Sat. Apr 19th, 2025

Belthangady: ಧರ್ಮಸ್ಥಳ-ಮಂಗಳೂರು ವೇಗದೂತ ಬಸ್ಸಿನ ಬೇಡಿಕೆ – ರಾಜ್ಯ ಸಾರಿಗೆ ಅಧಿಕಾರಿಗಳನ್ನು ಭೇಟಿಯಾದ SDPI ನಿಯೋಗ

ಬೆಳ್ತಂಗಡಿ:(ಡಿ.19) ದಿನಂಪ್ರತಿ ಮಂಗಳೂರಿಗೆ ಉದ್ಯೋಗಕ್ಕೆ ಹೋಗುವ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೌಕರ್ಯವಿಲ್ಲದ ಕಾರಣ ಅನಾನುಕೂಲವಾಗಿದ್ದು, ಇದನ್ನು ನಿವಾರಿಸಲು ಧರ್ಮಸ್ಥಳದಿಂದ ಬಿ.ಸಿ ರೋಡ್ ಮಂಗಳೂರು ಮಾತ್ರ

ಇದನ್ನೂ ಓದಿ: ಮಂಗಳೂರು: ಬ್ಯಾಂಕ್ ಸಾಲದ ಕಿರುಕುಳ,ನೊಂದು ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ ಪ್ರಕರಣ

ನಿಲುಗಡೆ ಇರುವ ವೇಗದೂತ ಬಸ್ಸುಗಳನ್ನು ಪ್ರಾರಂಭಿಸಿ ಸುಮಾರು ವರ್ಷಗಳಿಂದ ಇರುವ ಪ್ರಯಾಣಿಕರು ಒತ್ತಾಯಿಸುತ್ತಿದ್ದು, ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಬಸ್‌ ಸೌಲಭ್ಯ ಕಲ್ಪಿಸಿ ನೆರವಾಗಬೇಕು ಎಂದು

ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ಕ್ಷೇತ್ರ ಸಮಿತಿ ನಿಯೋಗ ರಾಜ್ಯ ಸಾರಿಗೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾ ನಾಯಕರಾದ ನವಾಝ್ ಕಟ್ಟೆ, ಹನೀಫ್ ಪುಂಜಾಲಕಟ್ಟೆ, ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಉಜಿರೆ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಆಲಿ, ಚಾರ್ಮಾಡಿ ಪಂಚಾಯತ್ ಸದಸ್ಯರಾದ ಸಿದ್ಧಿಕ್ ಯು.ಪಿ, ಕ್ಷೇತ್ರ ನಾಯಕರಾದ ಅಶ್ರಫ್ ಚಾರ್ಮಾಡಿ, ಸಹಲ್ ನಿರ್ಸಾಲ್, ಮರ್ಷದ್ ಉಜಿರೆ ಉಪಸ್ಥಿತರಿದ್ದರು.

ಮಂಗಳೂರು ಧರ್ಮಸ್ಥಳ ಮಾರ್ಗದಲ್ಲಿ ಹೆಚ್ಚುವರಿ ವೇಗದೂತ ಬಸ್ ಹಾಗೂ ರಾಜಹಂಸ ಬಸ್ ಹಾಕಿ ಆದಷ್ಟು ಬೇಗ ಪ್ರಯಾಣಿಕರ ಬಸ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.

Leave a Reply

Your email address will not be published. Required fields are marked *