ಮಲ್ಪೆ:(ಡಿ.19) ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಯಲ್ಲಿ ಮೀಟಿಂಗ್ ರೂಮ್‌ನಲ್ಲಿ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ರೂಮ್ ಸಂಪೂರ್ಣ ಸುಟ್ಟು ಹೋಗಿದೆ.
ಇದನ್ನೂ ಓದಿ: ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವ ಇತಿಹಾಸ ಸೃಷ್ಟಿಸಲಿದೆ : ಬಿ. ಜನಾರ್ದನ ಪೂಜಾರಿ
ಕಚೇರಿ ತೆರೆದಾಗಲೇ ವಿಷಯ ಬೆಳಕಿಗೆ ಬಂದಿದ್ದು, ಉರಿಯುತ್ತಿದ್ದ ಅವಶೇಷಗಳನ್ನು ಅಗ್ನಿಶಾಮಕ ದಳದವರು ನಂದಿಸಿದ್ದಾರೆ. ರೂಮ್‌ನೊಳಗಿದ್ದ ಹವಾನಿಯಂತ್ರಕ ಯಂತ್ರ ಸ್ಫೋಟಗೊಂಡಿದ್ದು,
ರೂಮ್‌ನ ಒಳಗಿದ್ದ ಎಲ್ಲ ಕಡತಗಳು ಸುಟ್ಟು ಬೂದಿಯಾಗಿವೆ. ಫ್ಯಾನ್, ಚಯರ್, ಟೇಬಲ್, ಲೈಫ್‌ಬಾಯ್, ಲೈಫ್ಜಾಕೆಟ್, ಸೇರಿದಂತೆ ಪಾರ್ಟಿಶನ್ ಗೋಡೆ ಸಂಪೂರ್ಣ ಹಾನಿಯಾಗಿದೆ. ಬೆಂಕಿ ಇತರ ಕೋಣೆಯನ್ನು ಆವರಿಸಿದರೆ ಈ ಕಟ್ಟಡ ಪೂರ್ತಿ ಬೆಂಕಿಗಾಹುತಿಯಾಗುತ್ತಿತ್ತು ಎನ್ನಲಾಗಿದೆ.
ದಟ್ಟವಾದ ಹೊಗೆ ಕಟ್ಟಡದ ಎಲ್ಲ ಕೋಣೆಗಳನ್ನು ಆವರಿಸಿದ್ದು, ಗೋಡೆ ಕಪ್ಪು ಬಣ್ಣಕ್ಕೆ ತಿರುಗಿದೆ. ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಗೆ ದೂರು ನೀಡಲಾಗಿದೆ.