೊಟ್ಟಾರಿ, ಅಬ್ದುಲ್ ಹಮೀದ್, ಯೂಸುಫ್ ಹೈದರ್, ಶಾಲಾ ಹಿರಿಯ ವಿದ್ಯಾ ಸಂಘದ ಅಧ್ಯಕ್ಷ ಯತಿನ್ ಕುಮಾರ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್ ವಿ ಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಸೂದನ್ ಐತಾಳ್ , ಉಪಾಧ್ಯಕ್ಷರಾದ ಚಂದನ್ ಜೈನ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್ ಸ್ವಾಗತಿಸಿ, ಶಿಕ್ಷಕಿ ಪವಿತ್ರ ಸನ್ಮಾನಿತರ ಪಟ್ಟಿ ವಾಚಿಸಿ, ಶಿಕ್ಷಕಿ ಸಿಂಥಿಯಾ ಮಾರ್ಟಿಸ್ ವಂದಿಸಿ, ಶಿಕ್ಷಕಿ ಸೌಮ್ಯ ಎ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.